ಪ್ರತಿಭಾವಂತ ವಿದ್ಯಾರ್ಥಿ ಚರಣ್‌ಗೆ ಸನ್ಮಾನ

ಕೋಲಾರ,ಜೂ,೧೦- ನಗರದ ಪತ್ರಕರ್ತರ ಭವನದಲ್ಲಿ ಸ್ವರ್ಣಭೂಮಿ ಫೌಂಡೇಷನ್ ಹಮ್ಮಿಕೊಂಡಿದ್ದ ವಚನ ವೈಭವ ೩ನೇ ವರ್ಷದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆ ಕನ್ನಡ ಮಾದ್ಯಮದಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿಕಲಚೇತನ ಪ್ರತಿಭಾವಂತ ವಿದ್ಯಾರ್ಥಿ ಕೆ.ಸಿ. ಚರಣ್ ರವರನ್ನು ನಾಗಲಾಪುರ ವೀರ ಸಿಂಹಾಸನ ಸಂಸ್ಥಾನ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ರವರು ಸನ್ಮಾನಿಸಿದರು.
ಪ್ರತಿಭಾವಂತ ವಿದ್ಯಾರ್ಥಿ ಕೆ.ಸಿ.ಚರಣ್‌ಗೆ ಸಮಾಜ ಸೇವಕರಾದ ಪರ್ವತ್ ಸ್ಪೋರ್ಟ್ಸ್‌ನ ಎಂ.ಆನಂದರೆಡ್ಡಿರವರು ೫೦೦೧ ಹಾಗೂ ಗಮನ ಶಾಂತಮ್ಮನವರು ೨೦೦೧ ರೂ ಪ್ರೋತ್ಸಾಹಧನವನ್ನು ನೀಡಿದರು.
ಈ ಸಂದರ್ಭದಲ್ಲಿ ಕಸಾಪ ಗೌರವಾಧ್ಯಕ್ಷ ಟಿ.ಸುಬ್ಬರಾಮಯ್ಯ, ಕಸಾಪ ಗೌರವ ಕಾರ್ಯದರ್ಶಿ ಕೆ.ಎಸ್.ಗಣೇಶ್, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿ.ಲಕ್ಷ್ಮಯ್ಯ, ಸ್ವರ್ಣಭೂಮಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಕುಮಾರ್, ರಂಗಭೂಮಿ ನಿರ್ದೇಶಕ ಡಾ.ಇಂಚರ ನಾರಾಯಣಸ್ವಾಮಿ, ರೋಟರಿ ವಲಯ ರಾಜ್ಯಪಾಲ ಎಚ್.ರಾಮಚಂದ್ರಪ್ಪ, ಚುಸಾಪ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ, ಡಾ|| ಪೋಸ್ಟ್ ನಾರಾಯಣಸ್ವಾಮಿ ಹಾಗೂ ನಿವೃತ್ತ ಎಎಸ್‌ಐ ಕೆ.ಎನ್.ರವೀಂದ್ರನಾಥ್, ಪೋಷಕರಾದ ಪತ್ರಕರ್ತ ಚಂದ್ರು, ರಮ್ಯಾ, ಮತ್ತಿತರರು ಉಪಸ್ಥಿತರಿದ್ದರು.