ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಷ್ಕಾರ, ಸನ್ಮಾನ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.19 : ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಸಾರ್ವಜನಿಕರು ತಪ್ಪು ತಿಳಿದುಕೊಂಡಿದ್ದಾರೆ, ಹಲವಾರು ಜನ ಸಾಧಕರು ತಮ್ಮ ಶೈಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ, ಜೊತೆಗೆ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉತ್ತಮವಾದ ಸಾಮಾನ್ಯ ಜ್ಞಾನವನ್ನು ಹೊಂದಿರುವ ಉದಾಹರಣೆ ಇದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲಯಲ್ಲಾಗಲಿ ಅಥವಾ ಯಾವುದೇ ಶಾಲೆಯಲ್ಲಾಗಲಿ ಸೇರಿಸಿ ಉನ್ನತ ಶಿಕ್ಷಣವನ್ನು ಕೊಡಿಸಬೇಕೆಂದು ಮಹಾಪೌರರಾದ ಬಿ ಶ್ವೇತ ಪಾಲಕರಿಗೆ ಕರೆ ನೀಡಿದರು.
ಅವರು ಇಂದು ಡಾ. ರಾಜ್‌ಕುಮಾರ್ ರಸ್ತೆಯ ಕನ್ನಡ ಭವನದಲ್ಲಿ ವಿಜಯನಗರ ಕರುನಾಡು ರಕ್ಷಣಾ ವೇದಿಕೆ ಮತ್ತು ವಿಜಯನಗರ ಕರ್ನಾಟಕರಾಜ್ಯ ಜನಸೇವಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಷ್ಕಾರ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗ ಕಲಾವಿದರಾದ ಗಾದಿಲಿಂಗನಗೌಡ ಇವರು ವಹಿಸಿ ಮಾತನಾಡಿ, ಗಡಿನಾಡಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಅತ್ಯಂತ ಮಹತ್ವದದ್ದಾದ ಹತ್ತನೆ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿರುವುದು ಶ್ಲಾಘನೀಯವಾದುದು, ಇದೇ ರೀತಿ ಪಿ.ಯು.ಸಿ ಯಲ್ಲಿ ಉತ್ತಮ ಅಂಗಕಗಳನ್ನು ಪಡೆದು ಉತ್ತಮವಾದ ಭವಿಷ್ಯವನ್ನು ರೂಫಿಸಿಕೊಳ್ಳಬೇಕು, ಈ ಕಾರ್ಯಕ್ರಮವನ್ನು ಹಮ್ಮಿಕೊಂಡ ವಿಜಯನಗರ ಕರುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ನಾರಾಯಣಸ್ವಾಮಿ ಮತ್ತು ತಂಡ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಇದೇ ರೀತಿಯಾಗಿ ಗಡಿಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆಯನ್ನು ಗುರಿತಿಸುವ ಕಾರ್ಯ ಮಾಡಬೇಕೆಂದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬಿ ರಾಘವೇಂದ್ರಮೋಹನ್ ಅಧ್ಯಕ್ಷರು, ಜಿಲ್ಲಾ ವಿಶ್ವ ಮತ್ತು ಮತ ವೆಲ್ಫೇರ್ ಫೌಂಡೇಶನ್ ಮಾತನಾಡುತ್ತಾ ಈ ದಿನ ಶ್ರೀ ಮದ್ವ ನವಮಿ ಪವಿತ್ರವಾದ ದಿನ ಮಧ್ವಾಚಾರ್ಯರು ಬದರಿಕಾಶ್ರಮ ಸೇರಿ ಅದೃಶ್ಯರಾದ ದಿನ ಹನುಮ ಭೀಮ ಮದ್ವತಾರ ಹೊಂದಿರುವ ಆಚಾರ್ಯರು ಇವರ ಪರಂಪರೆಯಲ್ಲಿ ಕನಕದಾಸರ ಪುರಂದರದಾಸರು ಗೋಪಾಲ ದಾಸರು ವಿಜಯದಾಸರು ಜಗನ್ನಾಥದಾಸರು ಮೈಸೂರಿನ ಗೋವಿಂದ ದಾಸರವರೆಗೆ ಕನ್ನಡದಲ್ಲಿ ಪದ ಪದ್ಯಗಳನ್ನು ರಚಿಸಿ ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ, ಇಂತಹ ಪುಣ್ಯದ ದಿನವೇ ಕರುನಾಡು ರಕ್ಷಣಾ ವೇದಿಕೆಯ ನಾರಾಯಣಸ್ವಾಮಿ ಅವರು ಪ್ರತಿಭಾ ಪುರಸ್ಕಾರ ಆಯೋಜಿಸಿದ್ದು ವಿದ್ಯಾರ್ಥಿ ಉನ್ನತ ಮಟ್ಟದಲ್ಲಿ ಅಧ್ಯಯನ ಮಾಡಬೇಕು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಬೇಕು ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಮುಂದುವರಿಯಬೇಕು ಅದೇ ಸಾಧನೆಯ ಮೈಲುಗಲ್ಲು ಸಮಾಜದ ಹಿರಿಯರಿಗೆ ತಂದೆ ತಾಯಿಯರಿಗೆ ಮುಖ್ಯವಾಗಿ ಗೌರವ ಪಳದಿರಲಿ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ ನಾಡು ನುಡಿ ಕನ್ನಡ ಭಾಷೆಗೆ ಆದ್ಯತೆ ಕೊಡಿ ನ್ಯಾಯಯುತ ಬದುಕಿಗೆ ಹೆಜ್ಜೆ ಹಾಕಿ ತಾಯಿ ಭುವನೇಶ್ವರಿ ಒಳ್ಳೆಯದನ್ನು ಮಾಡಲಿ ಎಂದು ರಾಘವೇಂದ್ರ ಮೋಹನ್ ವೇದಿಕೆಯ ಅಧ್ಯಕ್ಷ ನಾರಾಯಣಸ್ವಾಮಿಯವರನ್ನು ಶ್ಲಾಘಿಸಿದರು.
ವಿಜಯನಗರ ಕರುನಾಡು ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ನಾರಾಯಣಸ್ವಾಮಿ ಮಾತನಾಡಿ, ಗಡಿಭಾಗದ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮವಾದ ಸೌಲಭ್ಯಗಳಿಲ್ಲದಿದ್ದರೂ ಹೆಚ್ಚಿನ ಅಂಕಗಳನ್ನು ಪಡೆದು ಉತ್ತಮ ಸಾಧನೆಯನ್ನು ಮಾಡಿದ್ದಾರೆ, ಇದೇ ರೀತಿ ನಮ್ಮ ವೇದಿಕೆವತಿಯಿಂದ ಪ್ರತಿವರ್ಷ ಇಂತ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಲಿದೆ, ಅವರು ಚೆನ್ನಾಗಿ ಅಭ್ಯಾಸಿಸಿ ಉತ್ತಮವಾದ ಅಂಕಗಳನ್ನು ಗಳಿಸಿ ಉನ್ನತವಾದ ಹುದ್ದೆಗಳನ್ನು ಪಡೆಯಲು ನಮ್ಮ ವೇದಿಕೆಯಿಂದ ಎಲ್ಲಾ ರೀತಿಯ ಸಹಕಾರವನ್ನು ಮಾಡಲಾಗುವುದೆಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ ಓಬಳೇಶ್ ಪಿ, ದ್ವೀತೀಯ ಸ್ಥಾನವನ್ನು ಗಳಿಸಿದ ಕರಿಬಸಮ್ಮ ಮತ್ತು ತೃತೀಯ ಸ್ಥಾನವನ್ನು ಪಡೆದ ಮೋಹನ್ ಜೀ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು, ಮತ್ತು ಉನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಕರುನಾಡು ಸಿರಿಗನ್ನಡ ಪುರಸ್ಕಾರ ಪ್ರಶಂಸನಾ ಪತ್ರವನ್ನು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು
 ಈ ಸಂದರ್ಭದಲ್ಲಿ ಅಲೆಮಾರಿ ಸಂಘದ ರಾಜ್ಯಾಧ್ಯಕ್ಷ ಮಾರೆಪ್ಪ, ಕಪ್ಪಗಲ್ಲು ರಸೂಲ್ ಸಾಬ್, ವಕೀಲರಾದ ಬಿ ರಾಘವೇಂದ್ರ ಮೋಹನ್, ವೇದಿಕೆಯ ಪದಾಧಿಕಾರಿಗಳಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುನಿಲ್ ಕುಮಾರ್, ರಾಜ್ಯ ಕಾರ್ಯದರ್ಶಿ ಹನುಮಂತ, ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲುಕಂಬ ಲಕ್ಷö್ಮಣ, ತೊಗಲುಗೊಂಬೆ ಕಲಾವಿದ ಸುಬ್ಬಣ್ಣ ಸೇರಿದಂತೆ ಹಲವಾರು ವಿದ್ಯಾರ್ಥಿಗಳಿದ್ದರು.