ಪ್ರಣಾಳಿಕೆ ಬಿಡುಗಡೆ: ಮತದಾನ ಜಾಗೃತಿ

ಕಲಬುರಗಿ:ಮೇ.2: ಜಿಲ್ಲಾ ಸ್ಲಂ ಜನಾಂದೋಲನ ಕರ್ನಾಟಕ ವತಿಯಿಂದ ಸೋಮವಾರ ಕೊಳಚೆ ಪ್ರದೇಶಗಳ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಪ್ರಣಾಳಿಕೆ ಬಿಡುಗಡೆ ಮಾಡಿ ಮತದಾನದ ಅರಿವು ಮೂಡಿಸಲಾಯಿತು.

ನಗರದ ಸಿದ್ಧಾರ್ಥ ನಗರ, ಬಾಪುನಗರ, ಶಹಾಬಜಾರ್ ತಾಂಡಾ, ಗುಲ್ಲಾಬಾವುಡಿ, ಹೀರಾನಗರ, ಬಿದ್ದಾಪುರ ಕಾಲೊನಿ, ಆಶ್ರಯ ಕಾಲೊನಿ, ಮಾಂಗರವಾಡಿ, ಇಂದಿರಾನಗರ, ರಾಜಾಪುರ, ಸಂಜೀವನಗರ, ಕೊಳಚೆ ನಿರ್ಮೂಲನೆ ಮಂಡಳಿ ವಸತಿ ಗೃಹ, ಭರತ್ ನಗರ ತಾಂಡಾ, ತಾರಾಫೈಲ್, ಪಂಚಶೀಲನಗರ,ಬೋರಾಬಾಯಿನಗರ, ಕೀರ್ತಿ ನಗರ, ಹನುಮನಗರ ತಾಂಡಾಗಳಲ್ಲಿ ಪ್ರಚಾರ ಮಾಡಲಾಯಿತು.

ವಸತಿ ಹಕ್ಕು, ನಗರ ಉದ್ಯೋಗ ಖಾತ್ರಿ ಆರಂಭ, ಕೊಳಗೇರಿಗಳ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಆರಂಭಿಸಬೇಕು. ಬಡತನ ಹಾಗೂ ತಾರತಮ್ಯ ಮುಕ್ತ, ಸ್ಲಂ ಜನರ ವಿಮೋಚನೆಗಾಗಿ ವಿಶೇಷ ಒತ್ತು ನೀಡಬೇಕು. ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶದಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ನಗರ ಲ್ಯಾಂಡ್ ಬ್ಯಾಂಕ್ ನೀತಿ ಜಾರಿಯಾಗಬೇಕು. ಸ್ಲಂ ಅಭಿವೃದ್ಧಿ ನಿಗಮ ಸ್ಥಾಪಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮುಂದಾಗಬೇಕು ಎಂದು ಒತ್ತಾಯಿಸಲಾಯಿತು.

ಈ ವೇಳೆ ಸ್ಲಂ ಜನಾಂದೋಲನ ಕಲಬುರಗಿ ಜಿಲ್ಲಾ ಘಟಕ ಅಧ್ಯಕ್ಷ ಅಲ್ಲಮಪ್ರಭು ನಿಂಬರ್ಗಾ, ಗೌರವ ಅಧ್ಯಕ್ಷ ಬಾಬುರಾವ ದಂಡಿನಕರ್, ಬ್ರಹ್ಮಾನಂದ ಮಿಂಚಾ, ಯಮನಪ್ಪ ಪ್ರಸಾದ್, ಕವಿತಾ ಇನಾಂದರ, ಜಯಶ್ರೀ ಪ್ರಸಾದ್, ಭಾಗಮ್ಮ ಬನಸೋಡೆ, ಸಿದ್ದಾರ್ಥ ತೀರ್ಮಾನ್, ಪಂಡಿತ್ ಬೈರಾಮಡಗಿ, ವಿಕಾಶ್ ಸಾವರಿಕರ, ಅನಿಲ್ ಕುಮಾರ್ ಕಾಂಬ್ಳೆ, ಶೇಖರ್ ಸಿಂಗ್ ಇದ್ದರು.