ಪ್ರಜ್ವಲ್ ರೇವಣ್ಣರನ್ನು ಬಂಧಿಸಲು ಕೈ ಆಗ್ರಹ

ಬೆಂಗಳೂರು, ಏ. ೨೮- ಹಾಸನ ಜೆಡಿಎಸ್ ಸಂಸದ ಕೀಚಕ ಹಾಗೂ ಕಾಮುಕ ಪ್ರಜ್ವಲ್ ರೇವಣ್ಣ ಮುಗ್ಧ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಮಾನಭಂಗ ಮಾಡಿ ಅತ್ಯಂತ ಕೀಳು ಮಟ್ಟದಿಂದ ಅವರನ್ನು ಅವಮಾನಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಅವನನ್ನು ಬಂದಿಸಿ ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಿದರು.
ದೇಶದ ಇತಿಹಾಸದಲ್ಲಿ ಸಂಸದ ಒಬ್ಬ ಈ ರೀತಿ ಹೆಣ್ಣು ಮಕ್ಕಳನ್ನು ಅವಮಾನಿಸಿ ಹಿಂಸಿಸಿ ಅವರ ಮೇಲೆ ಅತ್ಯಾಚಾರ ಎಸಗಿ ಲೈಂಗಿಕ ಕಿರುಕುಳ ನೀಡಿ ದೌರ್ಜನ್ಯ ಮಾಡಿರುವ ಕಿಡಿಗೇಡಿ ಪ್ರಜ್ವಲ್ ರೇವಣ್ಣ ಜನತಾದಳ ಸಂಸದ ಎಂಬುವ ಅರಿವಿದ್ದರೂ ಸಹ ದೇಶದ ಪ್ರಧಾನಿ ನರೇಂದ್ರ ಮೋದಿ ರವರು ಆ ಕಿಡಿಗೇಡಿನ ಕರೆದು ತನ್ನ ಕಚೇರಿಯಲ್ಲಿ ದೇವೇಗೌಡರ ಕುಟುಂಬದೊಂದಿಗೆ ಭಾವಚಿತ್ರ ತೆಗೆಸಿಕೊಂಡು ನಮ್ಮ ಸರ್ಕಾರ ಹೆಣ್ಣು ಮಕ್ಕಳ ವಿರುದ್ಧ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ,
ದೇಶದ ಹೆಣ್ಣು ಮಕ್ಕಳನ್ನು ಈ ರೀತಿ ಹಿಂಸಿಸಿದರು ಸಹ ಮೌನಕ್ಕೆ ಶರಣಾಗಿರುವ ಬಿಜೆಪಿ ರಾಜ್ಯ ನಾಯಕರು ರಾಷ್ಟ್ರ ನಾಯಕರು ಕೂಡಲೇ ಮಹಿಳೆಯರ ಕ್ಷಮೆ ಕೋರಬೇಕು ಕೂಡಲೇ ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣನ ಬಂಧಿಸಿ ಬಹಿರಂಗವಾಗಿ ಗಲ್ಲಿಗೇರಿಸಬೇಕೆಂದು ಆಗ್ರಪಡಿಸಿ ಮಹಿಳೆಯರು ತೀವ್ರ ಮನನೊಂದು ಪ್ರತಿಭಟನೆ ನಡೆಸಿದರು,
ನೂರಾರು ಮುಗ್ಧ ಮಹಿಳೆಯರ ಮೇಲೆ ಈ ರೀತಿ ಬಹಿರಂಗವಾಗಿ ದಬ್ಬಾಳಿಕೆ ನಡೆಸಿದ್ದರು ಸಹ ಇದನ್ನ ಖಂಡಿಸದ ದೇವೇಗೌಡರ ಹಾಗೂ ಅವರ ಕುಟುಂಬದ ನಡವಳಿಕೆ ಇಡೀ ಕರ್ನಾಟಕದ ರಾಜ್ಯದ ಗೌರವವನ್ನು ಮಣ್ಣು ಪಾಲು ಮಾಡಿದೆ,
ಮಹಿಳೆಯರನ್ನ ತಾಯಿ ಎಂದು ನಮೂದಿಸುವ ದೇವೇಗೌಡರು ಕುಮಾರಸ್ವಾಮಿ ರವರು ಇಂತಹ ಕಿಡಿಗೇಡಿಯನ್ನು ಏಕೆ ಖಂಡಿಸುತ್ತಿಲ್ಲ ಎಂಬುದು ರಾಜ್ಯದ ಜನರ ಪ್ರಶ್ನೆಯಾಗಿದೆ,
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಮನೋಹರ್ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎ ಆನಂದ್ ಪ್ರಕಾಶ್ ಹೇಮರಾಜು ಪರಿಸರ ರಾಮಕೃಷ್ಣ ಉಮೇಶ್ ರಂಜಿತ್ ಚಂದ್ರಶೇಖರ್ ಚಿನ್ನಿ ಪ್ರಕಾಶ್ ಓಬಳೇಶ್ ಮಹಿಳಾ ಕಾಂಗ್ರೆಸ್ ಮುಖಂಡರಾದ ಉಮಾಬಾಯಿ ಹಾಗೂ ಮಹಿಳೆಯರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಹಾಸನ ಜೆಡಿಎಸ್ ಪಕ್ಷದ ಸಂಸದ, ವಿಕೃತ ಕಾಮಿ, ಮುಗ್ಧ ಮಹಿಳೆಯರ ಪೀಡಕ ಪ್ರಜ್ವಲ್ ರೇವಣ್ಣನ ವಿರುದ್ಧ ಯುವ ಕಾಂಗ್ರೆಸ್ ವತಿಯಿಂದ ನಗರದ ರೇಸ್ ಕೋರ್ಸ್ ರಸ್ತೆ ಗಾಂಧಿ ಪ್ರತಿಮೆ ಮುಂಭಾಗ ಇಂದು ಪ್ರತಿಭಟನೆ ನಡೆಸಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಎ. ಆನಂದ್, ಹೇಮರಾಜು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಭಾಗವಹಿಸಿದ್ದರು. ಇದೇ ವೇಳೆ ಪ್ರಜ್ವಲ್ ಪ್ರತಿಕೃತಿಯನ್ನು ದಹಿಸಿದರು.