ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಸರ್ಕಾರಿ ನೌಕರಿಗಳ ಕಡೆ ತಮ್ಮ ಗಮನವನ್ನು ಕೇಂದ್ರಿಕರಿಸದೆ ಉತ್ತಮ ಕ್ಷೇತ್ರಗಳ ಗಮನಹರಿಸಿಃ ಸಂಗಮೇಶ ಚೂರಿ

ವಿಜಯಪುರ, ಸೆ.8-ಪದವಿ ಪೂರೈಸಿ ಹೊರಬರುವ ಪ್ರತಿಭಾವಂತ ವಿದ್ಯಾರ್ಥಿನಿಯರು ಕೇವಲ ಸರ್ಕಾರಿ ನೌಕರಿಗಳ ಕಡೆ ತಮ್ಮ ಗಮನವನ್ನು ಕೇಂದ್ರಿಕರಿಸದೆ ಮಾಧ್ಯಮದಂತಹ ಆಕರ್ಷಕ ಹಾಗೊ ಉತ್ತಮ ವೇತನ ದೊರೆಯುವ ಕ್ಷೇತ್ರಗಳನ್ನು ಹುಡುಕಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಅಧ್ಯಕ್ಷರಾದ ಸಂಗಮೇಶ ಚೂರಿ ಇವರು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಅವರು ಸ್ಥಳೀಯ ಸಿಕ್ಯಾಬ್ ಸಂಸ್ಥೆಯ ಎ.ಆರ್.ಎಸ್ ಇನಾಮದಾರ ಮಹಿಳಾ ಮಹಾವಿದ್ಯಾಲಯ ಹಾಗೂ ಇಂಗ್ಲೀಷ ಸ್ನಾತಕೋತ್ತರ ಕೇಂದ್ರದ ವಾರ್ಷಿಕ ಸ್ನೇಹಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು ಯಾವದೆ ಸಾಧನೆಗೆ ಸತತ ಪರಿಶ್ರಮ ಶ್ರದ್ಧೆ, ಏಕಾಗ್ರತೆ ಅತ್ಯವಶ್ಯವಾಗಿದ್ದು ತರಗತಿ ಉಪನ್ಯಾಸಗಳನ್ನು ಗಮನವಿಟ್ಟು ಆಲಿಸುವದು ಕೂಡ ಪ್ರಮುಖವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಇಂಗ್ಲಂಡ್‍ನ ತಜ್ಞವೈದ್ಯ ಡಾ. ಶುಜಾವುದ್ದೀನ ಪುಣೇಕರ ಮಾತನಾಡಿ ನಿಮ್ಮ ಆಲೋಚನೆ ಉನ್ನತ ಮಟ್ಟದ್ದಾಗಿದ್ದರೆ ನೀವು ಎತ್ತರಕ್ಕೆ ಹೋಗಲು ಸಾಧ್ಯ ಎಂದು ನುಡಿದರು, ಒಂದೂವರೆ ಬಿಲಿಯನ್ ಭಾರತೀಯರಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿದ್ದು ಜಗತ್ತನ್ನು ಮುನ್ನಡಿಸುವ ಸಾಮಥ್ರ್ಯ ಅವರಲ್ಲಿ ಹೇರಳವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಮುಂದಿನ ತಲೆಮಾರಿನ ಯೋಗ್ಯ ಮತ್ತು ಸಮರ್ಥ ಶಿಕ್ಷಕರ ಅವಶ್ಯಕತೆ ಹೆಚ್ಚಿಗಿದೆ ಎಂದು ಪ್ರತಿಪಾದಿಸಿದರು .
ಸಮಾರಂಭದಲ್ಲಿ ಉಪಸ್ಥಿತರದ್ದ ಖ್ಯಾತ ಮೂಳೆ ಹಾಗೂ ನೋವು ನಿವಾರಕ ತಜ್ಞ ಡಾ. ನಜೀರ್ ಅಹ್ಮದ ಕೂಡ್ಲಿಗಿ ಮಾತನಾಡಿ ವಿದ್ಯಾರ್ಥಿನಿಯರು ತಮ್ಮ ಶಕ್ತಿ ಸಾಮಥ್ರ್ಯಗಳಲ್ಲಿ ನಂಬಿಕೆಯಿಟ್ಟು ಕೆಲಸ ಮಾಡಿದರೆ ಯಾವದೇ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ ಎಂದರು ಪ್ರತಿಯೊಂದು ಕುಟುಂಬದ ಸುಖ ಸಂತೋಷಕ್ಕೆ ಮಹಿಳೆಯರ ಕೂಡುಗೆ ಅಪಾರ ಎಂದು ಶ್ಲಾಘಿಸಿದರು.
ಸಿಕ್ಯಾಬ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎ.ಎಸ್. ಪಾಟೀಲ ಮಾತನಾಡಿ ಸಿಕ್ಯಾಬ್ ಸಂಸ್ಥೆಯ ದೂರದೃಷ್ಟಿಯ ಫಲವಾಗಿ
ಅವಿಭಜಿತ ವಿಜಾಪೂರ ಜಿಲ್ಲೆಯಲ್ಲಿ ಕಳೆದ ಐದು ದಶಕಗಳಲ್ಲಿ ಮಹಿಳಾ ಕಾಲೇಜು, ಮಹಿಳಾ ವಿ.ವಿ ಸ್ಥಾಪನೆಗೆ ಒತ್ತು ಕೆಟ್ಟಿದ್ದನ್ನು ವಿವರಿಸಿದರು ಕಾಲೇಜು, ಆಡಳಿತ ಮಂಡಳಿಯ ಚೆರ್ಮನ ರಿಯಾಜ್ ಫಾರೂಖಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿನಿಯು ಸಾಮಾಜಿಕ ಪಿಡುಗು, ಮತೀಯ ಕಲಹ, ಹಿಂಸೆ ಇವುಗಳನ್ನು ತೂಡಿದುಹಾಕಲು ಶ್ರಮಿಸಬೇಕು ಎಂದು ಕರೆ ನೀಡಿದರು. ಪ್ರಜ್ಞಾವಂತರು ಮಾತ್ರ ಯಾವಾಗಲೂ ಸತ್ಯದ ಪರ ನಿಲ್ಲುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಂ.ಎ. ಇಂಗ್ಲೀಷ ವಿಭಾಗದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದ ಕು. ಪ್ರಿಯಾಂಕ ಲೋಣಿ. ಬಿಎ ವಿಭಾಗದಲ್ಲಿ ವಿ.ವಿ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಕು. ಗಿರಿಜಾ ಮೂಡಲಗಿ ಹಾಗೂ ಬಿ.ಕಾಂ. ನಲ್ಲಿ ಮೂರನೆಯ ರ್ಯಾಂಕ ವಿಜೇತ ವಿದ್ಯಾರ್ಥಿನಿ ಕು. ಫಾತಿಮಾ ಸುತಾರ ಇವರನ್ನು ನಗದು ಬಹುಮಾನ ನೀಡಿ ಕಾಲೇಜು ಹಾಗೂ ಸಿಕ್ಯಾಬ್ ಸಂಸ್ಥೆಗಳು ಸನ್ಮಾನಿಸಿದವು. ಶೈಕ್ಷಣಿಕ ಸಾಧನೆ ಮಾಡಿದ ಫ್ರಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಸಾಂಸೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಪ್ರಶಸ್ತಿಗಳನ್ನು ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನ ಮಾಡಲಾಯಿತು ಡಾ.ಸಿ.ಎಲ್. ಪಾಟೀಲ ವಾರ್ಷಿಕ ವರದಿ ಪ್ರಸ್ತುತಪಡಿಸಿದರು ಪವಿತ್ರ ಕುರಾನ್ ಹಾಗೂ ಭಗವದ್ಗೀತೆಯ ಪಠಣದೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಚಾರ್ಯ ಪ್ರೊ ಮನೋಜ ಕೂಟ್ನಿಸ್ ಸ್ವಾಗತಿಸಿದರು. ಪ್ರೊ ಎಚ್.ಕೆ. ಯಡಹಳ್ಳಿ ಅತಿಥಿಗಳನ್ನು ಪರಿಚಯಿಸಿದರು ಡಾ. ಮಲ್ಲಿಕಾರ್ಜುನ ಮೇತ್ರಿ ಡಾ. ಎಸ್.ಎಚ್. ಮಲಘಾಣ ಪ್ರೊ ಗಂಗಾಧರ ಭಟ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನೆರವೇರಿಸಿದರು ಡಾ. ಹಾಜಿರಾ ಪರವೀನ್ ಮತ್ತು ಕು. ಮಾಹಿನ್ ಖಾಜಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಕಾಲೇಜಿನ ಉಪಪ್ರಾಚಾರ್ಯರಾದ ಪ್ರೊ ಜೊಹರಾ ತಬಸ್ಸುಮ್ ಖಾಜಿ ವಂದಿಸಿದರು.