ಪ್ರಜ್ವಲ್ ಲೈಂಗಿಕ ಹಗರಣ:ಸಮಾಜಕ್ಕೆ ಮುಜುಗರ: ಎಚ್‌ಡಿಕೆ

ಬೆಂಗಳೂರು,ಏ.೨೯- ಪಕ್ಷದ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣ ಕುಟುಂಬಕ್ಕಷ್ಟೇ ಅಲ್ಲ ಇಡೀ ಸಮಾಜಕ್ಕೆ ಮುಜುಗರ ಮತ್ತು ತಲೆತಗ್ಗಿಸುವ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.ಈ ಮೂಲಕ ತಮ್ಮ ಸಹೋದರನ ಪುತ್ರ ಮಾಡಿದ ಕೃತ್ಯವನ್ನು ನಾಗರಿಕ ಸಮಾಜ ಒಪ್ಪಿಕೊಳ್ಳುವುದೂ ಇಲ್ಲ, ಕುಟುಂಬದ ಸದಸ್ಯರಾಗಿ ಅದನ್ನು ಸಮರ್ಥಿಸಿಕೊಳ್ಳುವುದೂ ಇಲ್ಲ, ಅಪರಾಧ ಎಸಗಿದವರಿಗೆ ದೇಶದ ಕಾನೂನಿನಂತೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.ಶಿವಮೊಗ್ಗದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಹಾಲಿ ಸಂಸದ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸಮಾಜಕ್ಕೆ ಮುಜುಗರ ತಂದಿದೆ, ಆತನ ವಿಷಯ ವಯಕ್ತಿಕ ಅದನ್ನು ಕುಟುಂಬದ ಜೊತೆ ತಳುಕು ಹಾಕಬೇಡಿ ಎಂದು ತಿಳಿಸಿದ್ದಾರೆ”ಈ ವಿಷಯವನ್ನು ನಮ್ಮ ಗಮನಕ್ಕೆ ಸಾಕಷ್ಟು ಮುಂಚಿತವಾಗಿ ತಂದಿದ್ದರೆ ಮುಜುಗರವನ್ನು ತಪ್ಪಿಸಬಹುದು ಆದರೆ ಕುಟುಂಬದ ಸದಸ್ಯರು ತಮ್ಮ ಗಮನಕ್ಕೆ ತರಲಿಲ್ಲ,ಹೀಗಾಗಿ ಇಡೀ ಕುಟುಂಬದ ಜೊತೆಗೆ ಸಮಾಜ ಕೂಡ ಮುಜುಗರ ಎದುರಿಸುವಂತಾಗಿದೆ ಎಂದಿದ್ದಾರೆ.ಪ್ರಜ್ವಲ್ ಅವರ ವಿರುದ್ಧವೂ ಪಕ್ಷ ಕ್ರಮ ಕೈಗೊಳ್ಳಲಿದೆ “ಆರೋಪಿ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಎಫ್‌ಐಆರ್ ದಾಖಲಾಗಿದೆ. ನ್ಯಾಯಯುತ ತನಿಖೆಯಾಗಲಿ. ಅಪರಾಧ ಮಾಡಿದವರು ದೇಶದ ಕಾನೂನಿನಂತೆ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ,” ಎಂದು ಹೇಳಿದ್ದಾರೆಪ್ರಜ್ವಲ್ ರೇವಣ್ಣ ಅವರ ನಡವಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು. “ಆಪಾದನೆಯನ್ನು ಎದುರಿಸುತ್ತಿರುವ ವ್ಯಕ್ತಿಯ ಕಡೆಗೆ ತೋರಿಸಿ. ಕುಟುಂಬವನ್ನು ದೂಷಿಸಬೇಡಿ. ಹೆಚ್.ಡಿ. ರೇವಣ್ಣ ಮತ್ತು ಅವರ ಕುಟುಂಬ ಪ್ರತ್ಯೇಕವಾಗಿದೆ. ನಾನು ಅವನ ಚಲನವಲನಗಳ ಮೇಲೆ ನಿಗಾ ಇಡುವುದಿಲ್ಲ, ”ಎಂದು ಅವರು ಹೇಳಿದ್ದಾರೆಲೋಕಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಪೆನ್‌ಡ್ರೈವ್ ಬಿಡುಗಡೆ ಮಾಡಿದ ಸಮಯವೇನು ಎಂದು ಪ್ರಶ್ನಿಸಿದ ಅವರು “ಪೆನ್ ಡ್ರೈವ್ ಬಿಡುಗಡೆಯ ಹಿಂದೆ ಯಾರಿದ್ದಾರೆ ಅವರು ಅಂತಹ ವಿಷಯಗಳನ್ನು ಬಿಡುಗಡೆ ಮಾಡುವಲ್ಲಿ ಪರಿಣಿತರು ಮಾತ್ರ ಬಿಡುಗಡೆ ಮಾಡಲು ಸಾಧ್ಯ ಎಂದು ತಿಳಿಸಿದ್ಧಾರೆ

  • ಪ್ರಜ್ವಲ್ ರೇವಣ್ಣ ಸೆಕ್ಸ್ ಸ್ಕ್ಯಾಂಡಲ್ ತಲೆತಗ್ಗಿಸುವಂತಹುದು
  • ಕುಟುಂಬಕ್ಕೆ ಅಷ್ಟೇ ಅಲ್ಲ ಸಮಾಜಕ್ಕೂ ಮುಜುಗರ
  • ತಪ್ಪು ಮಾಡಿದವರಿಗೆ ಕಾನೂನಿನಡಿ ಶಿಕ್ಷೆ ಆಗಬೇಕು
  • ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ.
  • ಸಮರ್ಥನೆ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ
  • ಮುಂಚೆಯೇ ಗಮನಕ್ಕೆ ತಂದಿದ್ದರೆ ಮುಜುಗರ ತಪ್ಪಿಸಬಹುದಿತ್ತು.
  • ಲೋಕಸಭೆ ಚುನಾವಣೆ ಸಮಯದಲ್ಲಿ ಬಿಡುಗಡೆ ಅಗತ್ಯ ಏನಿತ್ತು