ಪ್ರಜಾಪ್ರಭುತ್ವ ಉಳಿಗೆ ಕೈ ಹಿಡಿಯಲು ಶಿವರಾಂ ಮನವಿ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.27:- ಈ ಬಾರಿಯ ಲೋಕಸಭಾ ಚುನಾವಣೆ ಬಳಿಕ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿಯಾದಲ್ಲಿ ಪ್ರಜಾಪ್ರಭುತ್ವದ ಅವನತಿಯಾಗಿ, ಇದೇ ಕೊನೆ ಚುನಾವಣೆ ಆಗಲಿದೆ. ಹೀಗಾಗಿ ಪ್ರಜಾಪ್ರಭುತ್ವಕ್ಕೆ ಅಪಾಯವಿರುವ ಕಾರಣ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ಮನವಿ ಮಾಡಿದರು.
ವಿವಿಧ ಸಮುದಾಯಗಳ ಮುಖಂಡರೊಡನೆ ಜಿಲ್ಲಾ ಪತ್ರಕತ್ರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ವಸಾಹತುಶಾಹಿ, ಸಾಮ್ರಾಜ್ಯಶಾಹಿ, ನಿರಂಕುಶಾಧಿಕಾರವನ್ನು ಮತ್ತೆ ಮುನ್ನೆಲೆಗೆ ತರುತ್ತಿದ್ದಾರೆ. ಇದಲ್ಲದೆ ಪ್ರಜಾಪ್ರಭುತ್ವದಲ್ಲಿ ಕಾಪೆರ್Çರೇಟ್ ಸಂಸ್ಥೆಗಳ ಹಾವಳಿ ಸಹಾ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ವೇಳೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಇದೇ ಕೊನೆಯ ಚುನಾವಣೆ ಆಗಲಿದೆ ಎಂಬ ಮಾತು ಅರ್ಥಪೂರ್ಣವಾಗಿದೆ ಎಂದರು.
ಅಲ್ಲದೆ, ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ ತಲಾ ಹದಿನೈದು ಲಕ್ಷ ಹಾಕುವುದಾಗಿ ನೀಡಿದ್ದ ಭರವಸೆ ಬಿಜೆಪಿ ಈಡೇರಿಸಿಲ್ಲ. ಆದರೆ ನಿರುದ್ಯೋಗ, ಬಡತನ, ಅಸಮಾನತೆ ಹೆಚ್ಚಾಗಿವೆ. ಮೂರರಿಂದ ನಾಲ್ಕು ಸಾವಿರ ಕೋಟಿ ವೆಚ್ಚ ಮಾಡಿ ರಾಮಮಂದಿರ ಕಟ್ಟುವವರಿಗೆ ಆಸ್ಪತ್ರೆ ಕಟ್ಟಬೇಕೆಂಬ ಆಲೋಚನೆಯಿಲ್ಲ. ಭಾರತ ದೇಶವನ್ನು ಬೂದಿಯಾಗಿಸುವತ್ತ ಸಾಗಿದ್ದಾರೆ. ಮತ್ತೆ ಅಧಿಕಾರಕ್ಕೆ ಬಂದಲ್ಲಿ ಮೊದಲ ದಿನದೇ ಮೀಸಲಾತಿ ಕಿತ್ತೊಗೆಯುತ್ತಾರೆಂದರು.
ಬಳಿಕ, ದೇವರು, ಧರ್ಮದ ಅಡಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಆರ್ಥಿಕ ಅಸಮಾನತೆ ಹೋಗಲಾಡಿಸಲು, ಅಭಿವೃದ್ಧಿ ಹೆಚ್ಚಳ ಮಾಡುವತ್ತ ಗಮನ ಹರಿಸಿಲ್ಲ. ಇನ್ನು, ಕೋಮು ದ್ವೇಷದ ಭಾವನೆ ಕೆರಳಿಸುವುದು ನಡೆದಿದೆ. ಇದೇ ಕೆಲಸ ಮಾಡುತ್ತಿದ್ದ ಸಂಸದ ಪ್ರತಾಪ್‍ಸಿಂಹ ಅವರನ್ನು ತಾವು ಯಾರೂ ದ್ವೇಷಿಸದಿದ್ದರೂ ಅವರದೇ ಪಕ್ಷದವರು ಅವರನ್ನು ಮುಗಿಸಿದರೆಂದರು.
ಈ ಕಾರಣದಿಂದಾಗಿ ಅಭಿವೃದ್ಧಿಗಾಗಿ ಜನತೆ ಈ ಭಾಗದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ?ಮಣ್ ಹಾಗೂ ಇನ್ನಿತರ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ವಿವಿಧ ಸಮುದಾಯಗಳ ಮುಖಂಡರಾದ ಯೋಗೇಶ್ ಉಪ್ಪಾರ್, ರವಿನಂದನ್, ಲೋಕೇಶ್ ಮಾದಾಪುರ, ವಿ. ಮಂಜುನಾಥ್ ಇನ್ನಿತರರು ಹಾಜರಿದ್ದರು.