
ಕೆಂಭಾವಿ :ಜ.17: ಕೋಲಿ, ಕಬ್ಬಲಿಗ, ಅಂಬಿಗೇರ, ಬೇಸ್ತ ಸಮುದಾಯದವರನ್ನು ಪರಿಶಿಷ್ಟ ಪಂಗಡ (ಎಸ್.ಟಿ) ವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಇದೇ ಜನೇವರಿ 18 ರಂದು ಯಾದಗಿರಿದಲ್ಲಿ ನಡೆಯಲಿರುವ ಎಸ್.ಟಿ ಗಾಗಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದ್ದು. ಈ ಒಂದು ಬೃಹತ್ ಪ್ರತಿಭಟನೆಯಲ್ಲಿ ಯಾದಗಿರಿ ಜಿಲ್ಲೆಯ ಎಲ್ಲಾ ತಳವಾರ ಪರಿವಾರ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಬಾಂಧವರಿಗೆ ಎಸ್.ಟಿ ಗೆ ಸೇರ್ಪಡೆ ಮಾಡಲು ಬೆಂಬಲಿಸಬೇಕು ಎಂದು ಯಾದಗಿರಿ ಜಿಲ್ಲಾ ತಳವಾರ ಸಮಾಜದ ಮುಖಂಡರಾದ ದೊಡ್ಡಪ್ಪ ತಳವಾರ ಮುದನೂರ ಮನವಿ ಮಾಡಿಕೊಂಡಿದ್ದಾರೆ.