
ಇಲಕಲ್ಲ: ಆ.26:2023-24 ನೇ ಸಾಲಿನ ನಂದವಾಡಗಿ ಪ್ರೌಢಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿ ವಿದ್ಯಾರ್ಥಿನಿಯರು ಅತ್ಯುತ್ತಮವಾಗಿ ಸಾಧನೆ ಮಾಡಿ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹಿರಿಯರ ವಿಭಾಗದಲ್ಲಿ ಕುಮಾರಿ ಅಪೂರ್ವ ಕಟಗಿ, ಭಾಗ್ಯವಂತಿ ಕಾಜಗಾರ, ಕವಿತಾ ಕೆ, ದುರ್ಗಾ ಮಾದರ, ಸುನಿತಾ ಫಲದಿನ್ನಿ ಹುಲಿಗೆಮ್ಮ ಮಾದರ ಪ್ರಥಮ ಸ್ಥಾನ ಗಳಿಸಿ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹತ್ತಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರು ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ.
ಪ್ರತಿಭಾ ಕಾರಂಜಿಯಲ್ಲಿ ಅಮೋಘ ಸಾಧನೆ ಮಾಡಿದ ಭಾಗವಹಿಸಿ ಪ್ರಶಸ್ತಿ ಪಡೆದ ಎಲ್ಲಾ ವಿದ್ಯಾರ್ಥಿನಿಯರಿಗೆ ಶಾಲೆಯ ಪ್ರಭಾರಿ ಮುಖ್ಯ ಗುರುಮಾತೆ ಶ್ರೀಮತಿ ವಿ ಬಿ ಕುಂಬಾರ, ಸಹ ಶಿಕ್ಷಕರಾದ ಶ್ರೀಮತಿ ಜ್ಯೋತಿ, ಜಿ ಆರ್ ನದಾಫ್, ಬಸವರಾಜ ಬಲಕುಂದಿ, ಡಾ. ವಿಶ್ವನಾಥ ತೋಟಿ ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿನಿಯರು ಅಭಿನಂದಿಸಿದ್ದಾರೆ.