ಪ್ರಜ್ವಲ್ ವಿದೇಶಕ್ಕೆ ಪರಾರಿ ಮನೋಹರ್ ಆಕ್ರೋಶ

ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಹಾಗೂ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರವರನ್ನು ಬಂಧಿಸುವಂತೆ ಒತ್ತಾಯಿಸಿ ಕೆಪಿಸಿಸಿ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದಲ್ಲಿ ಇಂದು ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಮುಖಂಡರಾದ ಎ.ಆನಂದ್ ಜಿ.ಪ್ರಕಾಶ್. ಹೇಮರಾಜು.ಉಮೇಶ್. ರಂಜಿತ್, ಚಂದ್ರಶೇಖರ್, ಚಿನ್ನಿಪ್ರಕಾಶ್. ಮಹಿಳಾ ಕಾಂಗ್ರೆಸ್ ಮುಖಂಡರಾದ ಉಮಾಬಾಯಿ, ಸಾಹಿನ್ ಸೇರಿದಂತೆ ಮಹಿಳೆಯರು, ಕಾರ್ಯಕರ್ತರು ಭಾಗವಹಿಸಿದ್ದರು.

ಬೆಂಗಳೂರು,ಮೇ-೧ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಹಾಸನ ಸಂಸದ ಹಾಗೂ ಅಭ್ಯರ್ಥಿ ಕಿರಾತಕ, ಕಾಮುಕ, ಜ್ವಲ್ ರೇವಣ್ಣ ವಿದೇಶಕ್ಕೆ ತೆರಳಲು ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಯ ಬಿಜೆಪಿ ನಾಯಕರು ವಾಮ ಮಾರ್ಗದಲ್ಲಿ ಸಹಕಾರ ನೀಡಿರುವುದರಿಂದ ಆರೋಪಿಯು ತಲೆಮರಸಿಕೊಂಡು ಓಡಿ ಹೋಗಿದ್ದಾನೆ ಎಂದು ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಎಸ್. ಮನೋಹರ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಯಾರಾದರೂ ಸತ್ತರೆ ಅವರ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಗರು ಕರ್ನಾಟಕದ ಹೆಣ್ಣು ಮಕ್ಕಳನ್ನು ಈ ರೀತಿ ಹಿಂಸೆ ಮಾಡಿ ಮುಗ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಕೇಳಿ ಕಂಡರಿಯದ ಕರ್ಮಕಾಂಡವಾಗಿದೆ ಎಂದಿರುವ ಅವರು ಕಾಮುಕ ಕಿಡಿಗೇಡಿ ಪ್ರಜ್ವಲ್ ರೇವಣ್ಣನ ಬೆಂಬಲಕ್ಕೆ ನಿಂತು ಅವನ ಪರ ಮತಯಾಚಿಸಿರುವುದು ಬಿಜೆಪಿ ಪಕ್ಷ ಹಾಗೂ ನಾಯಕರು ಮಹಿಳಾ ವಿರೋಧಿಗಳು ಎಂಬುದಕ್ಕೆ ಸಾಕ್ಷಿಯಾಗಿದೆ ಮತ್ತು ಕಿಡಿಗೇಡಿ ಪ್ರಜ್ವಲ್ ರೇವಣ್ಣ ತಲೆ ಮರೆಸಿಕೊಂಡಿರುವುದೇ ಸಾಕ್ಷಿಯಾಗಿದೆ ಎಂದರು.
ಇಷ್ಟೆಲ್ಲ ದೌರ್ಜನ್ಯವನ್ನು ಪ್ರಜ್ವಲ್ ರೇವಣ್ಣ ಎಸಗಿದ್ದರು ಬಿಜೆಪಿ ಆತನನ್ನು ಬಂಧಿಸಿ ಎಂದು ಎಲ್ಲೂ ಧ್ವನಿ ಎತ್ತಿಲ್ಲ ಅವನ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿಲ್ಲ ಇದರಿಂದ ಅವನ ಬೆಂಬಲಕ್ಕೆ ಕರ್ನಾಟಕ ರಾಜ್ಯದ ಬಿಜೆಪಿ ಇರುವುದು ಬಹಿರಂಗವಾಗಿದೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣನ ಹೇಯ ಕೃತ್ಯದ ಬಗ್ಗೆ ಬಿಜೆಪಿ ಹೈಕಮಾಂಡ್ ಗೆ ಬಿಜೆಪಿ ನಾಯಕರೆ ಮನವರಿಕೆ ಮಾಡಿಕೊಟ್ಟಿದ್ದರು ಅವನಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಕೇಂದ್ರದ ನಾಯಕರು ಬೆಂಬಲಿಸಿರುವುದು ಹಲವು ಪತ್ರಗಳನ್ನು ಬರೆದಿರುವುದು ಬಹಿರಂಗವಾಗಿದೆ, ರಾಜ್ಯ ಹಾಗೂ ಕೇಂದ್ರದ ಬಿಜೆಪಿ ನಾಯಕರು ಕೂಡಲೇ ರಾಜ್ಯದ ಜನತೆಯ ಕ್ಷಮೆ ಕೋರಿ ಅವನನ್ನು ಬಂಧಿಸಲು ಮುಂದಾಗಬೇಕು ರಾಜ್ಯ ಬಿಜೆಪಿ ನಾಯಕರು ಪ್ರಧಾನ ಮಂತ್ರಿ ಮೇಲೆ ಒತ್ತಡ ತಂದು ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ರಾಜ್ಯಕ್ಕೆ ಕರೆತಂದು ಕಾನೂನು ಮೂಲಕ ಶಿಕ್ಷೆ ವಿಧಿಸಲು ಸಹಕರಿಸಬೇಕೆಂದು ಈ ಪ್ರತಿಭಟನೆ ಮೂಲಕ ಆಗ್ರಪಡಿಸಿದರು.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಆನಂದ್, ಜಿ.ಪ್ರಕಾಶ್, ಹೇಮರಾಜು,ಉಮೇಶ್, ರಂಜಿತ್, ಚಂದ್ರಶೇಖರ್, ಚಿನ್ನಿ ಪ್ರಕಾಶ್, ಓಬಳೇಶ್ ಮಹಿಳಾ ಕಾಂಗ್ರೆಸ್ ಮುಖಂಡರಾzಉಮಾಬಾಯಿ, ಸಾಹಿನ್,ಹಾಗೂ ಮಹಿಳೆಯರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.