ಪ್ರಜಾಯತ್ನ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದು:ಪೂಜಾರಿ

?????????

ಸೈದಾಪುರ:ಮಾ.15:ಪ್ರಜಾಯತ್ನ ಸಂಸ್ಥೆ ಶಿಕ್ಷಣ ಇಲಾಖೆಯೊಂದಿಗೆ ಕೈ ಜೋಡಿಸಿ ವಿನೂತನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಪ್ರಯತ್ಸಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಕ್ಷೇತ್ರ ಸಮನ್ವಯಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಅಭಿಪ್ರಾಯಪಟ್ಟರು.

ಸಮೀಪದ ಆರ್. ಹೊಸಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪ್ರಜಾಯತ್ನ ಕರ್ನಾಟಕ ಜಂಟಿ ಸಹಯೋಗದಲ್ಲಿ ಪೆÇೀಷಕರೊಂದಿಗೆ ಮಕ್ಕಳ ಕಲಿಕಾ ಪ್ರದರ್ಶನ ಸಂಭ್ರಮ ಹಾಗೂ 7ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ರೂಪುರೇಷೆಗಳನ್ನು ತಯಾರಿಸಿ ಮಕ್ಕಳ ಕಲಿಕಾ ಪ್ರಗತಿಯನ್ನು ಪೆÇೀಷಕರೊಂದಿಗೆ ಹಂಚಿಕೊಳ್ಳಲು ಶಾಲಾ ಹಂತದಲ್ಲಿ ಕಾರ್ಯಕ್ರಮ ಮಾಡಿರುವ ಕಾರ್ಯ ಉತ್ತಮವಾಗಿದ್ದೂ ಇನ್ನೂಳಿದ ಶಾಲೆಗಳಲ್ಲಿ ನಡೆಯಲಿ ಎಂದು ಹೇಳಿದರು.

ಬಿ.ಆರ್.ಪಿ ಬಂದಪ್ಪ ಐರೆಡ್ಡಿ, ಪ್ರಜಾಯತ್ನ ಸಂಸ್ಥೆಯ ತಾಲೂಕು ಸಂಯೋಜಕ ರುದ್ರಸ್ವಾಮಿ ಚಿಕ್ಕಮಠ ಪರಸನಹಳಿ,್ಳ ಸೋಮಶೇಖರಯ್ಯ ಹಿರೇಮಠ, ಶಾಲಾ ಮುಖ್ಯಗುರು ಮೋಹನ್, ಗ್ರಾ.ಪಂ.ಅಧ್ಯಕ್ಷ ದೇವಿಂದ್ರಪ್ಪ, ಸದಸ್ಯರಾದ ಲಕ್ಷ್ಮಿ, ದೇವಿಂದ್ರಪ್ಪ ಜಿನಕೇರಾ, ದೊಡ್ಡ ಮಲ್ಲಪ್ಪ ಬಡಿಗೇರಾ, ಮಲ್ಲಮ್ಮ ಸಣ್ಣ ಬಾಲಪ್ಪನೋರ್, ಸಾಬರೆಡ್ಡಿ ಅಬಿಸ್ಯಾಳ, ಹಣಮಂತ ಸಾಲಿ, ಯರ್ರಿಸ್ವಾಮಿ, ಸಾಬಯ್ಯ ಭಂಗಿ, ಶಿಕ್ಷಕರಾದ ಬಂಗಾರೆಪ್ಪ ರಾಮಸಮುದ್ರ, ನಾಗಮಣಿ, ಅತಿಥಿ ಶಿಕ್ಷಕರಾದ ಹೊನ್ಪಪ್ಪ ನಾಶಿ, ಗುಂಜಲಮ್ಮ, ನಿರಂಜನಕುಮಾರಿ, ನಿಂಗಾರೆಡ್ಡಿ, ನಾಶಿ, ಮಲ್ಲೇಶ್ ಅಬಿಸ್ಯಾಳ ಸೇರಿದಂತೆ ಇತರರಿದ್ದರು. ಶಿಕ್ಷಕ ಗೋವಿಂದಪ್ಪ ಸ್ವಾಗತಿಸಿದರು. ಹೊನ್ನಪ್ಪ ನಿರೂಪಸಿದರು. ಲತಾ.ಜಿ.ಬಂದಿಸಿದರು.