ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ

ಚಡಚಣ: ಅ 30: ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಚಡಚಣ ತಾಲ್ಲೂಕಿಗೆ ಗರಿಷ್ಠ ಅಂಕ ಪಡೆದ 3 ಜನ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪೆÇ್ರೀತ್ಸಾಹದಾಯಕವಾಗಿ ನೀಡಿದ ಲ್ಯಾಪ್ ಟಾಪ್ ಗಳನ್ನು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ ವಿತರಿಸಿದರು.
ಅರ್ಜನಾಳ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಕೇದಾರಲಿಂಗ ಪೂಜಾರಿ,ಕಪನಿಂಬರಿಗಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಆಕಾಶ ಮೋರೆ ಹಾಗೂ ಹತ್ತಳ್ಳಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಸಚಿನ್ ತಳವಾರ ಇವರಿಗೆ ಲ್ಯಾಪ್‍ಟಾಪ್ ವಿತರಣೆ ಮಾಡಲಾಯಿತು
ಲ್ಯಾಪ್ ಟ್ಯಾಪ್ ವಿತರಿಸಿ ಮಾತನಾಡಿದ ಬಿಇಓ ಟಿ.ಎಸ್.ಆಲಗೂರ ಅವರು,ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸರ್ಕಾರ ಶೈಕ್ಷಣಿಕ ಪ್ರಗತಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ,ಆರ್ಥಿಕ ಸೌಲಭ್ಯಗಳನ್ನೂ ನೀಡುತ್ತಿದೆ.ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು
ಪರೀಕ್ಷಾ ನೋಡೆಲ್ ಅಧಿಕಾರಿ ಎಂ.ಎಲ್.ಪಾಂಡ್ರೆ ಮಾತನಾಡಿ, ಕೋವಿಡ್ – 19 ಸಂದರ್ಭದಲ್ಲೂ ಪರೀಕ್ಷೆಯಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಪರೀವಿಕ್ಷಕ ಸಿ.ಎಂ.ಕೋರೆ,ಮುಖ್ಯಶಿಕ್ಷಕ ಎ.ಬಿ.ಪಾವಲೆ,ಕಮಲಾ ಮುರಾಳ,ಶಿಕ್ಷಣ ಸಂಯೋಜಕರಾದ ಎಸ್.ಐ.ಚನಗೊಂಡ,ಸಂಗಮೇಶ ಸೂರಜ್,ಬಿಆರ್.ಪಿ ಗಳಾದ ಶರಣು ಜೀರಂಕಲಗಿ,ಸತೀಶ ಬಗಲಿ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು,ವಿದ್ಯಾರ್ಥಿಗಳು ಪಾಲಕರು ಪಾಲ್ಗೊಂಡರು.