ಪ್ರತಾಪ್‌ಗೆ ಆಟಲ್ ಪ್ರಶಸ್ತಿ

ಕೋಲಾರ,ಜ.೧೨: ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಪ್ರಶಸ್ತಿಯನ್ನು ಬಹುಜನ ಸಾಹಿತ್ಯ ಅಕಾಡೆಮಿ ಕರ್ನಾಟಕ ರಾಜ್ಯಾಧ್ಯಕ್ಷ ಜಿ. ಪ್ರತಾಪ್ ಅವರಿಗೆ ನೀಡಿ ಗೌರವಿಸಿದರು.
ನವದೆಹಲಿ ಜಂತರ್ ಮಂಥರ್ ಹಾಲ್‌ನಲ್ಲಿ ಭಾರತೀಯ ಬುದ್ದ ಸಂಘದ ವತಿಯಿಂದ ನಡೆದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಟಲ್ ಬಿಹಾರಿ ನ್ಯಾಷನಲ್ ಅವಾರ್ಡ್‌ನ್ನು ಬಹುಜನ ಸಾಹಿತ್ಯ ಅಕಾಡೆಮಿ ಕರ್ನಾಟಕ ರಾಜ್ಯಾಧ್ಯಕ್ಷ ಜಿ. ಪ್ರತಾಪ್ ಅವರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯ ಡಾ.ಸತ್ಯನಾರಾಯಣ ಜಾಟಿಯ, ಬಿಜೆಪಿ ನ್ಯಾಷನಲ್ ಜನರಲ್ ಸೆಕರೇಟರಿ ದುಶ್ಯಂತ್ ಕುಮಾರ್ ಗೌತಮ್, ಭಾರತೀಯ ಬುದ್ಧ ಸಂಘದ ನ್ಯಾಷನಲ್ ಪ್ರೆಸಿಡೆಂಟ್ ಸಂಘ ಪ್ರಿಯ ರಾಹುಲ್ ಉಪಸ್ಥಿತರಿದ್ದರು.