
ಬೀದರ:ಎ.11:ಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ಪ್ರಣಾಳಿಕೆಯಲ್ಲಿ ಕಾರಂಜಾ ಸಂತ್ರಸ್ಥರ ಪರಿಹಾರ ಬೇಡಿಕೆ ಸೇರಿದಂತೆ ಬೀದರ ಮತ್ತು ಆಯಾ ಕ್ಷೇತ್ರಗಳ ರಚನಾತ್ಮಕ ಅಭಿವೃದ್ಧಿಯ ಬಗ್ಗೆ ತಮ್ಮ ಪಕ್ಷದ ಘೋಷಣ ಪತ್ರದಲ್ಲಿ ಸೇರಿಸಿ ಮತಯಾಚನೆ ಮಾಡಲು ಆಗ್ರಹಿಸಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣ ಸಮಿತಿ ಮತ್ತು ಬೀದರ್ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ವತಿಯಿಂದ ಆಯಾ ರಾಜಕೀಯ ಪಕ್ಷದ ನಾಯಕರಿಗೆ ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.
ಸಮಿತಿ ಹಮ್ಮಿಕೊಂಡಿರುವ ಅಭಿಯಾನದ ಅಂಗವಾಗಿ ಕೇಂದ್ರ ಸಚಿವರು ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಭಗವಂತ ಖೂಬಾ ಅವರಿಗೆ ಅವರ ನಿವಾಸದಲ್ಲಿ ಭೇಟಿಯಾಗಿ ಕಾರಂಜಿ ಸಂತ್ರಸ್ತರ ಸಮರ್ಪಕ ಪರಿಹಾರ ಬೇಡಿಕೆ ಸೇರಿದಂತೆ ಬೀದರ್ ಜಿಲ್ಲೆಯ ರಚನಾತ್ಮಕ ಸಮಗ್ರ ಪ್ರಗತಿಯ ಕುರಿತು ವಿವರವಾದ ಪ್ರಸ್ತಾವನೆಯನ್ನು ಸಮಿತಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಪಾಟೀಲ್ ಹೊಚಕನಳ್ಳಿ ಇವರ ನೇತೃತ್ವದಲ್ಲಿ ನಿಯೋಗದ ಮೂಲಕ ಭೇಟಿಯಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಸೇರಿಸಲು ಒತ್ತಾಯಿಸಲಾಯಿತು. ಈ ಅಭಿಯಾನದಲ್ಲಿ ಮುಖಂಡರಾದ ರಾಜಪ್ಪ ಕಮಲಪೂರ, ಶಂಕ್ರಪ್ಪಾ ನಾರಾ ಕೇದಾರನಾಥ ಪಾಟೀಲ,ಮಹೇಶ ಕಮಲಪುರ, ಭೋಜರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು