ಪ್ರತಾಪ್ ರೆಡ್ಡಿಗೆ ಮತ ನೀಡದಂತೆ ಭೂ ಹೋರಾಟಗಾರರ ಮನವಿ

module: NormalModule; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 74.0;


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.31: ಅಧಿಕಾರ ಇಲ್ಲದಿರುವಾಗಲೇ ವಂಚನೆ ಮಾಡುತ್ತಿರುವ ಮಾಡುತ್ತಿದ್ದಾನೆ. ಅಧಿಕಾರ ಬಂದರೆ ಈತ ಇನ್ನೂ ಭ್ರಷ್ಟನಾಗಿ ದರ್ಪದಿಂದ ಮೆರೆಯಲಿದ್ದಾನೆ.
ಅದಕ್ಕಾಗಿ ಈತನಿಗೆ ಮತ ನೀಡಬೇಡಿ ಎಂದು ರಕ್ಷಣಾ ವೇದಿಕೆಯ ಮುಖಂಡ ಕರಿಯಪ್ಪ ಗುಡಿಮುನಿ ಮನವಿ ಮಾಡಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ನಗರದ ವಿವಿಧ ಸಮುದಾಯಗಳ 44 ಕುಟುಂಬಗಳು ಹಲವು ದಶಕಗಳಿಂದ 135 ಎಕರೆ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಆದರೆ ನಕಲಿ ದಾಖಲೆ ಸೃಷ್ಟಿ ಮಾಡಿ ನೋಂದಣಿ ಮಾಡಿಕೊಂಡಿದ್ದಾರೆ.
ಜಮೀನು ಕೆಲ ವರ್ಷ ದೌರ್ಜನ್ಯ ಮಾಡಿ ವಶಕ್ಕೆ ಪಡೆಯುವ ಪ್ರಯತ್ನ ಮಾಡಿದ್ದರು. 2014 ರಿಂದ ರೈತರ ವಶದಲ್ಲಿದೆ.
ಜಿಲ್ಲಾಡಳಿತ ಅವರ ಪ್ರಭಾವಕ್ಕೆ ಒಳಗಾಗಿದೆ. ಅಧಿಕಾರಿಗಳೆಲ್ಲ ಶಾಮೀಲಾಗಿದ್ದಾರೆ. ಅದಕ್ಕಾಗಿ ಅವರ ಪರವಾಗಿ  ನಮ್ಮ ಗಮನಕ್ಕೆ ಬಾರದಂತೆ ಸರ್ವೇ ಮಾಡಿ ನಕ್ಷೆ ನೀಡಿದೆ. ಇದರ ವಿರುದ್ದ ಹೈ ಕೋರ್ಟಿಗೆ ಹೋಗಿತ್ತು, ಆ ನ್ಯಾಯಾಲಯ ಜಿಲ್ಲಾ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಸೂಚಿಸಿದ್ದು ಪ್ರಕರಣ ವಿಚಾರಣೆಯ ಹಂತದಲ್ಲಿದೆ. 
ಪ್ರತಾಪ್ ರೆಡ್ಡಿ ಭ್ರಷ್ಟ, ರೈತರಿಗೆ ಹಿಂಸೆ ನೀಡುವ ವ್ಯಕ್ತಿತ್ವ ಹೊಂದಿದ್ದಾರೆಂದು ಆರೋಪಿಸಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕುಮಾರ ಸಮತಳ ಅವರು ಮಾತನಾಡಿ, ಪ್ರತಾಪ್ ರೆಡ್ಡಿ ಅವರ ಮೇಲೆ ಭೂ ವಂಚನೆ ಪ್ರಕರಣಗಳಿದ್ದು. ಪ್ರಜ್ಞಾವಂತ ಮತದಾರರು ಅವರಿಗೆ ಮತ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಬುಡಾ ಅಧ್ಯಕ್ಷರಾಗಿದ್ದಾಗ ನಗರದ ಸುತ್ತಮುತ್ತಲು ಇದ್ದ ಜಮೀನನ್ನು ಲಪಟಾಯಿಸಲು ಹೊಂಚುಹಾಕಿಕೊಂಡಿದ್ದಾರೆ ಅದಕ್ಕಾಗಿ ಪ್ರಜ್ಞಾವಂತರು ಇವರನ್ನು ಬಿಟ್ಟು ಉತ್ತಮ ಅಭ್ಯರ್ಥಿಗೆ ಮತ ನೀಡಿ ಎಂದರು.
ಸುದ್ದಿಗೋಷ್ಟಿಯಲ್ಲಿ ಕೆ.ಮೋಹನ್, ಕೆ.ನಾಗರಾಜ್, ಗೋಪಿ ಅಲ್ಲಿಪುರ ಕೆ.ಮೋಹನ್, ಶಂಕ್ರಯ್ಯ, ಶಾಂತಯ್ಯ, ರಾಮು, ರಾಜು ನೆಟ್ಟಕಲ್ಲಪ್ಪ ಮೊದಲಾದವರು ಇದ್ದರು.