ಪ್ರತಿಭಾವಂತರ ಪರಿಚಯ ಸ್ಟುಡಿಯೋ ಆರಂಭ

ಪ್ರತಿಭಾವಂತರನ್ನು ಗುರುತಿ, ಪ್ರೊತ್ಸಾಹಿಸುವ ಕ್ರೀಮ್ ಕಲರ್ ಸ್ಟುಡಿಯೋ ಆರಂಭಗೊಂಡಿದೆ.
ನಿರ್ದೇಶಕ ನಂದಕಿಶೋರ್, ನಟಿಯರಾದ ಸಿಂಧು ಲೋಕನಾಥ್, ಸೋನುಗೌಡ, ಭಾವನಾ ರಾವ್ ಯಮುನಾ ಶ್ರೀನಿಧಿ, ಸಂಗೀತ ರಾಜೀವ್, ನಟ ಅರು ಗೌಡ, ಛಾಯಾಗ್ರಾಹಕ ಮನೋಹರ್ ಜೋಷಿ ಸೇರಿ ಹಲವರು ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದರು.
ಸ್ಟುಡಿಯೋ ನಾಡಿನ ಮಟ್ಟಿಗೆ ಬಲು ಅಪರೂಪದ್ದು, ಇಲ್ಲಿ ಎಲ್ಲವೂ ಸುಸಜ್ಜಿತವಾಗಿದೆ. ಫೋಟೋಗ್ರಫಿ, ವಿಡಿಯೋಗ್ರಫಿ ಮುಂತಾದವುಗಳಿಗೆ ಇದನ್ನು ಬಾಡಿಗೆಗೆ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುತ್ತಾರೆ ಸಂಸ್ಥಾಪಕ ಅನಿಲ್ ಆನಂದ್.
ಟಾಪ್ ಟು ಬಾಟಮ್ ಫ್ಯಾಶನ್, ಸ್ಟೈಲಿಂಗ್ ಸೇರಿದಂತೆ ಈ ಸ್ಟುಡಿಯೋ ಸರ್ವ ರೀತಿಯಲ್ಲಿ ಸಜ್ಜುಗೊಂಡಿದೆ.
ದೇಸಿ ಸೊಗಡಿನ ಕಾಸ್ಟ್ಯೂಮ್ಗಳ ಮೂಲಕ, ಕುಶಲಕರ್ಮಿಗಳಿಂದಲೇ ತಯಾರಾದ ವಿಶೇಷ ಬಟ್ಟೆಗಳ ಮೂಲಕವೇ ವಿಶಿಷ್ಟ ಶೋ ಅನಾವರಣ ಮಾಡಿದೆ. ಕುಶಲಕರ್ಮಿಗಳ ವಿನ್ಯಾಸ ಪರಿಚಯಿಸುವ ಮೂಲಕ ಮಾರುಕಟ್ಟೆ ಕಲ್ಪಿಸಿ, ಆ ಮೂಲಕ ಪ್ರತಿಭಾವಂತರನ್ನು ಫ್ಯಾಶನ್ ಲೋಕಕ್ಕೆ ಪರಿಚಯಿಸಿ ಬೆಳೆಸುವ ಸದುದ್ದೇಶ ಕ್ರೀಮ್ ಕಲರ್ಸ್ ಸ್ಟೂಡಿಯೋ ಸಂಸ್ಥಾಪಕರಿಗಿದೆ.
ತುಂಬಾ ಸೂಕ್ಷ್ಮವಾದ,ಪರಿಸರ ಸ್ನೇಹಿ ವಿನ್ಯಾಸಗಳು ಫ್ಯಾಶನ್ ಶೋನಲ್ಲಿ ಪ್ರದರ್ಶನಗೊಂಡಿವೆ.