ಪ್ರಜಾಪ್ರಭುತ್ವ ವ್ಯವಸ್ಥೆಗೆ ಆದ ಅನ್ಯಾಯ

ಮೈಸೂರು: ಮಾ.26:- ಸಂಸದ ರಾಹುಲ್ ಗಾಂಧಿಯ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವ ಕೆಂದ್ರದ ನಿರ್ಧಾರ ವಿರೋಧ ಪಕ್ಷಗಳನ್ನು ಬೆದರಿಸುವ ಕುತಂತ್ರವಾಗಿದೆ. ಇದು ರಾಹುಲ್‍ಗಾಂಧಿಗೆ ಆಗಿರುವ ಅನ್ಯಾಯವಲ್ಲ, ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆದ ಅನ್ಯಾಯವಾಗಿದ್ದು, ಜನ ಅರ್ಥ ಮಾಡಿಕೊಳ್ಳಬೇಕು ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಗೆಲುವಿನ ತಂತ್ರ ಚರ್ಚಾ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾತನಾಡಿದರು. ಅದಾನಿ ಸಮೂಹ ಭ್ರಷ್ಟಚಾರ ಕುರಿತು ಹಿಂಡನ್‍ಬರ್ಗ್ ಆರೋಪವನ್ನು ಜಂಟಿ ಪಾರ್ಲಿಮೆಂಟ್ ಸಮಿತಿ(ಜೆಪಿಸಿ) ಮೂಲಕ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಆಗ್ರಹಿಸುತ್ತಿರುವುದು ಬಿಜೆಪಿಗೆ ಭಯ ಶುರುವಾಗಿದಂತೆ ಕಾಣುತ್ತಿದೆ. ಆದ್ದರಿಂದಲೇ ಸಣ್ಣ ಪ್ರಕರಣ ಮುಂದಿಟ್ಟುಕೊಂಡು ರಾಹುಲ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸುವ ಪಿತೂರು ಮಾಡುತ್ತಿದೆ.ಇದರ ವಿರುದ್ಧ ಮಹಿಳಾ ಕಾಂಗ್ರೆಸ್ ದೇಶವ್ಯಾಪ್ತಿ ಸಹಿ ಸಂಗ್ರಹ ಚಳವಳಿ ನಡೆಸಲಿದೆ ಎಂದು ಹೇಳಿದರು.
ದೇಶದ ಇತಿಹಾಸದಲ್ಲೇ ಅದಾನಿ ಸಮೂಹದ ಹಗರಣ ದೊಡ್ಡದ್ದಾಗಿದ್ದು, ತಮ್ಮ ಭವಿಷ್ಯಕ್ಕಾಗಿ ಜನ ಸಾಮಾನ್ಯರು ಎಲ್‍ಐಸಿ ಮತ್ತು ಬ್ಯಾಂಕ್‍ಗಳಲ್ಲಿ ಕೂಡಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕ್ಳೊಲಾಗಿದೆ. ಈ ಬೃಹತ್ ಭ್ರಷ್ಟಾಚಾರದ ವಿರುದ್ಧ ತನಿಖೆಗೆ ಆಗ್ರಹಿಸುತ್ತಿರುವ ವಿರೋಧ ಪಕ್ಷಗಳನ್ನು ಉದ್ದೇಶ ಪೂರ್ವಕವಾಗಿ ಸೆದೆಬಡಿಯುವ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನಿಖಾ ಸಂಸ್ಥಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬೊಮ್ಮಾಯಿ ನಾಯಕತ್ವದ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರದಲ್ಲಿ ಶೇ.40 ಕಮೀಷನ್ ಇಲ್ಲದೇ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂಬದು ದೇಶವ್ಯಾಪಿ ಕೇಳಿಬರುತ್ತಿದೆ. ಈ ಹಿಂದೆ ಶಂಕುಸ್ಥಾಪನೆಗೆಂದು ಮೋದಿ ಅವರು ಕರ್ನಾಟಕಕ್ಕೆ ಬಂದಿದ್ದ ವೇಳೆ ಕೆಲವು ರಸ್ತೆಗಳಿಗೆ ತರಾತುರಿಲ್ಲಿ ಡಾಂಬರ್ ಹಾಕಲಾಯಿತು.ಆದರೆ, ಮೋದಿ ದೆಹಲಿ ತಲುಪುವ ಮನ್ನವೇ ಡಾಂಬರ್ ಕಿತ್ತುಬಂದಿದ್ದ ಘಟನೆ ಶೇ.40 ಭ್ರಷ್ಟಚಾರಕ್ಕೆ ಸೂಕ್ತ ಉದಾಹಣೆ ಎಂದು ಕಿಡಿಕಾರಿದರು.
ರಾಹುಲ್ ಸದಸ್ಯತ್ವ ಅನಾರ್ಹತೆಯಿಂದ ಮುಂಬರುವ ಲೋಕಸಭ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಯೋಜನೆ ಪಡೆಯಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ಪ್ರಯೋಜನೆ ಪಡೆಯುವುದಿಲ್ಲ. ಆದರೆ, ಬಜೆಪಿ ಸರ್ಕಾರದ ಪಿತೂರಿಯ ವಿರುದ್ಧ ದೇಶವ್ಯಾಪಿ ಮನೆ ಮೆನೆಗೆ ತೆರಳಿ ಜನರಿಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಈ ಹಿಂದೆ ನಡೆದ ಪ್ರಜಾಧ್ವನಿ ಯಾತ್ರೆಯ ವೇಳೆ ಪ್ರತಿ ಮನೆ ಒಡತಿಗೆ ಮಾಸಿಕ 2000 ರೂ ಸಹಾಯಧನದ ಗ್ಯಾರಂಟಿ ಕಾರ್ಡ್ ಉದ್ಘಾಟನೆ ವೇಳೆ ಅವರು ಬಂದಿದ್ದರು ಎಂದು ಹೇಳಿದರು.