ಪ್ರಣೀತಾ ಗಿರಿಧರ್ ರಂಗಪ್ರವೇಶ

ಬೆಂಗಳೂರು,ಆ.೧೨-ನಗರದ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿರುವ ತೆಲುಗು ವಿಜ್ಞಾನ ಸಮಿತಿಯಲ್ಲಿ ಇಂದು ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಪ್ರಣೀತಾ ಗಿರಿಧರ್ ಅವರು ರಂಗ ಪ್ರವೇಶಿಸುವ ಮೂಲಕ ಭರತನಾಟ್ಯವನ್ನು ಪ್ರಸ್ತುತ ಪಡಿಸಲಿದ್ದಾರೆ.
ಖ್ಯಾತ ಭರತನಾಟ್ಯ ಕಲಾವಿದರಾದ ಕಿರಣ್ ಸುಬ್ರಮಣ್ಯನ್ ಹಾಗೂ ಸಂಧ್ಯಾ ಕಿರಣ್ ಅವರ ಶಿಷ್ಯೆ ಆಗಿರುವ ಪ್ರಣೀತಾ ಕಳೆದ ೫ ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದಾರೆ. ಸದ್ಯ ಈಗ ೧೩ ವರ್ಷವಾಗಿರುವ ಪ್ರಣೀತಾ ೮ನೇ ತರಗತಿಯಲ್ಲಿ ಓದಿಕೊಂಡೆ ತಮ್ಮ ಭರತನಾಟ್ಯ ಅಭ್ಯಾಸವನ್ನು ಮುಂದುವರೆಸಿದ್ದಾರೆ.
ಇಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಣೀತಾ ಗಿರಿಧರ್ ತಮ್ಮ ಭರತನಾಟ್ಯದ ಮೂಲಕ ಎಲ್ಲರನ್ನೂ ಮನರಂಜಿಸಲಿದ್ದಾರೆ. ಮೊದಲಿಗೆ ಪುಷ್ಪಾಂಜಲಿ, ಕೃತಿ, ನೃತ್ಯೋಪಹಾರಂ ಕಾರ್ಯಕ್ರಮ ನಡೆಯಲಿದ್ದು, ಬಳಿಕ ದೇವಿ ಸ್ತುತಿ, ದೇವರನಾಮ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಕಿರಣ್ ಸುಬ್ರಮಣ್ಯಂ, ಅಭಿಷೇಕ್ ಎನ್.ಎಸ್, ವಿನೋದ್ ಶ್ಯಾಮ್ ಆನೂರ್, ರಘು ಸಿಂಹ, ಪ್ರದೇಶ್ ಆಚಾರ್, ಧನುಷ್ ನಾಟಂಪಲ್ಲಿ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.