
ಗುರುಮಠಕಲ್:ಮೇ.7: 2023ರ ವಿಧಾನಸಭಾ ಚುನಾವಣೆ ಇದೆ ದಿನಾಂಕ 10 ರಂದು ನಡೆಯಲಿರುವ ಚುನಾವಣೆಗೆ ಇಲ್ಲಿಯ ಚುನಾವಣೆ ಅಧಿಕಾರಿಗಳ ಕಾರ್ಯಾಲಯದಿಂದ ಸಂಪೂರ್ಣವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ 18 ವರ್ಷ ಮೇಲ್ಪಟ್ಟ ವಯಸ್ಸಿನ ಮತದಾರರು ತಪ್ಪದೆ ಪಾಲ್ಗೊಂಡು ಐದು ವರ್ಷಗಳಿಗೊಮ್ಮೆ ಬರುವ ಪ್ರಜಾಪ್ರಭುತ್ವದ ಹಬ್ಬವನ್ನು ಶೇಕಡ ನೂರರಷ್ಟು ಗುರಿ ತಲುಪ ಬೇಕೆಂದು ಚುನಾವಣೆ ಅಧಿಕಾರಿ ಶ್ರೀ ಸಂತೋಷ್ ಕುಮಾರ ಪಾಟೀಲ್ ಅವರು ಹೇಳಿದರು. ಪಟ್ಟಣದ ಚುನಾವಣೆ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಧಿಕಾರಿಗಳು ಕ್ಷೇತ್ರಾದ್ಯಂತ 285 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು . ಎಂಟು ನೂರಕ್ಕೂ ಹೆಚ್ಚು ನೂತನ ಮತದಾರರಿರುವ ಪ್ರದೇಶಗಳಲ್ಲಿ ಯಂಗ್ ಬೂತ್ ಹಾಗೂ ವಿಶೇಷ ಚೇತನರಿಗು ಬೂತ್ ಗಳನ್ನು ಮಾಡಲಾಗಿದೆ ಎಂದರು. ಹಾಗೂ ಈ ಬಾರಿ ಮತದಾರರನ್ನು ಸೆಳೆಯಲು ವಿಭಿನ್ನ ರೀತಿ ಮಾದರಿಯ ಬೂತ್ ಗಳನ್ನು ಅಳವಡಿಸಿದ್ದು ಐದು ಪಿಂಕ್ ಬೂತ್ ಗಳು ಕೊಂಕಲ್. ಗುರುಮಠಕಲ್. ಚಾಮನಹಳ್ಳಿ. ಬದ್ದೆಪಲ್ಲಿ. ಬಂದಳ್ಳಿ.ಮಾಡಲಾಗಿದೆ ಎಂದರು. ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಷ್ಟಿಂಗ್ ಹಾಗೂ ಡಿ- ಮಷ್ಟಿಂಗ್ ಹಮ್ಮಿಕೊಂಡಿದ್ದು ಇವಿಮ್ ಮಷಿನ್ ಗಳ ಕುರಿತು ನುರಿತ ತಜ್ಞರಿಂದ ಸಿಬ್ಬಂದಿಗಳಿಗೆ ಮಾಹಿತಿ ರವಾನೆ ಮಾಡಿ ಬಸ್ ಹಾಗೂ ಜೀಪ್ ವ್ಯವಸ್ಥೆ ಮೂಲಕ ಪೆÇೀಲಿಂಗ್ ಬೂತ್ ಗಳಿಗೆ ಕಳುಹಿಸಿ ಕೊಡಲಾಗುವುದು ಎಂದು ಮಾಹಿತಿ ನೀಡಿದರು. ಈ ವೇಳೆ ಉಪಚುನಾವಣೆ ಅಧಿಕಾರಿ ಶ್ರೀ ಮೊಹಮ್ಮದ್ ಮೋಸಿನ್ ಆಹ್ಮದ್ ಇದ್ದರು.