ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೋದಿಯಿಂದ ಅವಮಾನ: ಅರ್ಜುನ ಭದ್ರೆ

ವಾಡಿ: ಜೂ.3:ಸಂಸತ್ ಭವನ ಉದ್ಘಾಟನೆ ಸನಾತನ ಹಿಂದೂ ಧರ್ಮದ ಮನುಧರ್ಮ ಅಣತಿಯಂತೆ ಉದ್ಘಾಟನೆ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಹಿರಂಗವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವಮಾನಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಅರ್ಜುನ ಭದ್ರೆ ಆರೋಪಿಸಿದರು.

ಪಟ್ಟಣ ಸಮೀಪದ ಮಾರಡಗಿ (ಎನ್) ಗ್ರಾಮದಲ್ಲಿ ಆಯೋಜಿಸಿದ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ 132ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡುತ್ತಾ,

ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿ ಅವರು ಆದಿವಾಸಿ ಸಮೂದಾಯಕ್ಕೆ ಸೇರಿದ ವಿಧವಾ ಮಹಿಳೆ ಇರುವ ಕಾರಣ ಮನುಸ್ಮೃತಿಯ ಪದ್ದತಿಯ ಪ್ರಕಾರ ಒಬ್ಬ ವಿಧವೆ ಮಹಿಳೆಗೆ ಶುಭ ಕಾರ್ಯಗಳಲ್ಲಿ ಕರೆಯಬಾರದು ಎಂಬ ವೈದಿಕ ಧರ್ಮದ ಅಣತಿಯಂತೆ ಪ್ರಥಮ ಪ್ರಜೆಗೆ ಸಂಸತ್ ಉಧ್ಘಾಟನ ಕಾರ್ಯಕ್ರಮಕ್ಕೆ ಕರೆಯದೆ ದೂರ ಇಟ್ಟು ಪ್ರಜಾಪ್ರಭುತ್ವದ ಸಂವಿಧಾನಾತ್ಮಕ ರಾಷ್ಟ್ರಪತಿ ಹುದ್ದೆಗೆ ಅವಮಾನ ಮಾಡಿದ್ದೂ ಅಲ್ಲದೆ ಮತ್ತೆ ನಾವು ಮನುಸ್ಮ್ರತಿ ಆಧಾರಿತ ವರ್ಣಾಶ್ರಮ ಪದ್ಧತಿಯನ್ನು ಜಾರಿಗೊಳಿಸುತ್ತೆವೆ ಎಂಬ ಸಂದೇಶ ನೀಡಿದ್ದಾರೆ ಎಂದರು.

ಅಂಬೇಡ್ಕರ್ ಒಬ್ಬ ಮಹಾನ ನಾಯಕರಾಗಿ ಬೆಳೆಯುವುದರ ಹಿಂದಿನ ದೈತ್ಯ ಶಕ್ತಿ ಮಾತೆ ರಮಾಬಾಯಿ ಆಗಿದ್ದರು ಬಹುಶಃ ಮಾತೆ ರಮಾಬಾಯಿ ಅವರು ಅಂಬೇಡ್ಕರ ಅವರ ಜೀವನ ಸಂಗಾತಿ ಆಗದಿದ್ದರೆ, ಅಂಬೇಡ್ಕರರು ಇಷ್ಟೊಂದು ಮಹನ ಮೇಧಾವಿ ಆಗಿರುತ್ತಿರಲಿಲ್ಲ, ರಮಾಬಾಯಿ ಅವರ ತ್ಯಾಗ ಬಲಿದಾನದ ಪ್ರತೀಕವಾಗಿ ಅಂಬೇಡ್ಕರ ದೊಡ್ಡ ಶಕ್ತಿಯಾಗಿ ಹೊರಬಂದರು.

ನವ-ಬೌದ್ಧ ಸಮಾಜದ ಅಧ್ಯಕ್ಷರಾದ ಟೋಪಣ್ಣ ಕೋಮಟೆ ಅಧ್ಯಕ್ಷತೆಯ ಮಾತನಾಡುತ್ತಾ, ಅಂಬೇಡ್ಕರರ ಆಶೆಯದಂತೆ ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯಬೇಕು ಸಮಾಜದ ಏಳ್ಗೇಗಾಗಿ ದುಡಿಯಬೇಕು ಅವರ ವಿಚಾರಗಳು ನಮ್ಮ ಜೀನದಲ್ಲಿ ಅಳವಡಿಸಿಕೋಳ್ಳಬೇಕು ಎಂದು ಹೇಳಿದರು.

ನ್ಯಾಯವಾದಿ ಶರಣಬಸು ದೋಡ್ಡಮನಿ, ಬಸವರಾಜಪ್ಪ ದೊಡ್ಡಮನಿ. ಶಿವು ಸೌಕಾರ, ಗ್ರಾ.ಪಂ ಸದಸ್ಯ ಶರಣಪ್ಪ ಗೌಡ ಹಂಗರಗಿ, ಶಿವಕುಮಾರ ಕುಲಜಕುಂದಿ, ಮಂಜು ಹೊನಗುಂಟ್ಟಾ ರಾಜು ಗೌಡ, ಸತೀಶ ಕುಲಕರ್ಣಿ, ದಯಾನಂದ ಖಜೂರಿ, ಶಿವು ಕುಲಕುಂದಿ, ವೇದಿಕೆಯ ಮೇಲಿದ್ದರು, ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಜೈಭೀಮ ನಡಗೇರಿ, ಮೋನೇಶ ಟೋಕಾಪೂರ, ಸೇರಿದಂತೆ ಅನೇಕರು ಪಾಲ್ಗೋಂಡಿದರು ಮೌನೇಶ ನಿರುಪಿಸಿ ವಂದಿಸಿದರು.