ಪ್ರತಾಪಗೌಡರ ಗೆಲುವು ನಿಶ್ಚಿತ

ಮಸ್ಕಿ,ಏ.೪- ಮಸ್ಕಿ ವಿಧಾನ ಸಭೆ ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರ ಗೆಲುವು ನಿಶ್ಚಿತ ಎಂದು ಕನಕ ಗಿರಿ ಕ್ಷೇತ್ರದ ಶಾಸಕ ಬಸವರಾಜ ಧಡೇಸುಗೂರು ವಿಶ್ವಾಸ ವ್ಯಕ್ತಪಡಿಸದರು.
ಕನಕಾಚಲ ವಸತಿ ಗೃಹದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.ಕೇಂದ್ರ ರಾಜ್ಯ ಸರಕಾರದ ಸಾಧನೆಗಳು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರ ಗೆಲುವಿಗೆ ಬಲ ತರಲಿವೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ವ ಸಮುದಾಯಗಳ ಅಭಿವೃದ್ದಿಗೆ ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದಾರೆ ರೈತರ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಎಡ ನಾಲೆ ಅಚ್ಚು ಕಟ್ಟು ಪ್ರದೇಶದ ರೈತರಿಗೆ ೨ ನೇ ಬೆಳೆಗೆ ನೀರು ಪೊರೈಸುವ ಮೂಲಕ ಸರಕಾರ ರೈತರ ಈ ಭಾಗದ ಅನ್ನದಾತರ ನೆರವಿಗೆ ಮುಂದಾಗಿದೆ ಎಂದರು.
ಉಪ ಚುನಾವಣೆ ಯಲ್ಲಿ ಮತದಾರರು ಅಭಿವೃದ್ದಿ ಪರ ಮತ ಚಲಾಯಿಸುವ ಕಾರಣ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರ ಗೆಲುವು ಖಚಿತ ಎಂದು ಶಾಸಕ ಬಸವರಾಜ ಧಡೇಸುಗೂರು ವಿಶ್ವಾಸ ವ್ಯಕ್ತಪಡಿಸಿದರು. ಜಿಪಂ. ಸದಸ್ಯ ದುರ್ಗಪ್ಪ ಗುಡುಗಲ ದಿನ್ನಿ, ಪುರಸಭೆ ಮಾಜಿ ಅಧ್ಯಕ್ಷ ಮೌನೇಶ, ಮುರಾರಿ, ತಿಕ್ಕಯ್ಯ ಬಳಗಾನೂರು, ಹನುಮಂತಪ್ಪ ಪರಾಪೂರ, ಮೌನೇಶ, ಅಂಬಣ್ಣ ಬೆನಕನಾಳ ಇದ್ದರು.