ಪ್ರಜ್ವಲ್‌ಗೆ ಕಾಲಾವಕಾಶ ಅಸಾಧ್ಯ

ಬೆಂಗಳೂರು,ಮೇ.೨-ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಸಂಸದ ಪ್ರಜ್ವಲ್ ರೇವಣ್ಣ ಕೇಳಿದಂತೆ ಸಮಯ ಕೊಡಲು ಆಗಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ವಕೀಲರ ಮೂಲಕ ಒಂದು ವಾರ ಸಮಯ ಕೇಳಿದ್ದಾರೆ. ಆದರೆ ಹಾಗೆ ಸಮಯವನ್ನ ತೆಗೆದುಕೊಳ್ಳಲು ಆಗಲ್ಲ. ಸೆಕ್ಷನ್ ೪೧ (ಎ) ನಲ್ಲಿ ಸಮಯವನ್ನು ಕೊಡಲು ಬರುವುದಿಲ್ಲ ಎಂದು ಹೇಳಿದ್ದಾರೆ.
ವಿಶೇಷ ತನಿಖಾ ತಂಡ(ಎಸ್‌ಐಟಿ) ನೋಟಿಸ್ ನೀಡಿದ್ದಾರೆ. ರೇವಣ್ಣ ಇಂದು ವಿಚಾರಣೆಗೆ ಹಾಜಾರಾಗುವುದಾಗಿ ಹೇಳಿದ್ದಾರೆ. ಇನ್ನು ಮುಖ್ಯಮಂತ್ರಿಗಳು ಕೂಡ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಘಟನೆಯ ಬಗ್ಗೆ ವಿವರಿಸಿ, ಡಿಪ್ಲಾಮೆಟಿಕ್ ಪಾಸ್ ಪೋರ್ಟ್ ರದ್ದು ಮಾಡಿ ಆದಷ್ಟು ಬೇಗ ಕರೆದುಕೊಂಡು ಬರೋದಕ್ಕೆ ಸಹಕರಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದರು.
ಇದೇ ವೇಳೆ ಬಿಜೆಪಿಯವರ ವಿರುದ್ಧವೂ ಕಿಡಿಕಾರಿದ ಪರಂ, ಬಿಜೆಪಿಯವರು ಕನ್ಫ್ಯೂಷಿಯಸ್ ಕ್ರಿಯೆಟ್ ಮಾಡುತ್ತಿರುತ್ತಾರೆ.ಎಸ್‌ಐಟಿ ಅಧಿಕಾರಿಗಳು, ಕಾನೂನು ಸಲಹೆಗಾರರ ಅಭಿಪ್ರಾಯ ಪಡೆದು ಮುಂದುವರಿಯುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.