ಪ್ರತಾಪಸಿಂಹ ಸೋಲದಿದ್ದರೆ ನಾನು ಊರೇ ಬಿಡುತ್ತೇನೆ: ಲಕ್ಷ್ಮಣ್

ಸಂಜೆವಾಣಿ ನ್ಯೂಸ್
ಮೈಸೂರು: ಸೆ.14:- ಈ ಸಾರಿ ಪ್ರತಾಪಸಿಂಹ ಸೋಲದಿದ್ದರೆ ನಾನು ಊರೇ ಬಿಟ್ಟು ಬಿಡುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಭಾಗದ ಸಂಸದರಿಗೆ ಆತಂಕ ಶುರುವಾಗಿ ಸಿಕ್ಕ ಸಿಕ್ಕವರಿಗೆಲ್ಲಾ ಕಾಲಿಗೆ ಬೀಳುತ್ತಿದ್ದಾರೆ. ಕನಿಷ್ಠ 50 ಕೋಟಿ ಎನಾದರೂ ಕೊಡುಗೆ ಇದ್ದರೂ ಹೇಳಿ?. ನೂರಕ್ಕೆ ನೂರರಷ್ಟು ನಿಮ್ಮನ್ನು ಮನೆಗೆ ಕಳುಹಿಸುತ್ತಾರೆ. 2024 ರ ಚುನಾವಣೆ ನಿಮ್ಮ ಕೊನೆ ಚುನಾವಾಣೆಯಾಗಿದೆ. ನಿಮ್ಮ ಕೇಂದ್ರ ಇಂಟಲಿಜೆನ್ಸ್ ತಂಡಕ್ಕೂ ಈಗಾಗಲೇ ಫಲಿತಾಂಶದ ವರದಿ ಗೊತ್ತಾಗಿದೆ. ಇದು ನಿಮಗೂ ಗೊತ್ತಾಗಿದೆ. 3 ಲಕ್ಷ ಅಂತರದಲ್ಲಿ ಸೋಲುತ್ತಾರೆ. 8 ಕ್ಷೇತ್ರದಲ್ಲಿ ಯೂ ಅಂತಹ ವಾತಾವರಣ ಇದೆ. ಮಡಿಕೇರಿ ಗೆ ಹೋದರೆ ನಿಮ್ಮವರೇ ನಿಮಗೆ ಹೊಡೆಯುತ್ತಾರೆಂದರು. ಐದು ರಾಜ್ಯದಲ್ಲಿ ನಾಲ್ಕುಕಡೆ ಕಾಂಗ್ರೆಸ್ ಗೆಲ್ಲಲಿದೆ. ಮಿಜೋರಾಮ್ ನಲ್ಲಿಯೂ ಬಿಜೆಪಿ ಗೆಲುವು ಸುಲಭವಲ್ಲ. ಕಳೆದ ನಾಲ್ಕು ವರ್ಷ ಬಿಜೆಪಿ ಮಾಡಿರುವ ಅನಾಚಾರ ಸರಿ ಮಾಡುವುದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಒಂದು ವರ್ಷ ಕಾಲಾವಕಾಶ ತೆಗೆದುಕೊಳ್ಳಲಿದೆ. ಖಜಾನೆ ಖಾಲಿ ಮಾಡಿರುವ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ನಡೆಗೆ ಆರ್ಥಿಕ ತಜ್ಞರೇ ಉತ್ತಮ ಗುರಿ ಎಂದು ಹೋಗಳಿದ್ದಾರೆಂದರು.
ಬಿಜೆಪಿ ಅನಾಚಾರಕ್ಕೆ ಮೈಸೂರು ವಿವಿ ಕುಲಪತಿ ನೇಮಕ ರದ್ಧಾಗಿರುವುದೇ ಸಾಕ್ಷಿಯಾಗಿದೆ. ಸತ್ಯಶೋಧನ ಸಮಿತಿ ಅರ್ಹರಲ್ಲದವರ ಲೋಕನಾಥ್ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದೇಕೆ?. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕಳಂಕ ತಂದಿದ್ದಿರಿ. ಹೊಸ ಶೋಧನ ಸಮಿತಿ ರಚಿಸಿ ಸಾರ್ವಜನಿಕ ವಾಗಿ ಅರ್ಜಿ ಆಹ್ವಾನಿಸಿ ಮೂರು ತಿಂಗಳ ಒಳಗೆ ಕುಲಪತಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.
25 ಸ್ಥಾನ ಕೈ ಗೆಲುವು: ಜೆಡಿಎಸ್ ಗೆ ಮತ ನೀಡಿದವರಲ್ಲಿ ಶೇ.6 ರಷ್ಟು ಮಂದಿ ಮುಸ್ಲಿಂರಿದ್ದಾರೆ. ನೀವು ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡರೆ ಸಂಪೂರ್ಣ ಅವರ ಮತಗಳು ಕಾಂಗ್ರೆಸ್ ಗೆ ಬರಲಿದೆ. ಶೇ.43 ರಷ್ಟು ಮತಗಳಿಸಿರುವ ರಾಜ್ಯ ಕಾಂಗ್ರೆಸ್ ಗೆ ಆ ಶೇ.6ರಷ್ಟು ಸೇರಿ ಶೇ.49 ರಷ್ಟು ಮತ ಬರುವುದು ಸ್ಪಷ್ಟವಾಗಿದೆ. ಈಗಾಗಲೇ ಕೇಂದ್ರ ಬಿಜೆಪಿಗೆ ಈಗಾಗಲೇ ಸೋಲಿನ ಭಯ ಶುರುವಾಗಿದೆ. ನೂರಕ್ಕೆ 28 ಕ್ಕೆ 22ರಿಂದ 25 ನಾವು ಗೆಲ್ಲುತ್ತೇವೆ. ನಾನು ಈಶ್ವರಪ್ಪನವರಂತೆ ಹುಚ್ಚರಂತೆ 28 ಕ್ಕೆ 28 ನ್ನು ಗೆಲ್ಲುತ್ತೇವೆಂದು ಹೇಳಿಕೆ ನೀಡಲು ಹೋಗುವುದಿಲ್ಲ. ದೇವೇಗೌಡ ಮೇಲೆ ನಮಗೆ ಅಪಾರ ಗೌರವವಿದೆ. ಆದರೆ, ಈಗ ಅವರ ಜಾತ್ಯಾತೀತ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಕಳೆದ ಜನವರಿ, ಫೆಬ್ರವರಿ ಯಲ್ಲಿ ಆರ್ ಎಸ್ ಎಸ್ ನ ಬೈದು ಈಗ ಯಾವ ಮುಖ ಹೊತ್ತು ಬಿಜೆಪಿ ಸಖ್ಯ ಬೆಳೆಸಿದ್ದಾರೆ. ಬಿಜೆಪಿ ಯವರ ಯೋಗ್ಯತೆಗೆ ಐದು ತಿಂಗಳಾದರೂ ಕನಿಷ್ಠ ವಿರೋಧ ಪಕ್ಷದ ನಾಯಕನನ್ನು ಮಾಡಲು ನಿಮ್ಮಿಂದ ಆಗಿಲ್ಲ. ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ. ಲೋಕಸಭಾ ಚುನಾವಣೆ ಮುಗಿಯುವವರೆಗೂ ನಳೀನ್ ಕುಮಾರ್ ಕಟೀಲ್ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಬೇಕು. ಇನ್ನೂ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಬಿಜೆಪಿಯಲ್ಲೇ ನಾಯಕರು ಬಟ್ಟೆ ಹರಿದುಕೊಳ್ಳುತ್ತಿರುವುದು ನೋಡುತ್ತಿದ್ದೇನೆ. ಬಹುಶಃ ಕುಮಾರಸ್ವಾಮಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವುದು ಸ್ಪಷ್ಟವಾಗಿದೆ ಎಂದರು.
ಇನ್ನೂ ಮಹಿಷ ದಸರಾ ಆಚರಣೆಗೆ ಸಂಸದರು ಯಾಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂಬುದು ತಿಳಿಯುತ್ತಿಲ್ಲ. ದೇವರ ದರ್ಶನಕ್ಕೂ ಮುನ್ನ ಮಹಿಷಸುರನ ಪ್ರತಿಮೆ ನಮಸ್ಕರಿಸುತ್ತಾರೆ. ಮಹಿಷಾಸುರ ನಿಮ್ಮ ಕುಟುಂಬಕ್ಕೆ ಎನೂ ಮಾಡಿದ್ದರೂ ಪ್ರತಾಪಸಿಂಹ ತಾತನಿಗೆ ಎನಾದರೂ ಮಾಡಿದ್ದಾರಾ? ದಸರಾ ಎಂದರೆ ಎಲ್ಲರನ್ನೂ ಪೂಜಿಸುವ ಹಬ್ಬವಾಗಿದೆ. ತೊಡೆ ತಟ್ಟಿ, ದಮ್ಕಿ ಹಾಕುವುದು ಆಗಲ್ಲ. ಒಬ್ಬರ ಪರವಾಗಿ ಕಾಂಗ್ರೆಸ್ ಸರ್ಕಾರ ನಡೆಯಲ್ಲ. ಪ್ರತಾಪಸಿಂಹರನ್ನು ಬಿಟ್ಟು ಶ್ರೀವತ್ಸಾವರಾಗಲಿ ಅಥವಾ ಇತರರಾಗಲಿ ಯಾರು ಹೇಳಿಲ್ಲ. ಬೆಡ್ ಶಿಟ್ ಕೊಡ್ತಿವಿ ಮಲಗಿಕೊಳ್ಳಿ ಎಂದರು.
ಕುಮಾರಸ್ವಾಮಿ ವಿರುದ್ಧ ಮಾತನಾಡಿದರೆ, ಚಿಕ್ಕಬಳ್ಳಾಪುರದಿಂದ ಮಹೇಂದ್ರ ರೆಡ್ಡಿ ಅಂತಾ ಮೂರ್ನಾಲ್ಕು ಮಂದಿ ಧಮ್ಕಿ ಹಕ್ಕುತ್ತಾರೆ. ಡಿಕೆ ಶಿವಕುಮಾರ್ ಪರವಾಗಿ ಒಕ್ಕಲಿಗ ಸಮುದಾಯ ಹೋಗುತ್ತಿದೆ. ಇದನ್ನು ಸಹಿಸಿಕೊಳ್ಳಲಾಗದೇ ಅವರ ವಿರುದ್ಧ ಬೆಳಿಗ್ಗೆ ಎದ್ದು ಮಾತನಾಡುತ್ತಿದ್ದಾರೆ. ನೈಸ್ ರಸ್ತೆ ಯಲ್ಲಿ ನಿಮ್ಮ ಕುಟುಂಬದ 27 ಮಂದಿ ಹೆಸರಿಲ್ಲವೇ ಇದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವ ಕೆಲಸ ಮಾಡಲಾಗುವುದು.
ಸುಮ್ಮನೆ ಡಿಕೆಶಿ ಹಾಗೂ ಸಿದ್ದರಾಮಯ್ಯ ವಿರುದ್ಧ ಮಾತನಾಡುವುದು ಸರಿಯಲ್ಲ. 2024 ಕ್ಕೆ ಶೇ.40 ರಷ್ಟು ಮತಗಳನ್ನು ಹಾಕಲ್ಲ ಎಂದು ಬಿಜೆಪಿಯವರೇ ಕೇಳುತ್ತಿದ್ದಾರೆ. ಯಾರನ್ನಾದರೂ ನಿಲ್ಲಿಸಲಿ. ಕಾಂಗ್ರೆಸ್ ಸಂಸದರನ್ನು ಗೆಲ್ಲಿಸಲು ಎಲ್ಲಾ ರೀತಿಯಲ್ಲಿಯೂ ತಯಾರಿ ಮಾಡಿಕೊಂಡಿದ್ದೇವೆ. ಪ್ರತಾಪಸಿಂಹ ದೇವೇಗೌಡ, ಸಿದ್ದರಾಮಯ್ಯ ಅವರ ಕಾಲಿಗೂ ಬಿದ್ದಿದ್ದಾರೆ. ಬೈದಿರುವುದಕ್ಕೂ ನಮ್ಮ ಬಳಿ ದಾಖಲೆಗಳಿವೆ ಎಂದರು. 3 ಲಕ್ಷ ಅಂತರದಲ್ಲಿ ಮೈಸೂರು ಲೋಕಸಭಾ ಕ್ಷೇತ್ರ ಗೆಲುತ್ತೇವೆ.
ಈಶ್ವರಪ್ಪ, ಆಶೋಕ್ ಅವರು ಅಸ್ತಿತ್ವಕ್ಕಾಗಿ ಹೀಗೆ ಮಾತಾಡುತ್ತಿದ್ದಾರೆ. ಕನಕಪುರ ದಲ್ಲಿ ಠೇವಣಿ ಕಳೆದಿದ್ದು ಏಕೆ ಎಂದರು. ಮುಖ್ಯಮಂತ್ರಿಗಳು ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ನಾನು ಸಹ ಎಂಪಿ ಅಭ್ಯರ್ಥಿ ಆಕಾಂಕ್ಷಿಗಳಾಗಿದ್ದೇನೆಂದರು. ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾದ್ಯಮ ವಕ್ತಾರ ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.