ಪ್ರಣಾಳಿಕೆ ಭರವಸೆ ಈಡೇರಿಕೆ ಖಚಿತ

ಬೇತಮಂಗಲ,ಏ.೧೨:ಕೆಜಿಎಫ್ ತಾಲೂಕಿನಲ್ಲಿ ಯಾವುದೇ ಕೈಗಾರಿಕೆಗಳು ಇಲ್ಲದಿದ್ದರೂ, ನಾಗರೀಕರು ಹೈನುಗಾರಿಕೆ, ಟೈಲರಿಂಗ್ ಸೇರಿದಂತೆ ಹಲವು ಸ್ವಯಂ ಉದ್ಯೋಗಗಳನ್ನು ಸೃಷ್ಠಿಸಿಕೊಂಡು ಜೀವನ ಮಾಡುತ್ತಿದ್ದು, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಂತೆ ಸರ್ಕಾರ ಗ್ಯಾರಂಟಿ ನಡೆದುಕೊಳ್ಳಲಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ಪಟ್ಟಣದ ಬಳಿಯ ಟಿ.ಗೊಲ್ಲಹಳ್ಳಿ ಗ್ರಾಪಂಯ ಎಲ್ಲಾ ಗ್ರಾಮಗಳಲ್ಲಿ ಜನಾಶೀರ್ವಾದ ಕಾರ್‍ಯಕ್ರಮವನ್ನು ಹಮ್ಮಿಕೊಂಡು ಮಾತನಾಡಿದ ಅವರು, ಕೆಜಿಎಫ್‌ನಲ್ಲಿ ಬಿಜಿಎಂಎಲ್ ಕಾರ್ಖಾನೆ ಮುಚ್ಚಿದ ನಂತರ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ.
ಆದರೆ ಕೆಜಿಎಫ್ ಜನತೆ ಜೀವನ ನಡೆಸಲು ಪ್ರತಿನಿತ್ಯ ಸಾವಿರಾರು ಮಂದಿ ಉದ್ಯೋಗ ಹರಿಸಿ ಬೆಂಗಳೂರಿಗೆ ತೆರಳುತಿದ್ದು, ಇಲ್ಲೇ ಉದೋಗ ಸೃಷ್ಠಿ ಮಾಡಬೇಕೆಂದು ತಾವು ಸದನದಲ್ಲಿ ಒತ್ತಾಯಿಸಿದ್ದೆ ಕೈಗಾರಿಕೆ ಸ್ಥಾಪನೆ ಮಾಡಲು ೯೭೩ ಎಕರೆ ಪ್ರದೇಶವನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿದ್ದು, ಮುಂದಿನ ದಿನಗಳಲ್ಲಿ ಕೈಗಾರಿಕೆ ಸ್ಥಾಪನೆಯಾಗಲಿದೆ ಇದರಿಂದ ಕುಟುಂಭದಲ್ಲಿ ೩ ಮಂದಿಗೆ ಉದ್ಯೋಗ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಮನೆಗೆ ೨-೩ ಹಸುಗಳನ್ನು ಸಾಕಾಣಿಕೆ ಮಾಡಿಕೊಂಡು ಉತ್ತಮ ಜೀವನವನ್ನುಜ ರೂಪಿಸಿಕೊಂಡಿದ್ದಾರೆ. ಇದರಿಂದ ಜೀವನ ನಿರ್ವಹಣೆಯೊಂದಿಗೆ ಸ್ವಯಂ ಉದ್ಯೋಗವನ್ನು ರೂಪಿಸಿಕೊಂಡಿದ್ದು, ಇನ್ನೂ ಅನೇಕ ರೀತಿಯಲ್ಲಿ ಜೀವನ ರೂಪಿಸಿಕೊಂಡಿರುವುದು ಖುಷಿ ನೀಡಿದೆ.
ಬಡವರ ಹಸಿವು ನೀಗಿಸಲು ಕಾಂಗ್ರೆಸ್ ಸರ್ಕಾರವು ಉಚಿತವಾಗಿ ತಲಾ ೧೦ಕೆಜಿ ಅಕ್ಕಿ, ಮನೆಯ ಯಜಮಾನಿಗೆ ೨ ಸಾವಿರ, ಪದವಿಧರ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಪ್ರತಿ ಮನೆಗೂ ೨೦೦ ಯೂನಿಟ್ ಉಚಿತ ವಿದ್ಯುತ್ ಸೇರಿ ಬಡವರ ಸಂಕಷ್ಟಕ್ಕೆ ಸ್ಪಂದಿಸಲು ತಯಾರಿದ್ದು, ಈ ಬಾರಿ ಕಾಂಗ್ರೆಸ್‌ಗೆ ಮತ ನೀಡಬೇಕೆಂದು ಮನವಿ ಮಾಡಿದರು.