ಪ್ರತಿದಿನ 200 ರೋಗಿಗಳಿಗೆ ಉಪಹಾರ

ಕಲಬುರಗಿ,ಜೂ.8-ನಗರದ ಇಎಸ್ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 200 ಜನ ಕೋವಿಡ್ ರೋಗಿಗಳಿಗೆ ಡಾ.ಸುಧಾ ಆರ್.ಹಾಲಕಾಯಿ ಅವರು ಕಳೆದ 20 ದಿನಗಳಿಂದ ಪ್ರತಿದಿನ ಉಪಹಾರ, ನೀರಿನ ಬಾಟಲಿ ವಿತರಿಸುತ್ತಿದ್ದಾರೆ.
ಇದಲ್ಲದೆ ಕಳೆದ 10-12 ದಿನಗಳಿಂದ ಇಎಸ್ಐಸಿ ಆಸ್ಪತ್ರೆ ಆವರಣದಲ್ಲಿರುವ ಕೋವಿಡ್ ರೋಗಿಗಳ ಸಂಬಿಧಿಕರಿಗೂ ಸಹ ಸ್ಲೀಪಿಂಗ್ ಮ್ಯಾಟ್, ಬಕೆಟ್ ಮತ್ತು ಮಗ್ಗುಗಳನ್ನು ವಿತರಿಸಿದರು. ಸ್ಲೀಪಿಂಗ್ ಮ್ಯಾಟುಗಳನ್ನು ಇನ್ಫೋಸಿಸ್ ಮತ್ತು ರಾಮಕೃಷ್ಣ ಆಶ್ರಮ ಒದಗಿಸಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿಯನ್ ಮುರಳೀಧರ್ ಮಾಗಲೂರ್ ಮತ್ತು ಶಿವಯೋಗಿ ಗುರುಮಿಠಕಲ್ ಉಪಸ್ಥಿತರಿದ್ದರು.