ಪ್ರಜಾಪ್ರಭುತ್ವ ಸದೃಢತೆ, ಯಶಸ್ಸಿಗಾಗಿ ತಪ್ಪದೆ ಮತದಾನ ಮಾಡಿ


ಧಾರವಾಡ, ಏ.12: ಪ್ರಜಾಪ್ರಭುತ್ವವನ್ನು ಸದೃಡಗೊಳಿಸಲು ಪ್ರತಿಯೊಬ್ಬ ಅರ್ಹ ಮತದಾರ ತಪ್ಪದೆ ಮತದಾನ ಮಾಡಬೇಕು. ಮತದಾರ ತಮ್ಮ ಸುತ್ತ ಮುತ್ತಲಿನ ಮತದಾರರಿಗೆ ಮತದಾನದ ಮಹತ್ವವನ್ನು ತಿಳಿಸಬೇಕೆಂದು ಜಿಲ್ಲಾ ಸ್ವೀಪ್ ಸಮಿತಿ ನೊಡಲ್ ಅಧಿಕಾರಿ ಆಗಿರುವ ಜಿಲ್ಲಾ ಪಂಚಾಯತ ಸಿ.ಇ.ಓ. ಸ್ವರೂಪ ಟಿ.ಕೆ ಅವರು ಹೇಳಿದರು.
ನಗರದ ಕಲಾಭವನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿಯ ಸಹಯೋಗದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮತದಾನ ಪವಿತ್ರವಾದ ಹಕ್ಕು. ಭಾರತೀಯರಾದ ನಮಗೆ ಮತಚಲಾವಣೆಯು ಹೆಮ್ಮೆ ಮತ್ತು ಗೌರವದ ಸಂಕೇತವಾಗಿದೆ ಎಂದು ಅವರು ಹೇಳಿದರು. 18 ವರ್ಷ ಪೂರ್ಣಗೊಂಡ ಪ್ರತಿ ಯುವಕ,ಯುವತಿಯರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.
ತೊಂದರೆ,ಗೊಂದಲಗಳಿದ್ದಲ್ಲಿ ಚುನಾವಣಾ ಆಯೋಗದ ಉಚಿತ ಸಹಾಯವಾಣಿ 1950 ಕರೆ ಮಾಡಿ ಅಥವಾ ತಮ್ಮ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ತಿಳಿದುಕೊಳ್ಳಬೇಕು. ಹೊಸ ಯುವ ಮತದಾರರು ಮತದಾನ ದಿನದಂದು ಮತದಾನ ಮಾಡಿ ಸೆಲ್ಫಿಯನ್ನು ಜಿಲ್ಲಾ ಸ್ವೀಪ್ ಸಮಿತಿಗೆ ಕಳಿಸಿ, ಉತ್ತಮವಾದ ಸೆಲ್ಪಿಗೆ ಬಹುಮಾನವನ್ನು ನೀಡಲಾಗವುದು ಎಂದು ಅವರು ತಿಳಿಸಿದರು.