ಪ್ರತಿಭಾ ಕಾರಂಜಿ/ಕಲೋತ್ಸವ ಸ್ಪರ್ಧೆಯಲ್ಲಿ ತಾಲೂಕಾ ಮಟ್ಟಕ್ಕೆ ಆಯ್ಕೆ

ತಾಳಿಕೋಟೆ:ಸೆ.17:ಪಟ್ಟಣದ ಸರ್ವಜ್ಞ ವಿದ್ಯಾಪೀಠ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಾಳಿಕೋಟಿ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ/ಕಲೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 ಗುರುವಾರರಂದು ವಿ.ಕೆ.ಹಜೇರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರ್ವಜ್ಞ ವಿದ್ಯಾಪೀಠ ಪ್ರಾಥಮಿಕ ಶಾಲೆಯ ಕು.ಓಂಕಾರ ಗಣೇಶ ಸಂಬಾಳ ಹಾಸ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಸ್ಪಂದನಾ ಸಂಗಮನಾಥ ಶೆಟ್ಟಿ ಭಕ್ತಿಗೀತೆಯಲ್ಲಿ ಪ್ರಥಮ ಸ್ಥಾನ, ಮಮತಾಜ ರಂಜಾನ ದೊಡಮನಿ ಹಿಂದಿ ಕಂಠಪಾಠದಲ್ಲಿ ದ್ವಿತೀಯ ಸ್ಥಾನ, ಖುಷಿ ಬಸವರಾಜ ಪಾಟೀಲ ಚಿತ್ರಕಲೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ವಿರೇಶ ಶಂಕ್ರಪ್ಪ  ಚೌದ್ರಿ ಛದ್ಮವೇಶದಲ್ಲಿ ದ್ವಿತೀಯ ಸ್ಥಾನ, ಸುರಭಿ ಶಂಕರಗೌಡ ಪಾಟೀಲ ಲಘುಸಂಗೀತದಲ್ಲಿ ತೃತೀಯ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.    
   ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ಮುಖ್ಯಗುರುಗಳಾದ ಸಂತೋಷ ಪವಾರ, ರಾಜು ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ಬಸವರಾಜ ಸವದತ್ತಿ, ರುದ್ರಗೌಡ ಮಾಲಿಪಾಟೀಲ, ರವಿಕುಮಾರ ಮಲ್ಲಾಬಾದಿ, ಶಿವಲೀಲಾ ಚುಂಚುರ, ಶಿವಲಿಲಾ ಕೆಂಭಾವಿ, ರೇಣುಕಾ ಮಸರಕಲ್ಲ, ಭಾರತಿ, ರೂಪಾ ಪಾಟೀಲ, ರಸುಲಸಾ ತುರಕನಗೇರಿ ಹಾಗೂ ಸರ್ವ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.