ಪ್ರಜಾ ಪ್ರಭುತ್ವದಲ್ಲಿ ಮತದಾನ ಮಹತ್ವದ್ದು – ದೊಡ್ಡಮನಿ

ರಾಯಚೂರು.ನ.೨೮- ಭಾರತ ದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿದು, ಇಲ್ಲಿ ಪ್ರಜಾ ಪ್ರತಿನಿಧಿಗಳನ್ನು ಪ್ರಜೆಗಳ ಆಯ್ಕೆ ಮಡುತ್ತಾರೆ. ತಮ್ಮ ಮತವನ್ನು ಚಲಾಯಿಸುವ ಮೂಲಕ ತಮ್ಮ ಜನನಾಯಕನನ್ನು ಆಯ್ಕೆ ಮಾಡುವ ಸಂಪ್ರದಾಯ ನಮ್ಮ ದೇಶದಲ್ಲಿದೆ. ನಾವು ಲಿಖಿತ ಸಂವಿಧಾನವನ್ನು ಹೊಂದಿದ್ದು, ಇಲ್ಲಿ ಪ್ರಜೆಗಳಿಗೆ ಮತದಾನದ ಹಕ್ಕನ್ನ ನೀಡಿರುವುದು ಹೆಮ್ಮೆಯೆ ಸಂಗತಿಯಾಗಿದೆ ಕ್ಷೇತ್ರ ಶಿಕ್ಷಾಧಿಕಾರಿಗಳಾದ ಚಂದ್ರಶೇಖರ ದೊಡ್ಡಮನಿ ಅವರು ಹೇಳಿದರು.
ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಮತದಾನದ ಪರಿಕಲ್ಪನೆಯನ್ನು ಮೂಡಿಸಲು ರಾಷ್‌ರೀಯ ಮತದಾನ ದಿನಾಚರನೆಯ ಅಂಗವಾಗಿ ರಸಪ್ರಶ್ನೆ ಸ್ವರ್ಧೆ, ಭಿತ್ತಿ ಪತ್ರ(ಚಿತ್ರ ಕಲೆ)ಹಾಗೂ ಪ್ರಬಂಧ ಸ್ಪರ್ದೇಗಳನ್ನು ತಮ್ಮ ಮನೆಯಲ್ಲಿ ಇರುವಂತ ಪಾಲಕ ಪೋಷಕರು ಮತದಾನರಾಗಿದ್ದರೆ ಮತದಾನ ದಿನ ಮತಗಟ್ಟೆಗೆ ಹೋಗಿ ಮತವನ್ನು ಚಲಾಯಿಸುವ ಮೂಲಕ ಪ್ರಜಾ ಪ್ರಭುತ್ವದ ಆಡಳಿತದಲ್ಲಿ ಮತದಾನ ಮಹತ್ವದ್ದಾಗಿದೆ. ೨೭-೧೧-೨೦೨೧ ರಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿಯ ಸ್ವೀಪ್ ಸಮಿತಿ ಹಗೂ ಕ್ಷೇತ್ರ ಶಿಕ್ಷಾಧಿಕಾರಿಗಳು ಕಾರ್ಯಲಯ ಇವರ ಸಂಯಕ್ತಾಶ್ರದಲ್ಲಿ ರಾಯಚೂರು ತಾಲೂಕಿನ ಪ್ರೌಡ ಶಾಲಾ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಮತದಾನ ದಿನಾಚರಣೆಯ ಅಂಗವಾಗಿ ನಡೆದ ವವಿಧ ಸ್ಪರ್ದೇಗಳು ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವುದರ ಮೂಲಕ ರಾಯಚೂರು ಕ್ಷೇತ್ರ ಶಿಕ್ಷಾಧಿಕಾರಿಗಳು ಈ ಮೇಲಿನಂತೆ ಹೇಳಿದರು.
ಮತದಾನ ಸಾಕ್ಷರತ ಕ್ಲಬ್ ನ ಜಿಲ್ಲಾ ಸಂಪನ್ಮೂಲಕ ವ್ಯಕ್ತಿ ಹಾಗೂ ಕಾರ್ಯಕ್ರಮದ ನೂಡಲ ಅಧಿಕಾರಿಯಾದ ದಂಡಪ್ಪ ಬಿರಾದಾರ ಮಾತನಾಡುತ್ತ ಈಗಾಗಲೇ ಶಾಲಾ ಮಟ್ಟದಲ್ಲಿ ವಿವಿಧ ಸ್ಫರ್ದೆಯಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದವರು ತಾಲೂಕು ಮಟ್ಟದ ಈ ಸ್ಪರ್ದೆಯಲ್ಲಿ ಭಾಗವಹಿಸಿದ್ದರು ಇಲ್ಲಿ ಪ್ರಥಮ ಸ್ವೀತಿಯ ಸ್ತಾನ ಬಂದವರೆ ಪುಸ್ತಕ ರೂಪದಲ್ಲಿ ಬಹುಮಾನ ನೀಡಲಾಗುವುದುವಿದ್ಯಾರ್ಥಿಗಳು ಆತ್ಯಂತ ಧ್ಯೆರ್ಯವಾಗಿ ಈ ಸ್ಪರ್ಧೆಯಲ್ಲಿ ಬಾಗವಹಿಸಿ ಜಿಲ್ಲಾ ಮಟ್ಟದ ಸ್ಪರ್ದೆಗೆ ಆಯ್ಕೆಯಾಗಿ ರಾಯಚೂರು ತಾಲೂಕಿನ ಕಿರ್ತಿ ತರಬೇಕೆಂದು ಬಿರಾದಾರ ಹೇಳಿದರು,
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೌಲಾನಾ ಆಬುಲ್ ಕಲಾಂ ಆಜಾದ ಶಾಲೆಯ ಮುಖ್ಯಗುರುಗಳಾದ ಶ್ರೀ ಸುಗೋರೇಶ್ವರ ಹಿರೇಮಠ ರವರು ಕಾರ್ಯಕ್ರಮ ಕುರಿತು ಮಾತನಾಡಿದರು. ವೇದಿಕೆ ಮೇಲೆ ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು ಶಂಕರವವರು ಉಪಸ್ಥಿತರಿದ್ದರು.ರಾಣಿ ಸಹ ಶಿಕ್ಷಕಿ ಪ್ರಾರ್ಥನೆ ಮಾಡಿದರು ಬಸವರಾಜ ನವಲಿ ಸ್ವಾಗತ ಕೋರಿದರು. ಗಿರಿಯಪ್ಪ ಶಿಕಷಕರು ಕಾರ್ಯಕ್ರಮ ನೀರೂಪಿಸಿದರು. ಆಂದಾನಯ್ಯ ಶಿಕ್ಷಕರು ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು.ವಿವಿಧ ಶಾಲಾ ಶಿಕ್ಷಕರು ಸ್ಪರ್ಧೇಗಳ ನಿರ್ಣಾಯಕರಾಗಿ ನಿರ್ವಹಿಸಿದರು.