ಪ್ರಜಾಪ್ರಭುತ್ವದ ಭದ್ರಬುನಾದಿಗೆ ಮತ ನೀಡಿ ಅಮಿಷಕ್ಕೆ ಒಳಗಾಗಬೇಡಿ: ತಹಸಿಲ್ದಾರ್ ಮೇತ್ರೆ

ಸೇಡಂ, ಎ,17 : ಪ್ರತಿಯೊಬ್ಬರು ಚುನಾವಣೆ ಚಿಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದು ಚೆಕ್ ಮಾಡಿಕೊಳ್ಳಿ ಚುನಾವಣಾ ಆಯೋಗವು ಸಾರ್ವಜನಿಕರ ಸಹಾಯವಾಗಲೆಂದು ಸೋಶಿಯಲ್ ಮೀಡಿಯಾದಲ್ಲಿ ???ಪ್ ಅದನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಚುನಾವಣೆ ಚಿಟ್ಟಿ ಪರಿಶೀಲಿಸಿಕೊಳ್ಳಬಹುದಾಗಿದೆ ಅದರ ಜೊತೆಗೆ ಮೇ 7 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾರು ಆಮಿಷಕ್ಕೆ ಒಳಗಾಗದೆ ಪ್ರಜಾಪ್ರಭುತ್ವ ಭದ್ರಬುನಾದಿಗೆ ಮತ ನೀಡಿ ಎಂದು ತಹಸಿಲ್ದಾರ್ ಶಿವಾನಂದ್ ಮೇತ್ರೆ ಹೇಳಿದರು. ಪಟ್ಟಣದಲ್ಲಿರುವ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಿಂದ ಮುಖ್ಯ ಬಜಾರದಿಂದ ರೈಲ್ವೆ ಸ್ಟೇಷನ್ ಬಸ್ಟ್ಯಾಂಡ್ ವರೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಹಾಗೂ ತಾಲೂಕ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಅಭಿಯಾನ ಅಂಗವಾಗಿ ಬಸ್ ಸ್ಟ್ಯಾಂಡ್ ಎದುರುಗಡೆ ಸಾರ್ವಜನಿಕರ ಉದ್ದೇಶಿಸಿ

ತಹಶೀಲ್ದಾರ್ ಮಾತನಾಡಿದರು. ಸಾರ್ವಜನಿಕ ಬಸ್ ಸ್ಟ್ಯಾಂಡ್ ಎದುರುಗಡೆ ಮತದಾರರಲ್ಲಿ ಜಾಗೃತಿ ಅಭಿಯಾನ ಮುಖ್ಯ ಉದ್ದೇಶ ಒಂದೇ ಸ್ಥಳದಲ್ಲಿ ಅನೇಕ ಗ್ರಾಮದ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಮುಖ್ಯ ಉದ್ದೇಶವಾಗಿದೆ ಎಂದರು. ಈ ವೇಳೆಯಲ್ಲಿ ಗ್ರೇಡ್ ಟು ತಹಸಿಲ್ದಾರ್ ಸಿದ್ಧರಾಮ ನಾಚವರ, ತಾಪಂ ಇಓ ಚನ್ನಪ್ಪ ರಾಮಣ್ಣನವರ, ಡಾ. ಮಾರುತಿ ನಾಯಕ್, ಮುನಾಫ್ ಉಮಾಪತಿ ರಾಜು, ಡಾ. ಸಂಜೀವಕುಮಾರ ಪಾಟೀಲ್, ರೇವಣಸಿದ್ದಪ್ಪ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಲ್ಲಿ (ಮೇ 7 ರಂದು) ನಡೆಯಲಿದ್ದು ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸಂವಿಧಾನದ ಹಕ್ಕು ಮತ್ತು ಕರ್ತವ್ಯ ಕಾಪಾಡಿಕೊಂಡು ಬರಬೇಕಿದೆ, ಯಾರು ಆಸೆ ಆಮಿಷಕ್ಕೆ ಒಳಗಾಗದೆ ಪ್ರತಿಯೊಬ್ಬರು ಮತದಾನ ಮಾಡಿ ಪ್ರಜಾಪ್ರಭುತ್ವ ಗಟ್ಟಿತನಕ್ಕೆ ಮುನ್ನಡಿ ಬರೆಯಿರಿ.
ಚನ್ನಪ್ಪ ರಾಮಣ್ಣನವರ
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸೇಡಂ