ಕಲಬುರಗಿ:ಜೂ.23:ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಉತ್ತಮವಾದ ಗ್ರಂಥಗಳನ್ನು ನೀಡಿ ಪ್ರೋತ್ಸಾಹಿಸಬೇಕು. ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಪುಸ್ತಕಗಳಿಗಿದೆ ಎಂದು ಉಪನ್ಯಾಸಕ, ಚಿಂತಕ ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು. ಅವರು ಜೇವರ್ಗಿ ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಗ್ರಂಥಗಳನ್ನು ಮತ್ತು ಪೆನ್ನು ಕಾಣಿಕೆಯಾಗಿ ನೀಡಿ, ಮಾತನಾಡಿದ ಅವರು ವಿದ್ಯಾರ್ಥಿ ಜೀವನ ಬಹಳ ಮಹತ್ವ ಹಾಗೂ ಅಮೂಲ್ಯವಾದದು. ಜೀವನದಲ್ಲಿ ಗುರಿ ಮುಟ್ಟಬೇಕಾದರೆ ವಿದ್ಯಾರ್ಥಿ ದೆಸೆಯಿಂದಲೇ ಯೋಜನೆ ಹಾಕಿಕೊಳ್ಳಬೇಕು. ವಿದ್ಯಾರ್ಥಿಗಳ ತುಡಿತ ಸದಾ ಜ್ಞಾನಾರ್ಜನೆಯ ಕಡೆಗೆ ಇರಬೇಕು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕಲೆ, ಸಾಹಿತ್ಯ, ಸಾಂಸ್ಕøತಿಕ, ಪಠ್ಯೇತರ ಚಟುವಟಿಕೆ ಕಡೆಗೆ ಗಮನ ಹರಿಸಬೇಕು. ಆಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಏಕಾಗ್ರತೆ, ಪರಿಶ್ರಮದಿಂದ ಯಶಸ್ಸು ದೊರೆಯುತ್ತದೆ. ಗುರಿ ಸಾಧಿಸಲು ಸತತ ಪ್ರಯತ್ನ ಬೇಕು. ಜೀವನದಲ್ಲಿ ಸಮಯಕ್ಕೆ ಗೌರವ ನೀಡಿದರೆ ನಿಮಗೆ ಅದು ಗೌರವ ನೀಡುತ್ತದೆ. ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಾದ ಆಶಾ ಎಮ್, ತಾಯಮ್ಮ, ಸವಿತಾ ಎಮ್, ಲಕ್ಷ್ಮೀ, ಬಸಮ್ಮಾ, ದಾನೇಶ್ವರಿ, ಮೋನಿಕಾ, ಅಶ್ವಿನಿ, ಭಾಗ್ಯಶ್ರೀ, ಸಿದ್ದಣ್ಣ, ಸತ್ತರಸಾಬ ಸೇರಿ ಮುಂತಾದವರು ಹಾಜರಿದ್ದರು.