ಪ್ರತಿನಿತ್ಯ ಅನ್ನದಾಸೋಹ ನಡೆಸುತ್ತಿರುವುದು ಶ್ಲಾಘನೀಯ

ದಾವಣಗೆರೆ,ಮೇ.29: ಅನ್ನದಾಸೋಹ ಪವಿತ್ರವಾದ ಕೆಲಸ. ಕೊರೊನಾ ಸೋಂಕಿತರಿಗೆ ಪ್ರತಿನಿತ್ಯ ಅನ್ನದಾಸೋಹ ಮಾಡುವ ಮೂಲಕ ತರಳುಬಾಳು ಸೇವಾ ಸಂಸ್ಥೆ ಹಾಗೂ ಶಿವಸೇನೆ ಯುವಕರ ಸಂಘ ಪುಣ್ಯದ ಕಾರ್ಯ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಪಾರ್ವತಮ್ಮ ಶಿವಶಂಕರಪ್ಪ ಕಲ್ಯಾಣ ಮಂದಿರ ಭೇಟಿ ನೀಡಿ ಆಹಾರ ತಯಾರಿಸುವುದನ್ನು ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿತರನ್ನು ಕಂಡರೆ ಕಿ.ಮೀ. ದೂರ ಸರಿಯುವ ಈ ಸಂದರ್ಭದಲ್ಲಿ ಯುವಕರು ಸೇರಿ ಸೋಂಕಿತರಿಗೆ ಅನ್ನದಾಸೋಹ ಮಾಡಿ ಅವರನ್ನು ಆರೋಗ್ಯವಂತರನ್ನಾಗಿ ಮಾಡುತ್ತಿರುವುದು ಉತ್ತಮ ಕಾರ್ಯ ಎಂದರು.
ನೀವು ಮಾಡುತ್ತಿರುವ ಸಮಾಜಮುಖಿ ಕಾರ್ಯ ನಮ್ಮ ಅಂಗಡಿಯಿAದಲೇ ಪ್ರಾರಂಭಿಸಿದ್ದಿರಿ ಎಂಬ ಮಾಹಿತಿ ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಸೇವಾ ಕಾರ್ಯ ಕೋವಿಡ್ ಮುಗಿಯುವವರೆಗೂ ನಡೆಯಬೇಕು. ಇದಕ್ಕೆ ಬೇಕಾದ ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ. ಒಂದು ಲೋಡ್ ಅಲ್ಲ, ಎರಡು ಲೋಡ್ ಅಕ್ಕಿ ಕೊಡುತ್ತೇನೆ ಎಂದು ತಿಳಿಸಿದರು.ನಮ್ಮ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಉಚಿತವಾಗಿ ಲಸಿಕೆ ನೀಡಲು ವ್ಯಾಕ್ಸಿನ್ ಕಂಪನಿಯೊAದಿಗೆ ಚರ್ಚೆ ನಡೆಸಿದ್ದೇವೆ. ಅವರು 1 ಸಾವಿರ ಬಾಟಲ್ ಲಸಿಕೆ ಕೊಡಲು ಒಪ್ಪಿದ್ದಾರೆ.ಇದರಲ್ಲಿ 10 ಸಾವಿರ ಜನರಿಗೆ ಲಸಿಕೆ ಹಾಕಬಹುದು. ಮುಂದಿನಗಳಲ್ಲಿ ಲಸಿಕೆ ಬಂದ ತಕ್ಷಣವೇ ನಮ್ಮ ಆಸ್ಪತ್ರೆಯ ಐದು ವೈದ್ಯರ ತಂಡದೊAದಿಗೆ ಸಾರ್ವಜನಿಕರಿಗೆ ಉಚಿತವಾಗಿ ಹಾಕಿಸಲಿದ್ದೇವೆ. ಇತ್ತೀಚೆಗೆ ಪಾಲಿಕೆ ಸದಸ್ಯರೊಬ್ಬರು ಚೀಟಿ ಕೊಟ್ಟು ಲಸಿಕೆ ಹಾಕಿಸುವುದನ್ನು ಪತ್ರಿಕೆಯಲ್ಲಿ ಓದಿದ್ದೇನೆ. ಈ ರೀತಿ ಯಾರೂ ಮಾಡಬಾರದು. ಇಂತಹ ಕೆಲಸ ಇವನಿಗೆ ಹಾಕಿ, ಅವನು ಸಾಯಲಿ ಎಂಬAತಾಗುತ್ತದೆ. ಹೀಗಾಗಿ ಇಂತಹ ಪ್ರಯತ್ನ ಯಾರೂ ಮಾಡಬರದು.ಪ್ರತಿಯೊಬ್ಬ ರಿಗೂ ಲಸಿಕೆ ಹಾಕಿಸುವ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.
ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಮಹಾನಗರಪಾಲಿಕೆ ಮೇಯರ್ ಎಸ್.ಟಿ.ವೀರೇಶ್, ಶ್ರೀನಿವಾಸ್ ಹಾಗೂ ತರಳುಬಾಳು ಸೇವಾ ಸಂಸ್ಥೆ , ಶಿವಸೇನೆಯ ಪದಾಧಿಕಾರಿಗಳು ಇದ್ದರು.