ಕಲಬುರಗಿ:ಸೆ.24:ಅತಿ ಚಿಕ್ಕ ವಯಸ್ಸಿನಲ್ಲಿ ಅಪಾರವಾದ ಬುದ್ದಿಶಕ್ತಿ, ನೆನಪಿನಶಕ್ತಿಯಿಂದ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಹಾಗೂ ಭಾವಸಾರ ಕ್ಷತ್ರಿಯ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡುವ ರಾಜ್ಯಮಟ್ಟದ ” ವಿಠ್ಠಲ ಶ್ರೀ ” ಪ್ರಶಸ್ತಿಗೆ ಪ್ರಜ್ಞಾ (ನೊಬಿತಾ) ಕಾಕಡೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಪಡೆದ ಅತಿ ಚಿಕ್ಕ ಸಾಧಕಿ ಅಂತ ವಿಠ್ಠಲ ಶ್ರೀ ಪ್ರಶಸ್ತಿ ಆಯ್ಕೆ ಸಮೀತಿ ಮುಖ್ಯಸ್ಥರು ಶ್ರೀ ಮಂಜುನಾಥ ರೇಳೆಕರ ಅವರು ತಿಳಿಸಿದ್ದಾರೆ… ಅಕ್ಟೋಬರ್ 1 ರಂದು ಬನವಾಸಿಯ ಶ್ರೀ ನಾಮದೇವ ಕಲ್ಯಾಣ ಮಂಟಪದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ಜರುಗಲಿದೆ