ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸಲು ಡಿಜಿ ಸಲಹೆ

ಭಾಲ್ಕಿ:ನ.18:ರೋಟರಿ ಒಂದು ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು,ಕ್ಲಬ್‍ನ ಸದಸ್ಯರು ಸಮಾಜದ ಬಡ ವರ್ಗದವರ ಕಲ್ಯಾಣಕ್ಕಾಗಿ ನಿಸ್ವಾರ್ಥತತೆಯಿಂದ ಮತ್ತು ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸಿ,ರೋಟರಿ ಕ್ಲಬ್‍ನ ಘನತೆ ಹೆಚ್ಚಿಸಬೇಕು ಎಂದು
ಜಿಲ್ಲಾ ರೋಟರಿ ಗವರ್ನರ್ ವೋಮಿನಾ ಸತೀಶ ಬಾಬು ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ರೋಟರಿ ಕ್ಲಬ್‍ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಲ್ಕಿ ರೋಟರಿ ಕ್ಲಬ್‍ನ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪೊಲಿಯೋ ಮುಕ್ತ ಭಾರತ ಮಾಡಿದ ಕೀರ್ತಿ ರೋಟರಿ ಕ್ಲಬ್‍ಗೆ ಸಲ್ಲುತ್ತದೆ.ನಿಯಮಿತ ಅನುದಾನದಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣ,ಸಾಕ್ಷರತೆ ಪ್ರಮಾಣ ವೃದ್ಧಿಸುವುದು ,ಪರಿಸರ ಮಾಲಿನ್ಯ ತಡೆಗಟ್ಟುವುದು ,ದಿನಗೂಲಿ ಕಾರ್ಮಿಕರಿಗೆ,ಬೀಕ್ಷುಕರಿಗೆ ಅಭಯಹಸ್ತ ನೀಡುವುದರೊಂದಿಗೆ ಜನಸಂಖ್ಯೆ ನಿಯಂತ್ರಣ,ರಸ್ತೆ ಸುರಕ್ಷತಾ,ಸಸಿ ನೆಡುವಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ,ವಿವಿಧ ಸಮುದಾಯದವರಲ್ಲಿ ಸ್ನೇಹಪರ,ಆರೋಗ್ಯಕರ ವಾತಾವರಣ ಸೃಷ್ಠಿಸುವ ಹೊಣೆಗಾರಿಕೆ ಕ್ಲಬ್ ಸದಸ್ಯರ ಮೇಲಿದೆ . ಭಾಲ್ಕಿ ರೋಟರಿ ಕ್ಲಬ್‍ನವರು ಮಹಾಮಾರಿ ಕೊರೊನಾ ಸಂಕಟದ ಸಮಯದಲ್ಲಿ ಸಾರ್ವಜನಿಕರಿಗೆ ನೆರವು ನೀಡಿದ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಸಹಾಯಕ ಗವರ್ನರ್ ರವಿ ಮುಲಗೆ ಹಾಗು ರೋಟರಿ ಅನುದಾನ ಸಮಿತಿಯ ಅಧ್ಯಕ್ಷ ಹಾವಶೆಟ್ಟಿ ಪಾಟೀಲ್ ರೋಟರಿ ಪ್ರಾಮುಖ್ಯತೆ ಕುರಿತು ಮಾತನಾಡಿದರು.
ಡಾ.ಅಮೀತ ಅಷ್ಟೂರೆ,ನ್ಯಾಯವಾದಿಗಳಾದ ಉಮಾಕಾಂತ ವಾರದ,ಸಾಗರ ನಾಯಕ್,ಡಾ.ನಿತೀನ ಪಾಟೀಲ್ ಕಳೆದ ಸಾಲಿನಲ್ಲಿ ರೋಟರಿ ಮಾಡಿದ ಕಾರ್ಯಗಳ ಮಾಹಿತಿ ಸಭೆಗೆ ನೀಡಿದರು.
ಸನ್ಮಾನ:ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್‍ಗೆ ಸೇರ್ಪಡೆಯಾದ ನೂತನ ಸದಸ್ಯ ನ್ಯಾಯವಾದಿ ಬಸವರಾಜ ಪಾಟೀಲ್ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಥಮ ಮಹಿಳಾ ರೋಟರಿಯನ್ ಭಾನುಮತಿ ಸತೀಶ ಬಾಬು,ರೋಟರಿ ಪ್ರಾದೇಶಿಕ ಸಹಾಯಕ ಕಾರ್ಯದರ್ಶಿ ಡಾ.ವಸಂತ ಪವಾರ,ತಾಲೂಕು ಕಾರ್ಯದರ್ಶಿ ಅಶ್ವೀನ ಭೋಸ್ಲೆ,ಡಾ.ಶೈಲಜಾ ತಳವಾಡೆ,ಡಾ.ಯುವರಾಜ ಜಾಧವ,ನ್ಯಾ.ಸಂಜಯನಾಯಕ್,ಸೋಮನಾಥ ಮುದ್ದಾ,ಡಾ.ವಿಲಾಸ ಕನಸೆ,ಶಾಂತವೀರ ಸಿರ್ಗಾಪೂರೆ,ಡಾ.ಶಶಿಕಾಂತ ಭೂರೆ,ಯೋಗೇಶ ಅಷ್ಟೂರೆ,ಜೈಕಿಶನ ಬಿಯಾಣಿ,ಸಂಜೀವಕುಮಾರ ಪಂಡರಗೆರೆ,ಡಾ.ವಿಕ್ರಮ ದೇವಪ್ಪ,ಡಾ.ಶ್ರೀರಂಗ ಬಿರಾದಾರ,ಡಾ.ವಿಜಯಕುಮಾರ ರಾಠೋಡ,ಡಾ.ರಾಹುಲ ರಾಜೂರೆ ಸೇರಿದಂತೆ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕು ರೋಟರಿ ಅಧ್ಯಕ್ಷ ಡಾ.ಪ್ರಭು ಕೋಟೆ ಸ್ವಾಗತಿಸಿದರು.ಪ್ರಾಚಾರ್ಯ ಅಶೋಕ ರಾಜೋಳೆ ನಿರೂಪಿಸಿದರು.ರೋಟರಿ ಕೋಶಾಧ್ಯಕ್ಷ ಡಾ.ಗುಂಡೆರಾವ ಶೆಡೋಳೆ ವಂದಿಸಿದರು.