ಪ್ರಜಾಪ್ರಭುತ್ವ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ: ಮರಿಸ್ವಾಮಿ


ಸಂಜೆವಾಣಿ ವಾರ್ತೆ
ಕೊಟ್ಟೂರು, ಮೇ.04  ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿಗಾಗಿ ೨೦೨೪ರ ಲೋಕಸಭಾ ಚುನಾವಣೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಹಾಗೂ ವಿಜಯನಗರ ಜಿಲ್ಲಾ ಸಮಿತಿಯ ತೀರ್ಮಾನದಂತೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಈ ತುಕರಾಂ ರವರಿಗೆ ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ಡಿಎಸ್ ಎಸ್ ನ ಜಿಲ್ಲಾ ಸಂಚಾಲಕರಾದ ಬದ್ದಿ ಮರಿಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಮಾತಾಡಿದ ಅವರು ಬಿಜೆಪಿ ಸರ್ಕಾರ ಬರೀ ಸುಳ್ಳು ಹೇಳಿಕೊಂಡು ಆಡಳಿತ ನಡೆಸುತ್ತಿದ್ದು, ಸಂವಿಧಾನ ಬದಲಾಯಿಸುವ ಬಗ್ಗೆ ಮಾತನ್ನಾಡುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಕ್ಕೆ ದಕ್ಕೆಯಾಗುತ್ತಿದೆ. ಹಾಗಾಗಿ ಸಂವಿಧಾನದ ಉಳುವಿಗಾಗಿ ಬಿಜೆಪಿಯ ಸೋಲಿಗಾಗಿ ಕಾಂಗ್ರೇಸ್ ನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ. ಬೆಲೆ ಏರಿಕೆ ಹಾಗೂ ಜಿಡಿಪಿ ಕಡಿಮೆಯಾಗಿದ್ದರೂ ಕೂಡಾ ದೇಶದ ಜನರ ಅಭಿವೃದ್ದಿ ಮಾಡದೇ ಕೇವಲ ಒಂದು ಧರ್ಮದ ಓಲೈಕೆ ಮಾಡಿ ಕೋಮುವಾದ ಸೃಷ್ಠಿಸುವ ಕೆಲಸ ಮಾಡುವ ಬಿಜೆಪಿಯನ್ನು ಹಿಮ್ಮೆಟ್ಟಿಸಿ, ಎಲ್ಲಾ ಜಾತಿ ಧರ್ಮಗಳನ್ನು ಒಳಗೊಂಡ ಸಂವಿಧಾನದ ರಕ್ಷಣೆಗಾಗಿ ನಾವು ಮತ ಚಲಾಯಿಸುವ ಅನಿವಾರ್ಯತೆ ಇರುವುದರಿಂದ  ಈ ಲೋಕಸಭಾ ಚುನಾವಣೆಯಲ್ಲಿ ನಾವು ಕಾಂಗ್ರೇಸ್ ನ್ನು ಬೆಂಬಲಿಸುತ್ತಿದ್ದೇವೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲಾ ದಲಿತ, ಹಿಂದುಳಿದ, ಪ್ರಗತಿಪರ ಚಿಂತಕರು ದೇಶದ ಅಭಿವೃದ್ದಿಯ ಚಿಂತಕರು ಜಾತ್ಯಾತೀತ ವ್ಯಕ್ತಿಗಳು ಕೋಮು ಸೌಹಾರ್ಧತೆಗಾಗಿ ಜಾತ್ಯಾತೀತ ಸಮಾನತೆ ಸಮಾಜವಾದ ಬದುಕಿಗಾಗಿ ನಾವೆಲ್ಲರೂ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿ ದೇಶ ಮತ್ತು ಸಂವಿಧಾನ ಉಳಿಸೋಣ ಎಂದು ಎಲ್ಲಾ ವರ್ಗದ ಜನರಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ  ಪೂಜಾರಿ ಪರುಸಪ್ಪ, ಎಲ್.ಕುಬೇರಪ್ಪ, ಬದ್ದಿ ಪ್ರಭಾಕರ, ಕನ್ನಾಕಟ್ಟಿ ಶಿವರಾಜ್, ಗುಡ್ಲ ಕೊಟ್ರೇಶ, ಅಜ್ಜಯ್ಯ, ಬೇವೂರು ಶಂಕ್ರಪ್ಪ, ಗುಲಾಲಿ ದುರುಗೇಶ್, ಕೆಂಚಪ್ಪ ಬಿ, ಬಸವನಾಳ್ ಸುರೇಶ, ಜೊಳ್ಳಿ ಪರಶುರಾಮ, ಮುದ್ದಪ್ಪ ಇತರರು ಇದ್ದರು.