ಪ್ರಜಾಪ್ರಭುತ್ವದಲ್ಲಿ ಮಿಸಲಾತಿಅನ್ನುವುದು ಒಂದುವರ:ನಂಜುಂಡಿ

ತಾಳಿಕೋಟೆ:ಮಾ.6: ಯಾವುದೇ ಸಮಾಜ ನ್ಯಾಯದಿಂದ ಹಿಂದುಳಿದಿವೆಯೋ ಸಂಘಟಿತರಾಗಿ ಸಾಮಾಜಿಕ ನ್ಯಾಯ ಪಡೆಯಿರಿ ಎಂದು ಡಾ.ಬಾಬಾ ಸಾಹೇಬ ಅಂಬೆಡ್ಕರವರು ಹೇಳಿದ್ದಾರೆಂದು ವಿಧಾನಪರಿಷತ್ತ ಸದಸ್ಯರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಮಾಜದ ರಾಜ್ಯಾಧ್ಯಕ್ಷರಾದ ಕೆ.ಪಿ.ನಂಜುಂಡಿಯವರು ನುಡಿದರು.

    ರವಿವಾರರಂದು ತಾಳಿಕೋಟಿ ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ಏರ್ಪಡಿಸಲಾದ ಬೃಹತ ಸಮಾವೇಶವನ್ನು ದೀಪ ಬೆಳೆಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಕಮ್ಮಾರ,ಸೊನಾರ,ವಿಶ್ವ ಬ್ರಾಹ್ಮಣ ಅನ್ನುವ ಸುಮಾರು 30 ಪಂಗಡಗಳನ್ನು ಒಳಗೊಂಡಂತ್ತದ್ದೆ ವಿಶ್ವಕರ್ಮ ಸಮಾಜವಾಗಿದೆ ಎಂದರು. ದೇಶದಲ್ಲಿ 12ಕೋಟಿ ಜನರು ನಮ್ಮ ಸಮಾಜದವರಿದ್ದು ಕರ್ನಾಟಕ ರಾಜ್ಯದಲ್ಲಿ 40ಲಕ್ಷಜನರಿದ್ದೆವೆ ಕಾರಣ ಪ್ರಜಾಪ್ರಭುತ್ವದಲ್ಲಿ ಮಿಸಲಾತಿ ಎನ್ನುವುದು ಒಂದು ವರವಾಗಿದ್ದು ಅದನ್ನು ಪಡೆಯುವ ಸಲುವಾಗಿಯೇ ಪ್ರತಿಭಟನೆ ಮಾಡುತ್ತ ಸರ್ಕಾರದ ಗಮನ ಸೇಳೆಯಬೇಕಾಗಿದೆ ಎಂದರು. ಮರುಬೂಮಿಯಲ್ಲಿಯ ಕ್ರಿಯೆಯು ನಮ್ಮದೆಯಾಗಿದೆ. ಮಿಸಲಾತಿ ಎನ್ನುವುದು ವಿಶ್ವಕರ್ಮ ಸಮಾಜಕ್ಕೆ ಸಿಗದಿದ್ದರೆ ಇನ್ನು 50 ವರ್ಷ ಹಾಗೇ ಇರಬೇಕಾದಿತು ಎಂದು ಸಮಾಜದ ಜನತೆಗೆ ಎಚ್ಚರಿಸಿದರು. 1977ರಲ್ಲಿ ದೇವರಾಜ ಅರಸು ಅವರು ಹಿಂದುಳಿದ ವರ್ಗದವರಾಗಿದ್ದರಿಂದ ಸಾಮಾಜಿಕ ನ್ಯಾಯ ದೊರಕಿಸಿ ಕೊಡಲು ಮುಂದಾಗಿ ಅವುಗಳಿಗೆ ಸೌಲಭ್ಯ ಸಿಗಬೇಕೆಂಬ ದೃಷ್ಠಿಯಲ್ಲಿ ಶ್ರಮಿಸಿದ್ದಾರೆ. ಎಲ್ಲಿದ್ದಿವೀ ಏನುಮಾಡುತ್ತಿದ್ದಿವೀ ಎನ್ನುವುದನ್ನು ಸಂಶೋಧನೆ ಮಾಡುವುದೇ ಮಿಸಲಾತಿ ಎಂದರು. 40 ಲಕ್ಷ ಸಮಾಜದ ಜನತೆಯಲ್ಲಿ 4 ಜನರಾದರೂ ಎಮ್.ಎಲ್.ಎ.ಯಾಗಬೇಕಾಗಿತ್ತು. ಅದು ನಮ್ಮ ನಿರ್ಲಕ್ಷತೆಯೇ ಕಾರಣವೆಂದರು. ಉತ್ತರಖಂಡದಲ್ಲಿ ನಾಲ್ಕು ಜನರು ಎಮ್.ಎಲ್.ಎ ಇದ್ದಾರೆ. ಹಿಮಾಚಲದಲ್ಲೂ ಎಮ್.ಎಲ್.ಎ ಇದ್ದಾರೆ ಅವರು ನಮ್ಮವರಲ್ಲವೇ ಎಂದು ಪ್ರಶ್ನಿಸಿದ ನಂಜುಂಡಿಯವರು ದೇವರನ್ನು ಮಾಡಿಕೊಡುವಂತ ಸಮಾಜವನ್ನು ವೃತ್ತಿಯಿಂದ ಗುರುತಿಸಲಾಗುತ್ತಿಲ್ಲ ಕಾರಣ ಈ ಭಾಗದ ಶಾಸಕರಾದ ಎ.ಎಸ.ಪಾಡೀಲ ಹಾಗೂ ಮಾಜಿ ಶಾಸಕ ಅಪ್ಪಾಜಿ ನಾಡಗೌಡ ಇವರು ರಾಜಕೀಯ ಕ್ಷೇತ್ರದಲ್ಲಿ ತಿಳಿದವರಿದ್ದಾರೆ ಇವರು ಮನಸ್ಸು ಮಾಡಿದರೆ ರಾಜಕೀಯ ಸ್ಥಾನಮಾನವನ್ನು ನಮ್ಮ ಜನರಿಗೆ ಕೊಡುತ್ತಾರೆಂದ ಅವರು ಮಿಸಲಾತಿ ಸಿಗಬೇಕು ಇದು ಒಂದು ಕ್ರೀಯೆಯಾಗಿದೆ ಎಂದು ಒತ್ತಿ ಹೇಳಿದರು.
   ಅಧ್ಯಕ್ಷತೆ ವಹಿಸಿದ ಮುದ್ದೆಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ಕ.ರಾ.ಆ ಹಾಗೂ ನಾ.ಪೂ ನಿಗಮದ ಅಧ್ಯಕ್ಷರಾದ ಎ.ಎಸ್.ಪಾಟೀಲ ನಡಹಳ್ಳಿಯವರು ಮಾತನಾಡಿ ಕಟ್ಟಿಗೆ, ಕಲ್ಲು, ವಿವಿಧತೆಯಲ್ಲಿ ತಮ್ಮ ನಿಸ್ವಾರ್ಥ ಸೇವೆಯೊಂದಿಗೆ ಜೀವ ಕಳೆ ತುಂಬಿ ವಿಶ್ವಕ್ಕೆ ನೀಡುತ್ತಾ ಸಾಗಿ ಬಂದವರು ವಿಶ್ವಕರ್ಮ ಸಮಾಜದವರಾಗಿದ್ದಾರೆಂದರು. ಯಾವುದೇ ದೇವಸ್ಥಾನ ಮೂರ್ತಿಗಳಿಗೆ ಬೆಲೆ ಕಟ್ಟಲಾಗುತ್ತಿಲ್ಲ ಅವುಗಳಲ್ಲಿ ತಂತ್ರಜ್ಞಾನ ಬೆಳೆಸಿದವರು ವಿರ್ಶವಕರ್ಮ ಸಮಾಜದವರಾಗಿದ್ದಾರೆ. ಆರ್ಥಿಕವಾಗಿ ಅನೇಕ ಕಷ್ಟ ನಷ್ಟಗಳನ್ನು ಅನುಸರಿಸುತ್ತಾ ಬಂದ ಇವರು ಜನರನ್ನು ಪ್ರತಿನಿಧಿಸುವುದಕ್ಕೆ ಪ್ರಥಮ ಜವಾಬ್ದಾರಿಯಾಗಿರುತ್ತಾರೆಂದರು. ಯಾವುದೇ ಸಮಾಜದವರು ತಮ್ಮ ತೊಂದರೆಗಳನ್ನು ಸರ್ಕಾರದ ಗಮನ ಸೇಳೆಯಲು ಮುಂದಾದಾಗ ಅದಕ್ಕೆ ಫಲ ಎಂಬುದು ದೊರೆಯಲಿದೆ ಎಂದ ಶಾಸಕ ನಡಹಳ್ಳಿಯವರು ವಿಧಾನ ಪರಿಷತ್ತು ಸದಸ್ಯ ಕೆ.ಪಿ.ನಂಜುಂಡಿಯವರು ಸಮಾಜಕ್ಕಾಗಿ ಸಂಘಟನೆಗಳನ್ನು ಸೃಷ್ಟಿಸುವ ಮೂಲಕ ಸಮಾಜವನ್ನು ಮೇಲೆತ್ತುವ ಕಾರ್ಯಕ್ಕೆ ಮುಂದಾಗಿದ್ದಾರೆ ಇವರ ಈ ಒಳ್ಳೆಯ ಹೋರಾಟಕ್ಕೆ ನನ್ನದು ಸಹ ಬೆಂಬಲವಿದೆ ಎಂದರು. ಬೇರೆ ಬೇರೆ ಸಮಾಜಗಳೂ ಆರ್ಥಿಕವಾಗಿ ಹಿಂದೂಳಿದಲ್ಲಿ ಸರ್ಕಾರದ ಗಮನ ಹರಿಸಬೆಕೆಂದ ಅವರು ಸಮಾನವಾದ ವ್ಯವಸ್ಥೆ ಮಾಡಲು ಸರ್ಕಾರ ಬದ್ಧವಾಗಿದೆ ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಡಲು ನಮ್ಮ ಸರ್ಕಾರ ಸಿದ್ಧವಾಗಿದೆ ಎಂದರು.
   ಇನ್ನೊರ್ವ ಮುಖ್ಯಅಥಿತಿಗಳಾಗಿ ಆಗಮಿಸಿದ ಮಾಜಿಸಚಿವ ಸಿ.ಎಸ್.ನಾಡಗೌಡ ಮಾತನಾಡಿ ವಿಶ್ವಕರ್ಮ ಸಮಾವೇಶವನ್ನು ಬಹಳೇ ಅದ್ದೂರಿಯಾಗಿ ನಡೆಸಿಕೊಂಡಿದ್ದಿರಿ ಆಭರಣ ಹಿಡಿದು ಸೂಜಿವರೆಗೂ ಈ ಸಮಾಜ ಬಹು ದೊಡ್ಡ ಕೊಡುಗೆ ನಿಡಿದೆ ಎಂದರು. ಕಟ್ಟಿಗೆ ಮಾರುವವನಿಗೆ ಬಡಿಗ, ಚಿನ್ನ ಮಾರುವವನಿಗೆ ಪತ್ತಾರ, ಲೋಹ ಮಾರುವವನಿಗೆ ಕಮ್ಮಾರ, ಕಲ್ಲಿನ ಕೆಲಸ ಮಾಡುವವನಿಗೆ ಶಿಲ್ಪಿ ಅನಿಸಿಕೊಂಡ ಅಮರಶಿಲ್ಪಿ ಜಕಣಾಚಾರ್ಯರವರ ಹೆಸರು ಪ್ರಸ್ಥಾಪಿಸಿದ ಅವರು ಉಪಜಾತಿಗಳು ಈ ಎಲ್ಲರೂ ಒಂದಾಗಿ ಒಂದು ಎನ್ನುವ ಭಾವನೆತೊರಿರುವುದು ಸಂತಸದ ಸಂಗತಿಯಾಗಿದೆ ಎಂದರು. ಆದಿಲ್ ಶಾಹಿ ಕಾಲದಲ್ಲಿ ನಾಣ್ಯ ಮುದ್ರಣ ಮಾಡುವ ಕಾರ್ಯವನ್ನು ಸಹ ಈ ಸಮಾಜದವರು ಮಾಡಿದ್ದಾರೆ ಅಂತಹ ಸೂಕ್ಷ್ಮ ಕಾರ್ಯ ನೊಡಿದ ಆದಿಲ್‍ಶಾಹಿ ಅವರು ದಿನನ್ನು ಕೊಡುತ್ತಾರೆ ಅದೇ ದಿನನ್ನು ನಾವು ಹಾಕುತ್ತೆವೆ. ತಿಂತಣಿ ಮೌನೇಶ್ವರನಿಗೂ ದಿನನ್ನು ಹಾಕುತ್ತೆವೆಂದು ಮೌನೇಶ್ವರವರ ಇತಿಹಾಸ ವಿವರಿಸಿದ ಅವರು ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರಿದ ಸಂದೇಶವನ್ನು ಮೈನೇಶ್ವರರು ಹಾಗೂ ಗಂಗಾಧರರು ಸಾರಿದ್ದಾರೆಂದು ಹೇಳಿದ ಅವರು ಮೌನೇಶ್ವರರು ಸಾಕಷ್ಟು ವಚನಗಳನ್ನು ಹೇಳಿದ್ದಾರೆ ಧ್ಯಾನ ಭಂಗ ಆಗದಂತೆ ಶಾಂತರೀತಿಯಿಂದ ನೀರು ಹರಿಯಬೇಕೆಂದು ಗಂಗೆಗೆ ಕೇಳಿಕೊಂಡ ಮೌನೇಶ್ವರರ ವಾಣಿ ಸತ್ಯವಾಗಿ ಶಾಂತರೀತಿಯಿಂದ ಹರಿಯುತ್ತಿರುವ ನದಿಯ ಕುರಿತು ವಿವರಿಸಿದರು.
  ಇನ್ನೊರ್ವ ಅಥಿತಿ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಅವರು ಮಾತನಾಡಿ ರೈತನ ಬೆನ್ನೆಲಬಾಗಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವಕರ್ಮ ಸಮಾಜ ಭಾಂದವರಾಗಿದ್ದಾರೆ ಅವರು ಮಾಡತ್ತಕ್ಕಂತಹ ಜನೋಪಯೋಗಿ ಕಾರ್ಯಗಳನ್ನು ನೊಡಿದರೆ ಎಷ್ಟು ವರ್ಣಿಸಿದರೂ ಸಾಲದೂ ಎಂದು ಈ ಸಮಾಜದ ಸೆವಾ ಕಾರ್ಯ ಕುರಿತು ಗುಣಗಾನ ಮಾಡಿದರು.
   ವಿಶೇಷ ಉಪನ್ಯಾಸ ನೀಡಿದ ಭಾರತ ಸರ್ಕಾರದ ದಿ ಶಿಪ್ಪಿಂಗ್ ಕಾರ್ಪರೇಷನ್ ಆಫ್ ಇಂಡಿಯಾದ ನಿರ್ದೆಶಕರಾದ ಶ್ರೀಕಾಂತ ಪತ್ತಾರವರು ಮಾತನಾಡಿ ಸರ್ವರಿಗೆ ಆಭರಣವನ್ನು ಮಾಡಿಕೊಟ್ಟು ಅವರವರ ಸೌಂದರ್ಯವನ್ನು ಹೆಚ್ಚಿಸಲೂ ಅನುವು ಮಾಡಿಕೊಟ್ಟಿದ್ದಲ್ಲದೆ ರಾಜ ಮಹಾರಾಜರಿಗೆ ಅರಮನೆಯನ್ನು ಕಟ್ಟಿಕೊಟ್ಟಿದ್ದ ಸಮಾಜ ವಿಶ್ವಕರ್ಮ ಸಮಾಜವಾಗಿದೆ ಎಂದು ವಿಶ್ವವನ್ನೆ ಕರ್ಮ ಭೂಮಿಯನ್ನಾಗಿಸಿ ಕೊಂಡವರು ವಿಶ್ವಕರ್ಮರಾಗಿದ್ದು ಎಲ್ಲರಲ್ಲಿಯೂ ಒಂದೇ ಎಂಬಭಾವನೆ ಬರಬೇಕು ಇಲ್ಲದೆದ್ದರೆ ಸಮಾಜ ಮೇಲ್ಮಟ್ಟಕ್ಕೆರಲು ಸಾಧ್ಯವಿಲ್ಲವೆಂದರು.
   ಸಾಹಿತಿ ಮನು ಪತ್ತಾರವರು ಪ್ರಾಸ್ಥಾವಿಕ ಮಾತನಾಡಿದರು. ವೇದಿಕೆಯ ಮೇಲೆ ಪ.ಪೂ.ಶ್ರೀ ಪಂಪಾಪತಿ ಮಹಾಸ್ವಾಮಿಗಳು,ಪ.ಪೂ.ಶ್ರೀ ಮಹೇಶ್ವರಾನಂದತೀರ್ಥ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು.ಗಣ್ಯರಾದ ಬಸನಗೌಡ ಪಾಟೀಲ, ಡಾ.ಶಂಕರಗೌಡ ಪಾಟೀಲ, ಅಥಿತಿಗಳಾಗಿ ಎಸ್.ಎಸ್.ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ, ಪ್ರಭುಗೌಡ ಬಿರಾದಾರ ಅಸ್ಕಿ ಮಲ್ಲಣ್ಣ ತಾರನಾಳ, ಪ್ರಭಾಕರ ಬಡಿಗೇರ, ಆರ್,ಆರ್ ಬಡಿಗೇರ, ಶ್ರೀಮತಿ ಸಹನಾ ಬಡಿಗೇರ, ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಹಾಗೂ ವಿರುಪಾಕ್ಷಿ ಪತ್ತಾರ ಹಾಗೂ ತಾಳಿಕೋಟೆ ತಾಲೂಕ ನೂತನ ಪಧಾದಿಕಾರಿಗಳಾದ ಪ್ರಭಾಕರ ಪತ್ತಾರ ರವೀಂದ್ರ ಬಡಿಗೇರ, ಮಂಜುನಾಥ ಬಡಿಗೇರ, ಗಂಗಾಧರ ಪತ್ತಾರ, ಸೋಮಸಾಥ ಬಡಿಗೇರ, ತಾಲೂಕ ಯುವ ಘಟಕದ ಭೀಮಾಶಂಕರ ಪತ್ತಾರ, ಗುರುರಾಜ ಬಡಿಗೇರ, ಮೌನೇಶ ಪತ್ತಾರ, ಮೌನೇಶ ಕೆ ಪತ್ತಾರ, ಮೊದಲಾದವರು ಉಪಸ್ಥಿತರಿದ್ದರು.
  ಕಾಳಪ್ಪ ಇವಣಗಿ ಶಿರಸಂಗಿ ಸಿರಿ ಪ್ರಶಸ್ತಿ ಪುರಸ್ಕøತರು ಹಾಗೂ ಅವರ ಸಂಗಡಿಗರಿಂದ ವಿಶೇಷ ಕಾರ್ಯಕ್ರಮ ಜರುಗಿತು. ಕುಮಾರಿ ಪಲ್ಲವಿ ವಿಶ್ವಕರ್ಮ ಭರತನಾಟ್ಯ ಪ್ರದರ್ಶಿಸಿದರು. ತಾ.ಅಧ್ಯಕ್ಷ ಪ್ರಭಾಕರ ಬಡಿಗೇರ ಸ್ವಾಗತಿಸಿ ವಂದಿಸಿದರು. ಶಿಕ್ಷಕ ಅಶೋಕ ಹಂಚಲಿ ಶಿಕ್ಷಕಿ ಸುಮಂಗಳಾ ಕೋಳೂರವರು ಕಾರ್ಯಕ್ರ ನಿರೂಪಿಸಿದರು.