ಪ್ರತಾಪ್ ಸಿಂಹ ಅವರ ಮಾತಿಗೆ ಗಂಭೀರತೆ ಇಲ್ಲಾ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮರಾಜನಗರ, ಜೂ.14:- ಕೆಲವರು ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ ಎಂಬ ಸಂಸದ ಪ್ರತಾಪ್ ಸಿಂಹ ಅವರ ಮಾತಿಗೆ ತೂಕ, ಮಾನ್ಯತೆ, ಗಂಭೀರತೆ ಇಲ್ಲಾ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಹೊಂದಾಣಿಕೆ ರಾಜಕಾರಣ ಯಾರು ಮಾಡುತ್ತಾರೆ, ಮಾಡಿದ್ದಾರೆ ಎಂದು ಹೇಳಲಿ, ಹೊಂದಾಣಿಕೆ ರಾಜಕಾರಣ ಮಾಡುವವರು ಯಾರೆಂದುಕಾಂಗ್ರೆಸ್‍ಗೆ ಗೊತ್ತಿಲ್ಲ ಎಂದರು.
ಇನ್ಮು, ಹಣದಕ್ರೋಢಿಕರಣ ಹಣಕಾಸು ಇಲಾಖೆಗೆ ಸಂಬಧಿಸಿದ್ದು, ಸಿದ್ದರಾಮಯ್ಯ ಓರ್ವ ಮೇಧಾವಿ ಆರ್ಥಿಕತಜ್ಞರು, ಅವರು ಯೋಜನೆ ಮಾಡುತ್ತಾರೆ, ಹೇಗೆ ಮಾಡುತ್ತೇವೆಂದು ಸಂಸದ ಪ್ರತಾಪ್ ಸಿಂಹಗೆ ಹೇಳುವ ಅಗತ್ಯವಿಲ್ಲ ಎಂದು ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟುಕೊಟ್ಟರು.
ಇನ್ನು, ವಿದ್ಯುತ್ ದರ ಏರಿಕೆ ಸಂಬಂಧ ಪ್ರತಿಕ್ರಿಯಿಸಿ, ವಿದ್ಯುತ್ ದರವನ್ನು ಏರಿಕೆ ಮಾಡಿದ್ದು ಬಿಜೆಪಿ ಅವರು, ಈಗ ಅವರಿಗೆ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ.
ಬೇಕಾದಾಗಒಂದು ಬೇಡದಿದ್ದಾಗ ಒಂದು ಎಂಬಂತೆ ಹೇಳಿಕೆ ಕೊಡುತ್ತಿದ್ದು ಅವರೇ ವಿದ್ಯುತ್ ದರ ಏರಿಕೆ ಮಾಡಿ ಈಗ ಅವರೇಟೀಕೆ ಮಾಡುವುದೇ ಎಷ್ಟು ಸರಿ ಎಂದು ಕಿಡಿಕಾರಿದರು.