ಪ್ರಜ್ಞೆ ಮೂಡಲು ಶರಣರ ವಚನಗಳು ದಾರಿದೀಪ

ವಿಜಯಪುರ.ಮೇ೨೦:ಇಂದಿನ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಲು ಹಾಗೂ ನೆನಪಿನ ಶಕ್ತಿ ವೃದ್ಧಿಸಲು ಶರಣರ ವಚನಗಳು ದಾರಿದೀಪ ಎಂಬುದಾಗಿ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗದ ಕಾರ್ಯದರ್ಶಿ ಕವಿ ಮ.ಸುರೇಶ್ ಬಾಬು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಲ್ಲಿನ ಮಹಂತಿನ ಮಠದಲ್ಲಿ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗದ ವತಿಯಿಂದ ಮಕ್ಕಳಿಗಾಗಿ ಏರ್ಪಡಿಸಿದ್ದ ವಚನ ಗಾಯನ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿ, ಮಾತನಾಡಿದರು.
ಮಕ್ಕಳಲ್ಲಿ ಹಾಡುವ ಕಲೆ ವೃದ್ಧಿಸಲು ೫ ರಿಂದ ೧೦ ಹಾಗೂ ೧೧ ರಿಂದ ೧೫ ವರ್ಷದ ಮಕ್ಕಳಿಗಾಗಿ ಎರಡು ಹಂತಗಳಲ್ಲಿ ವಚನ ಗಾಯನ ಸ್ಪರ್ಧೆ ಹಮ್ಮಿಕೊಂಡಿದ್ದು ಈ ಸ್ಪರ್ಧೆಯಲ್ಲಿ ಸುಮಾರು ೨೦ ರಿಂದ ೨೫ ಸ್ಪರ್ಧಾಳುಗಳು ಹಾಗೂ ಅವರ ಪೋಷಕರು ಭಾಗವಹಿಸಿದ್ದರು .
೫ ರಿಂದ ೧೦ ವರ್ಷದ ಮಕ್ಕಳಲ್ಲಿ ಆರ್ಕಿಡ್ ಶಾಲೆ ವಿದ್ಯಾರ್ಥಿ ಸನ್ಮಿತಾ ಮೊದಲ ಬಹುಮಾನ ಹಾಗೂ ಎವರ್ ಗ್ರೀನ್ ಶಾಲೆಯ ನಿವೇದಿತಾಶ್ರೀ ಎರಡನೆಯ ಬಹುಮಾನ.ಮತ್ತು ೧೧ ರಿಂದ ೧೫ ವರ್ಷದ ಮಕ್ಕಳಲ್ಲಿ ಎವರ್ ಗ್ರೀನ್ ಶಾಲೆಯ ಕುಮಾರಿ ಪ್ರಾಜ್ಞಾ ಮೊದಲ ಬಹುಮಾನ ಗುರುಕುಲ ಶಾಲೆಯ ಸೃಜನ್ ಎರಡನೇ ಬಹುಮಾನ ಪಡೆದರು.
ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು. ತೀರ್ಪುಗಾರರಾಗಿ ಭಾರತಿ ವಿಶ್ವನಾಥ್ ಹಾಗೂ ಅಕ್ಕನ ಬಳಗದ ಉಪಾಧ್ಯಕ್ಷೆ ಅಂಬಾಭವಾನಿ ಯವರು ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕೃಷ್ಣಪ್ಪ ದಾಸರು, ಮಾತೃಮಡಿಲು ಸಂಸ್ಥೆ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ವಂದನಾ ಜಗದೀಶ್ , ಕೆ.ಪಿ.ಟಿ.ಸಿ.ಎಲ್ ನ ಸಹಾಯಕ ಇಂಜಿನಿಯರ್ ಕೆ.ವಿಶ್ವಾಸ್, ಮಹಾದೇವಮ್ಮ, ವಿಮಲಾಂಬ ಅನಿಲ್, ಮೀನಾ ಸುರೇಶ್, ಭಾರತಿ ಶಿವಪ್ರಸಾದ್ ಹಾಗೂ ಅರಿವಿನ ಮನೆ ತಾಯಂದಿರು ಭಾಗವಹಿಸಿದ್ದರು