ಪ್ರಜ್ಞಾವಂತ ಪದವೀಧರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಃ ಸಾಜಿದ ರಿಸಾಲದಾರ

ವಿಜಯಪುರ, ನ.4-ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಪದವಿ ಮುಗಿಸಿದ ಲಕ್ಷಾಂತರ ಜನ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅವರ ಸೂಕ್ತ ಪದವಿಗೆ ಯಾವುದೇ ನೌಕರಿ ಇಲ್ಲದೆ ನಿರ್ಗತಿಕರಾಗಿ ಜೀವಿಸುತ್ತಿದ್ದಾರೆ. ಇದಕ್ಕೆ ಈ ಕ್ಷೇತ್ರದಲ್ಲಿ ಈ ಹಿಂದೆ ಆಯ್ಕೆಯಾದ ವಿಧಾನ ಪರಿಷತ್ತ ಸದಸ್ಯರೇ ನೇರ ಹೊಣೆಗಾರರಾಗಿದ್ದಾರೆ ಎಂದು ಜೆಡಿಎಸ್ ಪಕ್ಷದ ಯುವ ಘಟಕದ ಕಾರ್ಯಾಧ್ಯಕ್ಷ ಸಾಜಿದ ರಿಸಾಲದಾರ ಅವರು ಹೇಳಿದರು.
ಅವರು ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಜರುಗಿದ ಪದವೀಧರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಈ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕಾದರೆ ಪ್ರಜ್ಞಾವಂತ ಪದವೀಧರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿ ಬದಲಾವಣೆಗಾಗಿ ನಮ್ಮ ಕೈಜೋಡಿಸಬೇಕೆಂದರು.
ಎಸ್.ಸಿ.ಘಟಕದ ನಗರ ಅಧ್ಯಕ್ಷ ವಿನೋದ ಕೊಟ್ಯಾಳ ಮಾತನಾಡಿ ಜಿಲ್ಲೆಯಾದ್ಯಂತ ಇರುವ ಜೆಡಿಎಸ್ ಪ್ರಜ್ಞಾವಂತ ಯುವ ಪದವೀಧರರಿದ್ದು ಅವರೆಲ್ಲರೂ ತಮ್ಮ ಹೆಸರನ್ನು ನವೆಂಬರ 6ರ ಒಳಗೆ ತಾಲೂಕಿನ ತಹಶೀಲ್ದಾರ ಕಚೇರಿಯಲ್ಲಿ ಸೇರ್ಪಡೆ ಮಾಡಿಕೊಂಡು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕೆಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯದರ್ಶಿ ಅನ್ವರ ಮಕಾನದಾರ, ಜಿಲ್ಲಾ ಉಪಾಧ್ಯಕ್ಷ ಮನೋಜ ಬಿರಾದಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಇಜಾಜ ಮುಕಬಿಲ್, ಶಿವಾನಂದ ಹಿರೇಕುರಬರ, ಬಸವರಾಜ ಇಂಚಗೇರಿ, ಜಾಫರ ಕಲಾದಗಿ, ಇರ್ಫಾನ ಗೆಣ್ಣೂರ, ಸದ್ದಾಂ ಮುಲ್ಲಾ, ಶಫೀಕ ಬಾಗವಾನ ಉಪಸ್ಥಿತರಿದ್ದರು.