
ಬೆಂಗಳೂರು,ಫೆ.೨೩-ರಾಜ್ಯ ಅನುದಾನಿತ ಶಾಲಾ ಶಿಕ್ಷಕರಿಂದ ಪಿಂಚಣಿಗಾಗಿ ನಗರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟವಧಿ ಪ್ರತಿಭಟನೆಗೆ ಬಂದಿದ್ದ ಶಿಕ್ಷಕರೊಬ್ಬರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ತಲೆಕೊಟ್ಟು ನಿನ್ನೆ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರಿನ ಗಣಿತ ಶಿಕ್ಷಕ ಶಂಕರಪ್ಪ ಬೋರಡ್ಡಿ(೪೭) ಆತ್ಮಹತ್ಯೆ ಮಾಡಿಕೊಂಡವರು.
ರಾಜ್ಯ ಅನುದಾನಿತ ಶಾಲಾ ಶಿಕ್ಷಕರಿಂದ ಫ್ರೀಡಂ ಪಾರ್ಕ್‌ನಲ್ಲಿ ಪಿಂಚಣಿಗಾಗಿ ನಡೆಯುತ್ತಿರುವ ಅನಿರ್ದಿಷ್ಟವಧಿ ಪ್ರತಿಭಟನೆಯಲ್ಲಿ ನಿನ್ನೆ ಸಂಜೆವರೆಗೆ ಭಾಗಿಯಾಗಿ ತಾನು ತಂಗಿದ್ದ ಶಿಕ್ಷಕರ ಸದನದ ರೂಂನಲ್ಲೆ ಬ್ಯಾಗ್ ಇಟ್ಟು ರೈಲ್ವೆ ನಿಲ್ದಾಣಕ್ಕೆ ಬಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕ್ಷಕ ಶಂಕರಪ್ಪ ಬೋರಡ್ಡಿ ಮೃತದೇಹ ಊರಿಗೆ ರವಾನಿಸಲಾಗಿದ್ದು ಶಾಲಾ ಶಿಕ್ಷಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಸಿಟಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.