ಪ್ರತಿಭಾ ಕಾರಂಜಿಯಿಂದ ಪ್ರತಿಭೆಗಳ ಪರಿಚಯ

Bellary SanjevaniAttachments12:03 PM (2 hours ago)
to me


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.09: ಗ್ರಾಮೀಣ ಪ್ರತಿಭೆಗಳು ಎಲೆಮರೆಯ ಕಾಯಿಯಂತೆ ಇದ್ದು, ಪ್ರತಿಭಾ ಕಾರಂಜಿಯಂತಹ ವೇದಿಕೆಯ ಮೂಲಕ ಮಗುನಿನ ಪ್ರತಿಭೆ ಅನಾವರಣಗೊಳ್ಳಬೇಕು ಎಂದು ಸಿರುಗುಪ್ಪ ತಾಲ್ಲೂಕು ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನಗೌಡ ಪಾಟೀಲ್ ಹೇಳಿದರು.
 ತಾಲ್ಲೂಕಿನ ಹಳೇಕೋಟೆ ಗ್ರಾಮದ  ಶ್ರೀವೀರಭದ್ರೇಶ್ವರ ವಿದ್ಯಾ ಮಂದಿರದಲ್ಲಿ ನಡೆದ ತೆಕ್ಕಲಕೋಟೆ ವಲಯದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು  ಉದ್ವಾಟಿಸಿ ಮಾತನಾಡಿದರು.
 ಎಸ್ ಬಿ ಆರ್ ಪಿ ಯೋಗಾನಂದಯ್ಯ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕ ಸದಾಕಲಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ 25 ಶಾಲೆಗಳಿಂದ 500 ಮಕ್ಕಳು ಪಾಲ್ಗೂಂಡು ಕಂಠಪಾಠ, ಕಥೆ ಹೇಳುವುದು, ಚಿತ್ರಕಲೆ, ರಂಗೋಲಿ, ಭರತನಾಟ್ಯ, ಜಾನಪದ ನೃತ್ಯ, ಕವಾಲಿ, ಕ್ವಿಜ್  ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
 ಇ ಸಿ ಒ ಪಂಪಾಪತಿ ಹೆಚ್ , ಕೆ ಬಿ ಆರ್ ಪಿ ಗಜೇಂದ್ರ , ರುದ್ರವೇಣಿ ಬಿ ಆರ್ ಪಿ, ವೀರೇಶ್ , ಸಿ ಆರ್ ಪಿ ಮಹಮದ್ ಫಯಾಜ್, ವಿಜಯನಗರ ವಿದ್ಯಾ ಸಂಸ್ಥೆ ಅಧ್ಯಕ್ಷ ಹೆಚ್ ಶರಬಣ್ಣಗೌಡ, ಬಿ ನಾಗಪ್ಪ ಮುಖ್ಯಗುರು ಎ ಸುಲೋಚನ  ಇದ್ದರು.

One attachment • Scanned by Gmail