ಪ್ರಜಾಪ್ರಭುತ್ವ ದೇಶದಲ್ಲಿ ರಾಮ ರಾಜ್ಯ ಬೇಕು ಮುಖ್ಯ ಮಂತ್ರಿ ಚಂದ್ರು

ಲಿಂಗಸುಗೂರ,ಮಾ.೨೭-
ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಅಭ್ಯರ್ಥಿ ಗಳು ಹಣ ಬಲದಿಂದ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ ಆದರೆ ಇಂತಹ ನಾಯಕರು ಈಗಾಗಲೇ ಕ್ಷೇತ್ರದಲ್ಲಿ ಮೂರು ಅವಧಿಯಲ್ಲಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡದೆ ಅಭಿವೃದ್ಧಿ ಹೆಸರಿನಲ್ಲಿ ಅನುದಾನ ಲೂಟಿ ಮಾಡಿ ಜನರನ್ನು ಮರಳು ಮಾಡುವ ಮುಖಾಂತರ ಮತ್ತೊಮ್ಮೆ ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿಯಲು ಸಿದ್ದತೆ ನಡೆದಿದೆ ಅದಕ್ಕಾಗಿ ನಮ್ಮ ಆಪ್ ಪಕ್ಷದ ಯುವ ನಾಯಕ ಶಿವಪುತ್ರ ಗಾಣದಾಳ ಇವರನ್ನು ಕಣಕ್ಕೆ ಇಳಿಸುವ ಜಿದ್ದಾಜಿದ್ದಿನ ಸ್ಪರ್ದೆ ಮಾಡುವ ಮೂಲಕ ಬಾರಿ ಪೈಪೋಟಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಲಿಂಗಸುಗೂರ ಪಟ್ಟಣದಲ್ಲಿ ಅಪ್ ಪಕ್ಷದಿಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಪ್ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅದ್ಯೆಕ್ಷ ರಾದ ಮುಖ್ಯ ಮಂತ್ರಿ ಚಂದ್ರು ಮಾತಾನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ನೀತಿ ವಿರುದ್ಧ ಕಟುವಾಗಿ ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದಲ್ಲಿ ನಮಗೆ ರಾಮ ರಾಜ್ಯ ಬೇಕು ಎಂದು ಹೇಳಿದರು.
ರಾಷ್ಟ್ರದಲ್ಲಿ ಹಾಗೂ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷ ಜೆಸಿಬಿ ಮೂರು ಪಕ್ಷಗಳು ದರೋಡೆ ಕೊರರ ಪಕ್ಷಗಳಾಗಿವೆ ಎಂದು ಮುಖ್ಯಮಂತ್ರಿ ಚಂದ್ರು ಅವರು ಜೆಸಿಬಿ ಪಕ್ಷಗಳ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಸುಗುರು ನಗರ, ಮುದಗಲ್ ಹೋಬಳಿ, ಹಟ್ಟಿ ಪಟ್ಟಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಆಸ್ಪತ್ರೆ ನಿರ್ವಹಣೆ ಜ್ವಲಂತ ಸಮಸ್ಯೆಗಳಿದ್ದು, ಇವುಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು.
ಸರ್ಕಾರಿ ಶಾಲೆಗಳ ನವೀಕರಣ ಜೊತೆಗೆ ವಿಷಯವಾರು ಶಿಕ್ಷಕರ ಕೊರತೆ ನೀಗಿಸುವಲ್ಲಿ ಸರ್ಕಾರದ ನಿರ್ಲಕ್ಷ, ದೊರಣೆ .ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾರಕವಾಗಿದೆ.
ಇಡೀ ದೇಶಕ್ಕೆ ಚಿನ್ನ ಪೊರೈಸುವ ರಾಜ್ಯಕ್ಕೆ ಪ್ರತಿಶತ ೪೮ ವಿದ್ಯುತ್ ಪೂರೈಸುವುದರ ಜೊತೆಗೆ ಅತೀ ಹೆಚ್ಚು ದವಸ ಧಾನ್ಯಗಳನ್ನು ಸರಬರಾಜು ಮಾಡುವ, ಯುವಜನ ವಿಧ್ಯಾರ್ಥಿಗಳಿಗೆ ಉದ್ಯೋಗ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಈ ಭಾಗದ ಯುವಜನ ವಿದ್ಯಾರ್ಥಿಗಳು ಕೆಲಸ ಉದ್ಯೋಗ) ಹರಸಿ ಗುಳೆ ಹೋಗುವುದನ್ನು ತಡೆಯಲು ಸರ್ಕಾರ ವಿಫಲವಾಗಿದೆ.
ಹಟ್ಟಿ ಕಾರ್ಮಿಕರ ಬದುಕಿನಲ್ಲಿ ಬದಲಾವಣೆ ಬರಬೇಕಾದರೆ ೫೫ ವರ್ಷಗಳ ನಂತರ ವಿ.ಆರ್.ಎಸ್. ಜಾರಿ ಮಾಡಬೇಕು, ೩೦೦೦ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಹೆಚ್ಚಿನ ವೈದ್ಯಕೀಯ ಸೇವೆಯನ್ನು ನೀಡುವಲ್ಲಿ ನಂಥವಾಗಿ ಏತ ನೀರಾವರಿಯಲ್ಲಿ ೨೩ ಹಳ್ಳಿಗಳ ನೀರಾವರಿ ವಂಚಿತ ಹಳ್ಳಿಗಳಿಗೆ ನೀರುಣಿಸುವ ಕೆಲಸ ಆಗಬೇಕು.
ಅಮರೇಶ್ವರ ದೇವಾಣದಲ್ಲಿ ಜಾತ್ರಾ ಸಮಯದಲ್ಲಿ ಜಾನುವಾರಗಳಿಗೆ ನೀರು, ದನದ ಕೊಟ್ಟಿಗೆಗೆ ಮೇವು ಕಲ್ಲಿಸಬೇಕು.
ಮುದಗಲ್ ಮತ್ತು ಜಲದುರ್ಗ ಕೋಟೆ ನವೀಕರಣ ಕೊಟೆಯ ಉತ್ಸವವನ್ನು ಮಾಡುವಲ್ಲಿ ಸರ್ಕಾರ ವಿಪಲ್ ವಾಗಿದೆ.
ಹೋಬಳಿಯನ್ನು ತಾಲೂಕನ್ನಾಗಿ ಘೋಷಣೆ ಮಾಡಬೇಕು
ನಮ್ಮ ತಾಲ್ಲೂಕಿನ ಕುಮಾರ ಕೇಡ ಗ್ರಾಮಕ್ಕೆ ರಸ್ತೆ ಹಾಗೂ ಶಾಲಾ ಮಕ್ಕಳಿಗೆ ಬಸ್ಸಿನ ಸೌಕರ್ಯ ವಸತಿ ನಿಲಯ ನಿರ್ಮಾಣ ಮಾಡಬೇಕು. ಸರಕಾರದ ಆಡಳಿತ ನೀತಿಯನ್ನು ಕಟುವಾಗಿ ಖಂಡಿಸಿ ಲಿಂಗಸುಗೂರ ಕ್ಷೇತ್ರದಲ್ಲಿ ನಮ್ಮ ಆಫ್ ಪಕ್ಷದಿಂದ ವಿದ್ಯಾವಂತ ಪ್ರಾಮಾಣಿಕ ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ಶಿವಪುತ್ರ ಗಾಣದಾಳ ಅಪ್ ಪಕ್ಷದಿಂದ ಅಭ್ಯರ್ಥಿ ಯಾಗಿ ಸ್ಪರ್ದಿಸಲಿದ್ದಾರೆ.
ಶಿವಪುತ್ರ ಗಾಣದಾಳ ಇವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಫ್ ಪಕ್ಷಕ್ಕೆ ಬೆಂಬಲಿಸಿ ಗಾಣದಾಳ ಇವರಿಗೆ ಮತ ನೀಡಲು ಕ್ಷೇತ್ರದ ಜನರಿಗೆ ಮನವಿ ಮಾಡುತ್ತೇನೆ ಎಂದರು
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿಜಯ ಶರ್ಮ.ರಾಜ್ಯ ಉಪದ್ಯಾಕ್ಷರು ರುದ್ರಯ್ಯ ನವಲಿ ಬಸವರಾಜ ಗುತ್ತೆದಾರ. ಮಲ್ಲಿಕಾರ್ಜುನ ಆರ್.ಪಾಟೀಲ್. ಆಪ್ ಪಕ್ಷದ ಲಿಂಗಸುಗೂರ ಕ್ಷೇತ್ರದ ಅಭ್ಯರ್ಥಿ ಶಿವಪುತ್ರ ಗಾಣದಾಳ ಉಪಸ್ಥಿತರಿದ್ದರು.