ಪ್ರತಾಪಗೌಡ ಪಾಟೀಲ್ ಸೇಲ್ ಆಗುವ ವ್ಯಕ್ತಿಯಲ್ಲ

ರಾಯಚೂರು.ಏ.05- ಪ್ರತಾಪಗೌಡ ಪಾಟೀಲ್ ಅವರು ಸೇಲ್ ಆಗುವ ವ್ಯಕ್ತಿಯಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅವರ ಸ್ವಾಭಿಮಾನಕ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆಂದು ಹೊನ್ನಳ್ಳಿ ಶಾಸಕ ರೇಣುಕಾರ್ಯ ಅವರು ಹೇಳಿದರು.
ಇಂದು ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ ಅವರು, ಕಾಂಗ್ರೆಸ್ ಪಕ್ಷ ಮತದಾರರನ್ನು ಅಪಮಾನ ಮಾಡುತ್ತಿದೆ. ಜೆಡಿಎಸ್‌ನಲ್ಲಿದ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಏಕೆ ಸೇರ್ಪಡೆಗೊಂಡರು ಎಂದು ಪ್ರಶ್ನಿಸಿದ ಅವರು, ಅಂತೆಯೇ ಪ್ರತಾಪಗೌಡ ಪಾಟೀಲ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನಾಧರಿಸಿ, ಮತ ಕೇಳಲಾಗುತ್ತಿದೆ. ಈ ಕ್ಷೇತ್ರದಲ್ಲಿ ಶೇ.65 ರಷ್ಟು ಒಲವು ಬಿಜೆಪಿಯತ್ತ ಇದ್ದರೇ, ಶೇ.35 ರಷ್ಟು ಮಾತ್ರ ಕಾಂಗ್ರೆಸ್ ಪರ ಜನ ಒಲವು ಹೊಂದಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ವಿಜಯೇಂದ್ರ ಅವರನ್ನು ಎಲ್ಲರೂ ನಿರೀಕ್ಷಿಸುತ್ತಾರೆ. ವಿಜಯೇಂದ್ರ ಯೂತ್ ಐಕಾನ್ ಆಗಿ ಮತ್ತು ಕೊಟ್ಟ ಮಾತು ನಡೆಸಿಕೊಡುವ ನಾಯಕರಾಗಿದ್ದಾರೆಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಚಾರದಲ್ಲಿದ್ದ ವಿಜಯೇಂದ್ರ ಅವರು ಮಾತನಾಡುತ್ತಾ, ಮಸ್ಕಿಯಲ್ಲಿ ಬಿಜೆಪಿಯ ಸುನಾಮಿಯೇ ಕಾಣಬಹುದಾಗಿದೆ. ಪ್ರತಾಪಗೌಡ ಪಾಟೀಲ್ ಅವರ ರಾಜೀನಾಮೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಎಂಟಿಬಿ ನಾಗರಾಜ ಸಚಿವರಾಗಿದ್ದು, ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಅವರಿಗೆ ನೀಡಿದ ವಾಗ್ದಾನದಂತೆ ಅವರನ್ನು ಸಚಿವರನ್ನಾಗಿ ಮಾಡಲಾಗಿದೆಂದರು.