ಪ್ರಜ್ವಲ ತತ್ವಾದರ್ಶಗಳಿಂದ ಎಲ್ಲರ ಮನಸ್ಸು ಗೆದ್ದ ಬುದ್ಧ ವಿಶ್ವಕ್ಕೆ ನಿತ್ಯ ಸ್ಮರಣೀಯಃ ಹಾಸಿಂಪೀರ ವಾಲೀಕಾರ

ವಿಜಯಪುರ, ಮೇ.27-ಪ್ರಜ್ವಲ ತತ್ವಾದರ್ಶಗಳಿಂದ ಎಲ್ಲರ ಮನಸ್ಸು ಗೆದ್ದ ಬುದ್ಧ ವಿಶ್ವಕ್ಕೆ ನಿತ್ಯ ಸ್ಮರಣೀಯವೆಂದು ಮಾನವತಾ ಪ್ರಶಸ್ತಿ ಪುರಸೃತ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಬುದ್ಧ ಪೂರ್ಣಿಮಾ ಆಚರಣೆಯನ್ನು ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ವಿಜಯಪುರ ಆಶ್ರಯದಲ್ಲಿ ಆಚರಿಸಿ ಮಾತನಾಡುತ್ತಾ ಸಿದ್ದಾರ್ಥ ತನ್ನ ಅರಸು ಮನೆತನದ ಭೋಗ-ಭಾಗ್ಯಗಳನ್ನು ತೊರೆದು ತಪೆÇೀನಿರತನಾಗಿ ಜ್ಞಾನಪಡೆದು ಜಗತ್ತಿಗೆ ಮಾನವೀಯತೆಯ ಸಂದೇಶ ಸಾರಿ, ಮಾನವರನ್ನು ಮಾನವರನ್ನಾಗಿ ಕಾಣುವುದೆ ಬೌದ್ಧ ಧರ್ಮವೆಂದು ಬುದ್ಧ ಪ್ರತಿಪಾದಿಸಿದನು. ಬೌದ್ಧ ಧರ್ಮತತ್ವಾದಶ9ಗಳು ವಿಶ್ವದೆಲ್ಲೆಡೆ ಹರಡಿತು. ಬುದ್ಧನ ಜನನ, ಜ್ಞಾನೋದಯ, ಹಾಗು ಮಹಾಪರಿನಿರ್ವಾಣ (ಮರಣ) ಮೂರೂ ವೈಶಾಖ ಹುಣ್ಣಿಮೆಯ ದಿನವಾಗಿದ್ದರಿಂದ ಬುದ್ಧ ಪೂಣಿ9ಮಾ ಆಚರಣೆಗೆ ಮಹತ್ವವಿದೆ ಎಂದರು.
ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಮಾತನಾಡಿ ಜಗತ್ತಿನ ಕರಾಳ ಕಷ್ಟ ಜೀವನ ಸಿದ್ದಾರ್ಥನ ಮೇಲೆ ಪರಿಣಾಮ ಬೀರಿರುವದರಿಂದ ಧಾರ್ಮಿಕ ಹಾಗು ಆಧ್ಯಾತ್ಮಿಕ ಪ್ರಪಂಚದ ಮಹತ್ವದ ಜೀವನಕ್ಕೆ ಅತ್ಯವಶ್ಯ ಆಸೆಯೇ ದುಃಖಕ್ಕೆ ಕಾರಣ. ಸರ್ವರಿಗೂ ಸಮಪಾಲು ಸಮಬಾಳೆಂದು ಸಮಾಜವಾದವನ್ನು ಪ್ರತಿಪಾದಿಸಿದರಿಂದ ಭಗವಾನ ಬುದ್ಧ ಲೋಕಮಾನ್ಯರಾದರು ಎಂದರು
ಅಧ್ಯಕ್ಷತೆಯನ್ನು ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಜಿಲ್ಲಾಧ್ಯಕ್ಷ ವಿಜಯಕುಮಾರ ಘಾಟಗೆ ವಹಿಸಿ ಮಾತನಾಡಿದರು. ಆನಂದ ರೆಡ್ಡಿ, ಖಾದರಬಾಷಾ ಬನ್ನಿಹಟ್ಟಿ, ಸಂಜಯ ಕರಾಬಿ ಉಪಸ್ಥಿತರಿದ್ದರು.