ಪ್ರತಾಪ್ ಗೌಡ ಪಾಟೀಲ್ ಹುಟ್ಟು ಹಬ್ಬದ ಅಂಗವಾಗಿ ಬೃಹತ್ ಉದ್ಯೋಗ ಮೇಳ- ಪ್ರಸನ್ನ ಪಾಟೇಲ್

ಮಾನ್ವಿ,ಸೆ.೨೨- ಮಸ್ಕಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹುಟ್ಟುಹಬ್ಬದ ಅಂಗವಾಗಿ ಅ.೧ ರಂದು ಪ್ರತಾಪ್ ಗೌಡ ಪೌಂಡೇಶನ್ ನಿಂದ ಮೊದಲ ವಾರ್ಷಿಕೋತ್ಸವ ನಿಮಿತ್ಯ ಮಸ್ಕಿ ಪಟ್ಟಣದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಾಪ್ ಗೌಡ ಪೌಂಡೇಶನ್ ಅಧ್ಯಕ್ಷರಾದ ಪ್ರಸನ್ನ ಪಾಟೇಲ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಮುಂದಿನ ತಿಂಗಳ ಅ.೧ ರಂದು ಮಸ್ಕಿ ಪಟ್ಟಣದ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರ ಮಸ್ಕಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹುಟ್ಟುಹಬ್ಬದ ಅಂಗವಾಗಿ ಪ್ರತಾಪ್ ಗೌಡ ಪೌಂಡೇಶನ್ ವತಿಯಿಂದ
ಯುವಕ ಯುವತಿಯರಿಗೆ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು ಅಸಕ್ತಯುವುಳ್ಳ ಯುವಕ ಯುವತಿಯರು ಈ ಸುವರ್ಣವಕಾಶ ಕಳೆದುಕೂಳ್ಳಬೇಡಿ ಬರುವಂತಹ ವಿದ್ಯಾರ್ಥಿಗಳು ೭ನೇ ತರಗತಿ, ಎಸ್‌ಎಸ್‌ಎಲ್ಸಿ ,ಪಿಯುಸಿ ,ಐಟಿಐ ,ಡಿಪ್ಲೊಮಾ, ಯಾವುದೇ ಪದವಿ ಪಡೆದಂತಹ ತರಬೇಕಾದ ದಾಖಲಾತಿಗಳು
ವಿದ್ಯಾರ್ಥಿಗಳು ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ,ಪಾಸ್ ಪೋರ್ಟ್ ಆಧಾರ್ ಕಾರ್ಡ್ ,ಮತ್ತು ಸ್ವ ವಿವರಗಳ ಅರ್ಜಿಗಳನೂಂದಿಗೆ ನೀರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಸುಮಾರು ೫೦ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ.
ಪ್ರತಾಪ್ ಗೌಡ ಫೌಂಡೇಶನ್ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆಯನ್ನು ಅ.೧ ರಂದು ಅರಂಭವಾಗಲಿದೆ. ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಸಮರ್ಪಣೆ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುದರ್ಶನ್ ಕೋನಾಪುರ ಪೇಟೆ , ಶ್ರೀಧರ್ ಪಾಟೀಲ್, ಸಂತೋಷ್ ಬಳಿಗಾರ, ವೆಂಕಟೇಶ್ ಕೋನಪುರ ಪೇಟೆ
ಅಯ್ಯಪ್ಪ ನಾಯಕ್ ಮ್ಯಾಕಲ್ , ಮಂಜುನಾಥ್ ನಾಯಕ್ ಜಾನೇಕಲ್, ವೆಂಕಟೇಶ್ ನಾಯಕ್ ಆಲ್ದಾಳ, ನಾಗರಾಜ್ ಕಬ್ಬೇರ್ ಉಪಸ್ಥಿತರಿದ್ದರು.