ವಾಹನಗಳ ದುರಸ್ತಿಗೆ ಮೋಟಾರ್ ಸರ್ವಿಸ್ ಸೆಂಟರ್ ತೆರೆಯಲು ಅವಕಾಶ

ಕಲಬುರಗಿ,ಜೂ.04:ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಕಲಬುರಗಿ ನಗರದಾದ್ಯಂತ ಲಾಕ್‍ಡೌನ್ ವಿಧಿಸಿದ್ದು, ಸಣ್ಣ ಕೈಗಾರಿಕೆವೆಂದು ಪರಿಗಣಿಸಿ ವಾಹನಗಳ ಸಣ್ಣ-ಪುಟ್ಟ ದುರಸ್ತಿಗೆ ಮೋಟಾರ ಸರ್ವಿಸ್ ಸೆಂಟರ್‍ಗಳನ್ನು ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 8 ಗಂಟೆಯವರೆಗೆ ತೆರೆಯಲು ಅನುಮತಿ ನೀಡಿದೆ ಎಂದು ಕಲಬುರಗಿ ನಗರ ಪೆÇಲೀಸ್ ಆಯುಕ್ತರು ತಿಳಿಸಿದ್ದಾರೆ.