
ಪ್ಯಾರಿಸ್, ಸೆ.೧೧- ಭಾರತೀಯ ಪ್ರಜಾಪ್ರಭುತ್ವಕ್ಕೆ ಅಪಾಯದಲ್ಲಿದೆ.ಅದರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಹೋರಾಡಲು ಬದ್ಧರಾಗಿದ್ದೇವೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ನೀತಿಯ ವಿರುದ್ದ ಒಗ್ಗೂಡಿ ಹೋರಾಡಲು ನಿರ್ಧರಿಸಿದ್ದೇವೆ. ಈ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿವಿಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಪ್ಯಾರಿಸ್‌ನ ವಿಜ್ಞಾನ ಪಿಒ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಸಂವಾದದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗಗಳ ಮೇಲಿನ ದಾಳಿ ತಡೆಯಬಹುದೇ ಮತ್ತು ಪ್ರತಿಪಕ್ಷಗಳು ಅಧಿಕಾರಕ್ಕೆ ಬಂದರೆ ಈ ವಿಷಯದ ಬಗ್ಗೆ ಅವರ ಯೋಜನೆ ಎನ್ನುವ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.
ಅಲ್ಪ ಸಂಖ್ಯಾತರು, ದುರ್ಬಲ ವರ್ಗದ ಮಂದಿಯ ಬಗ್ಗೆ ಪ್ರಧಾನಿಯಾದವರು ಎದೆಗುಂದುವುದಿಲ್ಲ ಎಂದು ನಿರ್ಧರಿಸಿದರೆ, ಹಿಂಸೆ,ನಿಲ್ಲುತ್ತದೆ. ದೇಶದ ನಾಯಕತ್ವ ನೀಡುವ ನಿರ್ದೇಶನವೇ ಜನರನ್ನು ರೂಪಿಸುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿಗೂ, ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ:
ಗೀತೆ, ಉಪನಿಷತ್, ಅನೇಕ ಹಿಂದೂ ಪುಸ್ತಕಗಳನ್ನು ಓದಿದ್ದೇನೆ. ಎಂಬುದಾಗಿ ಬಿಜೆಪಿ ಹೇಳುತ್ತದೆ ಏನು ಮಾಡುತ್ತದೆ ಎನ್ನುವುದಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಬಿಜೆಪಿಯ ಕ್ರಮಗಳಿಗೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭವಿಷ್ಯದ ಸರ್ಕಾರದ, ಸಾಂವಿಧಾನಿಕ “ಸಂಸ್ಥೆಗಳನ್ನು ವಶಪಡಿಸಿಕೊಳ್ಳುವ” ಹೊಣೆಗಾರರ ವಿರುದ್ಧ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಿದೆ. ಸಾಂವಿಧಾನಿಕ ಸಂಸ್ಥೆಗಳು ತಟಸ್ಥವಾಗಿ ಕೆಲಸ ಮಾಡಬೇಕು. ಅತಂಹ ವಾತಾವರಣ ರೂಪಿಸುತ್ತೇವೆ ಎಂದಿದ್ದಾರೆ.
ಭಾರತದಲ್ಲಿ ಇತೀಚಿನ ದಿನಗಳಲ್ಲಿ ಬೆಲೆ ಏರಿಕೆ ಗಗನಕ್ಕೇರಿದೆ. ಇದರಿಂದ ಜನಸಾಮಾನ್ಯರು ಸಮಸ್ಯೆಗೆ ಸಿಲುಕಿದ್ದಾರೆ. ಇದು ಜನರ ಮೇಲೆ ನಡೆಯುವ ದಾಳಿ ಎಂದು ತಿಳಿಸಿದ್ದಾರೆ.
ಬಿಜೆಪಿ-ಆರ್‌ಎಸ್‌ಎಸ್ ಸಂಯೋಜನೆ ಸಮಾಜವನ್ನು ಧ್ರುವೀಕರಣಗೊಳಿಸಬಹುದು, ಆದರೆ ಪ್ರಧಾನಿ ನರೇಂದ್ರ ಮೋದಿ ಅದನ್ನು ಸಂಘಟಿಸುತ್ತಿದ್ದಾರೆ. ಆರ್‌ಎಸ್‌ಎಸ್ ಅವರು ಬಯಸಿದರೆ ಐದು ನಿಮಿಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೊಡಕಾಗಬಹುದು ಎಂದು ಹೇಳಿದ್ದಾರೆ.