ಪ್ರತಿದಿನ ಯೋಗಭ್ಯಾಸದಿಂದ ರೋಗಮುಕ್ತಿ, ಆತ್ಮಶುದ್ಧಿ

ಹರಿಹರ.ಮಾ.೧೪: ಸಪ್ತರ್ಷಿ ಯೋಗದಾರ ಸ್ಪೋರ್ಟ್ಸ್ ಅಕಾಡೆಮಿ  ಇವರ ಆಶ್ರಯದಲ್ಲಿ ಪ್ರಥಮ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಗಳನ್ನು ಹರಿಹರದ ಸತ್ಯ ಗಣಪತಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಸಮಾರಂಭದ ಉದ್ಘಾಟನೆಯನ್ನು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಶಾರದೇಶನಂದಜೀ ಸಸಿಗೆ ನೀರು ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು,  ಧ್ಯಾನದಿಂದ ಪ್ರಾಣಶಕ್ತಿ ಲಭಿಸುತ್ತದೆ. ಜೀವನದಲ್ಲಿ ಅಜ್ಞಾನ ಇನ್ನು ಹೆಚ್ಚಿದರೆ ಆತ್ಮಹತ್ಯೆಗೂ ಯತ್ನಿಸುತ್ತಾರೆ. ಧ್ಯಾನ ವಿದ್ಯೆಯ ಮೂಲಭೂತ ಎಂದು ತಿಳಿಸಿದರು.ನಾವು ಚಿಕ್ಕಂದಿನಿಂದಲೇ ಸರಿಯಾದ ಅಭಿಪ್ರಾಯಗಳನ್ನು ಅನುಕೂಲವಾಗಿ ಆಲೋಚಿ ಸುವುದನ್ನು ಸರಿಯಾಗಿ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಋಷಿಮುನಿಗಳು ಈ ಹಿಂದೆ ಯೋಗ ಧ್ಯಾನ ಜಪತಪಗಳು ಮಾಡುತ್ತಾ ಬಂದಿದ್ದಾರೆ  ಯೋಗದಿಂದ ರೋಗ ಮುಕ್ತವಾಗುತ್ತದೆ ಆತ್ಮಶುದ್ಧಿಯಾಗುತ್ತದೆ ನಮ್ಮಂತಹ ಸನ್ಯಾಸಿಗಳು  ಶರೀರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಾದರೆ ಸರಳವಾಗಿ ಪ್ರಾಣಾಯಾಮಗಳು ಯೋಗಭ್ಯಾಸಗಳನ್ನು ಮಾಡುತ್ತಾ ಬರುತ್ತೇವೆ ಯೋಗ ಎಂದರೆ ಆತ್ಮ ಪರಮಾತ್ಮನಲ್ಲಿ ಸಮ್ಮಿಲನಗೊಳ್ಳುವುದಕ್ಕೆ ಯೋಗ ಎಂದು ಹೇಳುತ್ತಾರೆ ಆದ್ದರಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕಾದರೆ  ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗಭ್ಯಾಸ ಧ್ಯಾನ  ಮಾಡುವದರಿಂದ ಏಕಾಗ್ರತೆ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ  ಎಂದು ತಿಳಿಸಿದರು.