ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಮತದಾನ ಮಾಡಿ:ಬಿರಾದಾರ

oppo_0

ತಾಳಿಕೋಟೆ:ಏ.18: ಪ್ರಜಾಪ್ರಭುತ್ವದ ಆಧಾರ ಸ್ತಂಭ ಮತದಾನವನ್ನು ಎಲ್ಲರೂ ಕಡ್ಡಾಯವಾಗಿ ಚಲಾಯಿಸಿ ಸಂವಿದಾನ ಪ್ರಕಾರ ಪ್ರಜೆಗಳೇ ಪ್ರಭುಗಳು ಎಂದು ನಿರೂಪಿಸಬೇಕೆಂದು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವಂತ್ರಾಯಗೌಡ ಬಿರಾದಾರ ಅವರು ಹೇಳಿದರು.
ಸೋಮವಾರರಂದು ಪಟ್ಟಣದಲ್ಲಿ ಭಾರತ ಚುನಾವಣಾ ಆಯೋಗ ತಾಲೂಕಾ ಸ್ವೀಪ್ ಸಮಿತಿ ತಾಲೂಕಾಡಳಿತ ತಾಲೂಕಾ ಪಂಚಾಯತ್ ಹಾಗೂ ಪುರಸಭೆ ತಾಳಿಕೋಟೆ ಇವರ ನೇತೃತ್ವದಲ್ಲಿ ಲೋಕಸಭಾ ಚುನಾವಣಾ ನಿಮಿತ್ಯ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ಮತದಾನದ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಪ್ರಜೆಗಳಿಗೆ ನೀಡಲಾಗಿದೆ ಲೋಕಸಭಾ ಚುನಾವಣೆಯಲ್ಲಿ 18ವರ್ಷ ತುಂಬಿರುವ ಮತದಾರರು ಮತಗಟ್ಟೆಗೆ ತೆರಳಿ ಕಡ್ಡಾಯವಾಗಿ ಮತದಾನ ಪ್ರಕ್ರೀಯೇಯಲ್ಲಿ ಭಾಗವಹಿಸಿ ಹಕ್ಕು ಚಲಾಯಿಸಬೇಕು ಇದು ದೇಶದ ಭವಿಷ್ಯ ರೂಪಿಸುವಂತಹದ್ದಾಗಿದೆ ದೇಶದ ಪ್ರಜೆಗಳೆಲ್ಲರೂ ಕಡ್ಡಾಯವಾಗಿ ಸಂವಿದಾನವನ್ನು ಓದಿಕೊಳ್ಳಬೇಕು ಚುನಾವಣೆಯಲ್ಲಿ ಮತ ಮಾರಿಕೊಳ್ಳಬಾರದು ಮತಗಟ್ಟೆಗೆ ತೆರಳಿ ನಿರ್ಭೀತಿಯಿಂದ ಮತ ಚಲಾಯಿಸಿ ಪ್ರಜಾಪ್ರಭುತ್ವಕ್ಕೆ ಮೆರಗು ತರಬೇಕು 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಜಾಥಾದ ಸಮಯದಲ್ಲಿ ಶ್ರೀ ಬಸವೇಶ್ವರ ವೃತ್ತದದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾವಿದಿ ಸ್ವಿಕರಿಸಲಾಯಿತು.
ತಹಶಿಲ್ದಾರ ಕಚೇರಿ ಆವರಣದಿಂದ ಪ್ರಾರಂಭಗೊಂಡ ಜಾಗೃತಿ ಜಾಥಾವು ಬಸ್ ನಿಲ್ದಾಣದ ಮುಂಭಾಗದ ರಸ್ತೆಯ ಮೂಲಕ ಮಹಾರಾಣಾಪ್ರತಾಪ ಸರ್ಕಲ್, ಶಿವಾಜಿ ಮಹಾರಾಜರ ವೃತ್ತ, ಕತ್ರಿ ಭಜಾರ, ಶ್ರೀ ಅಂಬಾಭವಾನಿ ಮಂದಿರ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಶ್ರೀ ಬಸವೇಶ್ವರರ ವೃತ್ತದ ಮರಳಿ ತಹಶಿಲ್ದಾರ ಕಚೇರಿ ಆವರಣಕ್ಕೆ ತೆರಳಿ ಮುಕ್ತಾಯಗೊಳಿಸಲಾಯಿತು.
ಈ ಜಾಥಾದಲ್ಲಿ ಪುರಸಭಾ ಮುಖ್ಯಾಧಿಕಾರಿ ಮೋಹನ್ ಜಾಧವ, ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಸತೀಶ ಹುಕ್ಕೇರಿ, ಅಧಿಕಾರಿಗಳಾದ ಮುನ್ನಾ ಅತ್ತಾರ, ಸಿಆರ್‍ಸಿ ರಾಜು ವಿಜಾಪೂರ, ಶ್ರೀಮತಿ ನೀಲಮ್ಮ ಪಾಟೀಲ, ಪುರಸಭೆಯ ಖಚೇರಿ ವ್ಯವಸ್ಥಾಪಕ ಏಸು ಬೆಂಗಳೂರ, ಶ್ರೀಪಾದ ಜೋಶಿ, ಸಿದ್ದಲಿಂಗಯ್ಯ ಚೋಂಡಿಪಾಟೀಲ, ಸುರೇಶ ಅಮ್ರಣ್ಣವರ, ರಾಘವೇಂದ್ರ ಕುಲಕರ್ಣಿ, ಒಳಗೊಂಡಂತೆ ಪೌರಕಾರ್ಮಿಕರು, ಆಶಾ ಕಾರ್ಯಾಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪ್ಯಾರೆಮೇಡಿಕಲ್ ವಿಧ್ಯಾರ್ಥಿಗಳು, ಗ್ರಾಂಪಂಗಳ ಸಿಬ್ಬಂದಿಗಳು, ಬಿಎಲ್‍ಓಗಳು ಭಾಗವಹಿಸಿದ್ದರು.