ಪ್ರಜಾಪ್ರಭುತ್ವದ ಸುರಕ್ಷತೆಗೆ ಮತದಾನ ಮಾಡಿ: ಎಲ್.ಹೆಚ್.ಅರುಣ್‌ಕುಮಾರ್

ದಾವಣಗೆರೆ: ಜಾತ್ಯಾತೀತ, ಧರ್ಮ ನಿರಪೇಕ್ಷ, ಸಂವಿಧಾನ ಆಶಯಗಳ ಜನತಂತ್ರದ ಆರೋಗ್ಯದ ದೃಷ್ಠಿಯಿಂದ ಸ್ವತಂತ್ರ ಭಾರತದ ಪ್ರಜಾಪ್ರಭುತ್ವದ ಸುರಕ್ಷತೆಗೆ ಪ್ರತಿಯೊಬ್ಬರು ಮತದಾನ ಮಾಡಬೇಕೆಂದು ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್ ಹೇಳಿದರು.ಜಯನಗರ ಸಿ ಬ್ಲಾಕಿನಲ್ಲಿರುವ ಮೌಂಟ್ ಎವರೆಸ್ಟ್ ಶಾಲೆಯಲ್ಲಿ ಮತದಾನ ಮಾಡಿದ ನಂತರ ಮಾತನಾಡಿದ ಅವರು, ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವದ ಮತದಾನ ಹಬ್ಬದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ಆ ಮೂಲಕ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕೆಂದರು.ಮತದಾನ ಎನ್ನುವುದು ಪ್ರಜಾಪ್ರಭುತ್ವದ ಹಬ್ಬದಂತೆ, ಅದನ್ನು ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಆಚರಿಸಬೇಕು. ಆ ಮೂಲಕ ದೇಶಕ್ಕೆ ಉತ್ತಮ ಜನಪ್ರತಿನಿಧಿಗಳನ್ನು ನೀಡುವ ಮೂಲಕ ರಾಜ್ಯ, ರಾಷ್ಟçವನ್ನು ಇನ್ನಷ್ಟು ಬಲಿಷ್ಠವನ್ನಾಗಿ ಮಾಡಬೇಕೆಂದು ಕರೆ ನೀಡಿದರು.