ಪ್ರತಿಭಟಿಸಿ: ಎಚ್ಚರಿಕೆ


ಲಕ್ಷ್ಮೇಶ್ವರ,ಆ.13: ತಾಲೂಕಿನ ಬಾಲೆಹೊಸೂರು ಗ್ರಾಮದ ಮೂರು ಕೆರೆಗಳನ್ನು ತುಂಬಿಸಲು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮಧ್ಯದ ಶೀತಲ ಸಮರದಿಂದಾಗಿ ಕೆರೆಗಳಿಗೆ ನೀರು ಬಾರದಿರುವುದನ್ನು ಖಂಡಿಸಿ ಬಾಲೆಹೊಸೂರು 3 ಕೆರೆ ಹೋರಾಟ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಸವರೆಡ್ಡಿ ಹನುಮರೆಡ್ಡಿ ಅವರು ಆಗಸ್ಟ್ 16 ರಿಂದ ಗ್ರಾಮದಲ್ಲಿ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು 2014-15ರಲ್ಲಿ ಗ್ರಾಮದ ಮೂರು ಕೆರೆಗಳನ್ನು ತುಂಬಿಸಲು ಅಂದಿನ ಶಾಸಕರಾಗಿದ್ದ ರಾಮಕೃಷ್ಣ ದೊಡ್ಡಮನಿಯವರು 9 ಕೋಟಿ 45 ಲಕ್ಷ ರೂಪಾಯಿ ವೆಚ್ಚದಲ್ಲಿ ವರ್ಧಾ ನದಿಯಿಂದ ಕೆರೆ ತುಂಬಿಸುವ ಯೋಜನೆಗೆ ಮಂಜೂರಾತಿ ಪಡೆದುಕೊಂಡು ಕೆಲಸ ಆರಂಭ ಮಾಡಲಾಗಿತ್ತು.
ಈಕೆರೆಯ ಕಾಮಗಾರಿ ಮುಗಿದು ಮೇ ತಿಂಗಳಲ್ಲಿ ಪ್ರಾಯೋಗಿಕವಾಗಿ ಕೆಳಗೆ ನೀರು ಸಹ ಬಿಡಲಾಗಿತ್ತು ಆದರೆ ಕಳೆದ ವರ್ಷ ವಿಪರೀತವಾದ ಮಳೆಯಿಂದ ಕೆರೆಕಟ್ಟಿಗಳು ತುಂಬಿದ್ದವು ಆದರೆ ಪ್ರಸ್ತುತ ವರುಷ ಮಳೆಗಳು ಕೈಕೊಟ್ಟಿದ್ದರಿಂದ ಮೂರು ಕೆರೆಗಳು ನೀರಿಲ್ಲದೆ ಜನ ಜಾನುವಾರುಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತಂತೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನು ಪ್ರಶ್ನಿಸಿದಾಗ ಗುತ್ತಿಗೆದಾರರು ಈ ಕಾಮಗಾರಿಯನ್ನು ಇಲಾಖೆಗೆ ಹಸ್ತಾಂತರಿಸಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ ಆದರೆ ಗುತ್ತಿಗೆದಾರರು ತಮಗೆ ಬರಬೇಕಾದ ಬಾಕಿಯನ್ನು ನೀಡುವವರೆಗೂ ಯಾವುದೇ ವಿಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಹನುಮ ರೆಡ್ಡಿ ಹೇಳಿದರು.
ಇವರಿಬ್ಬರ ಶೀತಲ ಸಮರದಲ್ಲಿ ಗ್ರಾಮದ ಮೂರು ಕೆರೆಗಳು ಬಡವಾಗಿದ್ದು ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿರುವವರು ಈಗಾಗಲೇ ಗ್ರಾಮದ ಹಿರಿಯರು ಮುಖಂಡರು ಬಾಲೆ ಹೊಸೂರು ನಿಂದ ಲಕ್ಷ್ಮೇಶ್ವರವರೆಗೂ ಪಾದಯಾತ್ರೆ ಕೈಗೊಂಡು ಆಗ್ರಹಿಸಿದ ನಂತರ ಕಾಮಗಾರಿತುಕೊಂಡಿದ್ದರು ಈಗ ಎಲ್ಲವೂ ಮುಗಿದಿದ್ದರೂ ನೀರು ಮರೀಚಿಕೆಯಾಗಿದೆ ಎಂದು ಹೇಳಿದ್ದಾರೆ.
ಆಗಸ್ಟ್ 16ರೊಳಗಾಗಿ ಸಣ್ಣ ನೀರಾವರಿ ಇಲಾಖೆಯವರು ಕೆರೆಗೆ ನೀರು ಬಿಡದಿದ್ದರೆ ರಸ್ತೆ ಕಡೆ ನಡೆಸಿ ಕೆರೆ ತುಂಬಿಸುವವರೆಗೂ ಹೋರಾಟ ಮಾಡುವುದಾಗಿ ಶನಿವಾರ ಕರೆಯಲಾಗಿದ್ದ ಕಾರ್ಯಾಲಯದಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜು ಬೆಂಚಳ್ಳಿ ಕರಿಯಪ್ಪ ಸಾಂದಲಿ ಹನುಮಂತಪ್ಪ ಸವನೂರ ಜಗದೀಶ್ ಜೋಗೆರ ಸದ್ದಾಂ ಹಲಗಿ ನಿಂಗಪ್ಪ ಜಟ್ಟಣ್ಣನವರ ಸೇರಿದಂತೆ ಅನೇಕರಿದರು.